ರೈಲ್ವೆ ಬೋಗಿಗೆ ಶೀಘ್ರ ಬ್ಲ್ಯಾಕ್‌ಬಾಕ್ಸ್ ಉಪಕರಣ ಅಳವಡಿಕೆ
ಲಖ್ನೌ, ಮೇ 13: ವಿಮಾನದಲ್ಲಿ ಅಳವಡಿಸಲಾಗುವ ಬ್ಲ್ಯಾಕ್‌ಬಾಕ್ಸ್ ಮಾದರಿಯ ಉಪಕರಣವನ್ನು ರೈಲಿನ ಬೋಗಿಗಳಲ್ಲೂ ಅಳವಡಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.
ಈ ಸ್ಮಾರ್ಟ್ ಬೋಗಿಗಳನ್ನು ರೀಸರ್ಚ್ ಡಿಸೈನ್ಸ್ ಅಂಡ್ ಸ್ಟಾಂಡರ್ಡ್ಸ್ ಆರ್ಗನೈಸೇಷನ್ ನ ಪರಿಶೀಲನೆಗಾಗಿ ರವಾನಿಸಿದೆ. ಈ ಬ್ಲಾಕ್‌ಬಾಕ್ಸ್‌ನಿಂದ ರೈಲು ಅಪಘಾತ ತಡೆಯಬಹುದಾಗಿದೆ.
ರೈಲು ಸಾಗುವಾಗ ಹಳಿಗಳ ನಿಗಾ ಇಡುವುದು, ಎಂಜಿನ್ ಸದ್ದಿನಲ್ಲಿನ ವ್ಯತ್ಯಾಸ ಮತ್ತಿತರ ಅಂಶಗಳನ್ನು ಗುರುತಿಸಿ ಬ್ಲ್ಯಾಕ್‌ಬಾಕ್ಸ್ ಅಪಾಯದ ಮುನ್ಸೂಚನೆ ನೀಡುತ್ತದೆ. ಹಳಿಯಲ್ಲಿ ದೋಷವಿದ್ದರೆ ಅದನ್ನು ದುರಸ್ತಿಗೊಳಿಸಲು ಹಳಿ ನಿರ್ವಹಣಾ ತಂಡಕ್ಕೆ ಸೂಚನೆ ರವಾನಿಸುತ್ತದೆ.

ಶಾರ್ಟ್ ಸರ್ಕ್ಯೂಟ್ ಆತಂಕವಿಲ್ಲ: ಬೋಗಿಗಳಲ್ಲಿನ ವೈರಿಂಗ್, ಕೇಬಲ್‌ಗಳು ಮತ್ತು ಕನೆಕ್ಟರ್‌ಗಳ ಕಾರ್ಯನಿರ್ವಹಣೆಯನ್ನೂ ಬ್ಲ್ಯಾಕ್‌ಬಾಕ್ಸ್ ಗಮನಿಸುತ್ತಿದೆ. ತಾಪಮಾನದಲ್ಲಿ ಸ್ವಲ್ಪ ಏರಿಕೆಯಾದರೂ, ಕೂಡಲೇ ಈ ಬಗ್ಗೆ ಮಾಹಿತಿ ರವಾನಿಸಿ, ದುರಸ್ತಿಗೊಳಿಸುವಂತೆ ಸೂಚಿಸುತ್ತದೆ. ಇದರಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ತಪ್ಪುತ್ತದೆ.
ಬೋಗಿಗಳಲ್ಲಿ ಸ್ಮಾರ್ಟ್ ಸಿಸಿ ಕ್ಯಾಮರಾಗಳನ್ನು ಅಳವಡಸಸಲು ನಿರ್ಧರಿಸಲಾಗಿದೆ. ಪ್ರಯಾಣಿಕರಿಗೆ ಮಾಹಿತಿ ರವಾನಿಸುವ ಜತೆಗೆ, ಇನ್ಫೋಟೇನ್ಮೆಂಟ್ ಸೌಲಭ್ಯವನ್ನೂ ಒದಗಿಸುತ್ತದೆ. ವೈಫೈ ಸೌಲಭ್ಯ ಕಲ್ಪಿಸಲು ಅನುಕೂಲ ಮಾಡಿಕೊಡುತ್ತದೆ.











Click it and Unblock the Notifications