ಭಾರತೀಯ ಸೇನೆಗೆ ಸುಧಾರಿತ 'ಬ್ರಹ್ಮೋಸ್' ಕ್ಷಿಪಣಿ ಶೀಘ್ರ ಸೇರ್ಪಡೆ

ನವದೆಹಲಿ, ಏ.10: ಭಾರತೀಯ ಸೇನೆಗೆ 'ಬ್ರಹ್ಮೋಸ್' ಸುಧಾರಿತ ಕ್ಷಿಪಣಿ ಸೇರ್ಪಡೆಯಾಗಲಿದೆ.

ಇದು ಅತ್ಯಂತ ಯಶಸ್ವಿ ಹಾಗೂ ಪ್ರಬಲ ಕ್ಷಿಪಣಿಯಾಗಿದೆ. ಈ ಕುರಿತು ಬ್ರಹ್ಮೋಸ್‌ ಏರೋಸ್ಪೇಸ್‌ ಕಂಪೆನಿಯ ಆಡಳಿತ ಸಹ ನಿರ್ದೆಶಕ ಅಲೆಕ್ಸಾಂಡರ್‌ ಮಾಸ್ಕಿವ್‌ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿ, 'ಪ್ರಸ್ತುತ ಬ್ರಹ್ಮೋಸ್‌ ನ ಗರಿಷ್ಠ ವೇಗ 2.8 ಮ್ಯಾಕ್‌ ಗಳಷ್ಟಾಗಿದ್ದರೆ ಭವಿಷ್ಯದಲ್ಲಿ ಈ ವೇಗವನ್ನು 4.5 ಮ್ಯಾಕ್‌ ಗೆ ಹೆಚ್ಚಿಸಲಾಗುವುದು ಎಂದರು.

ಬ್ರಹ್ಮೋಸ್‌ ನ ಪ್ರಸ್ತುತ ಗುರಿ ಸಾಮರ್ಥ್ಯ 400 ಕಿಲೋಮೀಟರ್‌ ಗಳಾಗಿದ್ದು, ಇದನ್ನು 500 ಕಿಲೋಮೀಟರ್‌ ಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದರ ಗುರಿ ಬೇಧನಾ ಸಾಮರ್ಥ್ಯದ ಜೊತೆಜೊತೆಗೆ ಹೈಪರ್ ಸೌಂಡ್‌ ವಿಧಾನದ ಮೂಲಕ ಈ ಕ್ಷಿಪಣಿಯ ವೇಗವರ್ಧನೆಗೂ ನಿರ್ಧರಿಸಲಾಗಿದೆ ಎನ್ನಲಾಗಿದೆ.

Boost for Indias defence BrahMos

ಭಾರತ ಮತ್ತು ರಷ್ಯಾ ಜಂಟಿಯಾಗಿ ತಯಾರಿಸುತ್ತಿರುವ ಸೂಪರ್‌ ಸಾನಿಕ್‌ ಕ್ರೂಸ್‌ ಮಿಸೈಲ್‌ ಬ್ರಹ್ಮೋಸ್‌ ನ ಗುರಿ ಬೇಧನಾ ಸಾಮರ್ಥ್ಯವನ್ನು ಹೆಚ್ಚಿಸಲು ಕ್ಷಿಪಣಿ ತಯಾರಿಕಾ ಕಂಪೆನಿ ಬ್ರಹ್ಮೋಸ್‌ ಏರೋಸ್ಪೇಸ್‌ ಕಂಪೆನಿ ನಿರ್ಧರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ನೂತನ ಕ್ಷಿಪಣಿಯನ್ನು ಪ್ರಮುಖವಾಗಿ ಭಾರತೀಯ ವಾಯುಪಡೆಗೆಂದೇ ತಯಾರಿಸಲಾಗುತ್ತಿರುವುದು ವಿಶೇಷ. ಭಾರತೀಯ ವಾಯುಪಡೆಯ ಸುಖೋಯ್‌ 30 ಎಂ.ಕೆ.ಐ. ಹಾಗೂ ತೇಜಸ್‌ ಲಘು ಯುದ್ಧ ವಿಮಾನಗಳಿಗೆ ಹೊಂದಿಕೊಳ್ಳುವ ಮಾದರಿಯಲ್ಲಿ ಈ ಕ್ಷಿಪಣಿಗಳನ್ನು ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+