ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನೀರು ಬಿಡುವುದು ಭಾರಿ ಕಷ್ಟ' ದೆಹಲಿಯಲ್ಲಿ ಸಿದ್ದರಾಮಯ್ಯ ಹೇಳಿಕೆ

By Mahesh
|
Google Oneindia Kannada News

ನವದೆಹಲಿ, ಸೆ. 22: ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನದಿ ನೀರು ಕುರಿತು ಗುರುವಾರ ಸಂಜೆ ಚರ್ಚಿಸಿದರು. ಸಿದ್ದರಾಮಯ್ಯ ಅವರ ಜತೆಗೆ ಸಚಿವರಾದ ಎಂಬಿ ಪಾಟೀಲ್, ಡಿಕೆ ಶಿವಕುಮಾರ್ , ಟಿಬಿ ಜಯಚಂದ್ರ ಮುಂತಾದವರಿದ್ದರು.

ಕಾವೇರಿ ನದಿ ನೀರು ಹಂಚಿಕೆ ವಿಷಯವಾಗಿ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪಾಲಿಸಲು ಇರುವ ತೊಂದರೆಗಳು, ರಾಜ್ಯದ ಅಣೆಕಟ್ಟುಗಳಲ್ಲಿರುವ ನೀರಿನ ಪ್ರಮಾಣ ಹಾಗೂ ಮುಂಬರುವ ಎರಡು ಋತುಗಳಿಗೆ ನೀರಿನ ಬೇಡಿಕೆ ಬಗ್ಗೆ ಉಮಾಭಾರತಿ ಅವರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚಿಸಿದ್ದಾರೆ. [ಸಿದ್ದರಾಮಯ್ಯ ಅವರಿಗೆ ನಾಲ್ಕು ಸಲಹೆ ನೀಡಿದ ಎಸ್ಸೆಂ ಕೃಷ್ಣ]

Cauvery disupute: Karnataka CM Siddaramaiah meets Union Water minister Uma Bharti

ಜಲವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸೆ.20ರಂದು ನೀಡಿದ ಆದೇಶವನ್ನು ಪಾಲಿಸಲು ಸಾಧ್ಯವಿಲ್ಲ. ಪ್ರತಿ ದಿನ 6,000 ಕ್ಯೂಸೆಕ್ಸ್ ನೀರು ತಮಿಳುನಾಡಿಗೆ ಹರಿಸಲು ನಮ್ಮಲ್ಲಿ ಅಷ್ಟು ಪ್ರಮಾಣ ನೀರಿನ ಸಂಗ್ರಹವಿಲ್ಲ. ಈ ನಿಟ್ಟಿನಲ್ಲಿ ನೀರು ಬಿಡದಿರಲು ರಾಜ್ಯದಲ್ಲಿ ಒಕ್ಕೊರಲ ನಿಲುವು ತೆಗೆದುಕೊಳ್ಳಲಾಗಿದೆ. ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.[ಸುಪ್ರೀಂ ಆದೇಶ ವಿರುದ್ಧ ನಿಂತರೆ, ಕರ್ನಾಟಕದ ಗತಿ ಏನು?]

ಸಿದ್ದರಾಮಯ್ಯ ಹೇಳಿದ್ದಿಷ್ಟು: ನೀರು ಬಿಡುವುದು ಭಾರಿ ಕಷ್ಟ. ಸುಪ್ರೀಂ ಆದೇಶದಂತೆ ಇಲ್ಲಿ ತನಕ 12 ಸಾವಿರ ಕ್ಯೂಸೆಕ್ಸ್ ಬದಲು 14 ಕ್ಯೂಸೆಕ್ಸ್ ನೀರು ಬಿಟ್ಟಿದ್ದೇವೆ.[ಸರ್ವಪಕ್ಷ ಸಭೆ ಬಹಿಷ್ಕಾರ: ಬಿಜೆಪಿ ನಾಯಕರೇ ನೀವಿಟ್ಟ ಹೆಜ್ಜೆ ತಪ್ಪು!]

ನಾಲ್ಕು ಅಣೆಕಟ್ಟಿನಿಂದ 26 ಟಿಎಂಸಿ ಅಡಿ ನೀರು ಮಾತ್ರ ಇದೆ. ಮುಂದಿನ ಎರಡು ತಿಂಗಳುಗಳಿಗೆ ಮಾತ್ರ ಕುಡಿಯುವ ನೀರು ಸಾಕಾಗುತ್ತದೆ. ಬೆಂಗಳೂರು, ಮೈಸೂರು, ಮಂಡ್ಯಗಳಿಗೆ ಕುಡಿಯುವ ನೀರಿಗಾಗಿ 27 ಟಿಎಂಸಿ ಅಡಿ ನೀರು ಬೇಕು. ಅಲ್ಲಿ ಮೆಟ್ಟೂರ್ ಅಣೆಕಟ್ಟಿನಲ್ಲಿ 52 ಟಿಎಂಸಿ ಅಡಿ ನೀರಿದೆ. ಅವರಿಗೆ ನೀರಾವರಿಗೆ ಮಾತ್ರ ಕಾವೇರಿ ಬೇಕು. ನಮಗೆ ಕುಡಿಯುವುದಕ್ಕೇ ನೀರಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದರು.

English summary
Cauvery dispute: Karnataka CM Siddaramaiah meets Union Water minister Uma Bharti in New Delhi today(September 22).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X