ಆಮ್ಲಜನಕ ಅಕ್ರಮ ಸಂಗ್ರಹ; ಉದ್ಯಮಿ ನವನೀತ್ ಕಲ್ರಾ ಬಂಧನ
ನವದೆಹಲಿ, ಮೇ 17: ಆಮ್ಲಜನಕ ಅಕ್ರಮ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನವನೀತ್ ಕಲ್ರಾ ಅವರನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಒಂದು ವಾರದಿಂದಲೂ ಕಲ್ರಾ ತಲೆಮರೆಸಿಕೊಂಡಿದ್ದರು.
ಕಲ್ರಾ ಮಾಲೀಕತ್ವದ ಖಾನ್ ಚಾಚಾ, ಟೌನ್ ಹಾಲ್ ಮತ್ತು ನೇಜ್ ಅಂಡ್ ಜು ಎಂಬ ಮೂರು ರೆಸ್ಟೊರೆಂಟ್‌ಗಳಲ್ಲಿ ಕಾನೂನು ಬಾಹಿರವಾಗಿ ಸಂಗ್ರಹಿಸಿಡಲಾಗಿದ್ದ 524 ಆಮ್ಲಜನಕ ಸಿಲಿಂಡರ್‌ಗಳನ್ನು ಮೇ 7ರಂದು ವಶಪಡಿಸಿಕೊಳ್ಳಲಾಗಿತ್ತು.
ಆನಂತರ ಕಲ್ರಾ ತಲೆ ಮರೆಸಿಕೊಂಡಿದ್ದು, ಜಾಮೀನಿಗೆ ದೆಹಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. ದೆಹಲಿ ಹೈಕೋರ್ಟ್‌ಗೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೂ ಜಾಮೀನು ದೊರೆತಿರಲಿಲ್ಲ.

ರೆಸ್ಟೊರೆಂಟ್‌ಗಳಲ್ಲಿದ್ದ ಆಮ್ಲಜನಕಗಳು ಚೀನಾದಿಂದ ತರಿಸಿಕೊಂಡಿದ್ದು, ಅದರನ್ನು 50 ರಿಂದ 70 ಸಾವಿರದವರೆಗೂ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಗುರುಗ್ರಾಮದ ತೋಟದ ಮನೆಯಲ್ಲಿ ಅಡಗಿಕೊಂಡಿದ್ದ ಕಲ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications