'500, 1000 ರುಪಾಯಿ ಹಳೇ ನೋಟುಗಳ ಬದಲಾವಣೆಗೆ ಅವಕಾಶ ನೀಡಕ್ಕಾಗಲ್ಲ'

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಜುಲೈ 17 : 500 ಹಾಗೂ 1000 ರುಪಾಯಿಗಳ ಹಳೇ ನೋಟುಗಳ ಬದಲಾವಣೆಗೆ ಹೆಚ್ಚಿನ ಕಾಲಾವಕಾಶ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಸೋಮವಾರ ಸುಪ್ರೀಂ ಕೋರ್ಟ್ ಗೆ ಸ್ಪಷ್ಟವಾದ ಮಾತುಗಳಲ್ಲಿ ತಿಳಿಸಿದೆ.

500, 1000 ರುಪಾಯಿ ನೋಟು ರದ್ದು ನಿರ್ಧಾರದ ಹಿಂದಿರುವ ವ್ಯಕ್ತಿ ಯಾರು?

500 ಹಾಗೂ 1000 ರುಪಾಯಿಗಳ ಹಳೇ ನೋಟುಗಳನ್ನು ಬದಲಾಯಿಸಲು ಡಿಸೆಂಬರ್ 30, 2016ರವರೆಗೆ ಅವಕಾಶ ನೀಡಲಾಗಿತ್ತು. ಸುಪ್ರೀಂ ಕೋರ್ಟ್ ಗೆ ಈ ಬಗ್ಗೆ ಅಫಿಡವಿಟ್ ಸಲ್ಲಿಸಿದ್ದು, ಅಪನಗದೀಕರಣದ ಉದ್ದೇಶವೇ ಕಪ್ಪುಹಣವನ್ನು ತೊಲಗಿಸುವುದು. ಇದೀಗ ಮತ್ತೆ ಅವಕಾಶ ನೀಡಿದರೆ ಆ ಉದ್ದೇಶವೇ ವಿಫಲವಾಗುತ್ತದೆ ಎಂದು ತಿಳಿಸಲಾಗಿದೆ.

Demonetisation

ಬೇನಾಮಿ ವ್ಯವಹಾರದವರು ಮತ್ತು ಯಾರದೋ ಪರವಾಗಿ ಹಣ ಬದಲಾಯಿಸುವವರು ಹೆಚ್ಚಾಗುತ್ತಾರೆ. ಆಗ ಯಾವುದು ಅಸಲಿ-ಸಾಚಾ ಎಂದು ಕಂಡುಹಿಡಿಯುವುದೇ ಕಷ್ಟವಾಗುತ್ತದೆ. ಆದ್ದರಿಂದ ಹಳೆ ನೋಟುಗಳ ಬದಲಾವಣೆಗೆ ಕಾಲಾವಧಿ ವಿಸ್ತರಿಸುವಂತೆ ಕೇಳಿರುವ ಅರ್ಜಿಯನ್ನು ವಜಾ ಮಾಡುವಂತೆ ಮನವಿ ಮಾಡಲಾಯಿತು.

ಹಳೆ ನೋಟುಗಳ ಬದಲಾವಣೆಗೆ ಇನ್ನೊಂದು ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್ ಜುಲೈ ನಾಲ್ಕರಂದು ಕೇಳಿತ್ತು. ಅದಕ್ಕೆ ಉತ್ತರವಾಗಿ ಕೇಂದ್ರ ಸರಕಾರ ಪ್ರತಿಕ್ರಿಯೆ ನೀಡಿದೆ. ಯಾರಿಗೆ ಹಣ ಬದಲಾಯಿಸಿಕೊಳ್ಳಲು ಆಗಿರುವುದಿಲ್ಲವೋ ಮತ್ತು ಅದಕ್ಕೆ ಒಪ್ಪಬಹುದಾದ ಕಾರಣ ನೀಡುತ್ತಾರೋ ಅಂಥವರಿಗೆ ಒಂದು ಅವಕಾಶ ನೀಡಲು ಪರಿಗಣಿಸಬಹುದು ಎಂದು ಸಲಹೆ ಮಾಡಿತ್ತು.

One More Chance To Deposit Old 500 And 1,000 Rupee Notes ? | Oneindia Kannada

ಅಷ್ಟೇ ಅಲ್ಲ, ಇದಕ್ಕೆ ಒಪ್ಪಲ್ಲಿಲ್ಲ ಅಂದರೆ ಆದೇಶವನ್ನೇ ಹೊರಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೂಡ ನೀಡಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
New Delhi, July 17: The Centre told the Supreme Court on Monday it cannot give more time to deposit old currency notes, refusing any breather to those who could not deposit old Rs 500 and Rs 1000 notes by the December 30, 2016 deadline.
Please Wait while comments are loading...