ಕೇಂದ್ರ ಬಜೆಟ್ 2021: ಏಳು ಬಂದರು ಅಭಿವೃದ್ಧಿಗೆ ಯೋಜನೆ
ನವದೆಹಲಿ, ಫೆಬ್ರುವರಿ 01: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ 2021ನೇ ಸಾಲಿನ ಕೇಂದ್ರ ಬಜೆಟ್ ಘೋಷಿಸಿದ್ದು, 2000 ಕೋಟಿ ರೂಪಾಯಿ ಹೂಡಿಕೆ ಮೌಲ್ಯದ ಏಳು ಬಂದರು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
ಸಾರ್ವಜನಿಕ ಹಾಗೂ ಖಾಸಗಿ ಪಾಲುದಾರಿಕೆಯ ಮಾದರಿಯಲ್ಲಿ ಈ ಬಂದರು ಯೋಜನೆಗಳನ್ನು ಕೈಗೊಳ್ಳಲಾಗುವುದು. ಸುಮಾರು 2000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮೌಲ್ಯದ ಬಂದರು ಯೋಜನೆಗಳು ಇವಾಗಿವೆ ಎಂದು ಬಜೆಟ್ ಮಂಡನೆ ಸಮಯ ಸೀತಾರಾಮನ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಅಧೀನದಲ್ಲಿ ಭಾರತದಲ್ಲಿ ಹನ್ನೆರಡು ಬೃಹತ್ ಬಂದರುಗಳಿವೆ. ದೀನದಯಾಳ್, ಮುಂಬೈ, ಜೆಎನ್ ಪಿಟಿ, ಮರ್ಮಾಗೋವಾ, ಮಂಗಳೂರು, ಕೊಚ್ಚಿ, ಚೆನ್ನೈ, ಕಾಮರಾಜರ್, ವಿಒ ಚಿದಂಬರ್ ನಾರ್, ವಿಶಾಖಪಟ್ಟಣಂ, ಪರದೀಪ್, ಕೋಲ್ಕತ್ತಾ ಸೇರಿದಂತೆ ಹನ್ನೆರಡು ಬಂದರುಗಳಿವೆ. ಇದರಲ್ಲಿ ಏಳು ಬಂದರುಗಳ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.












Click it and Unblock the Notifications