ಮೋದಿ ಕಾಂಗ್ರೆಸ್ ಸಭೆಯಲ್ಲಿ ಚಹಾ ಮಾರೋಕ್ಕೆ ಲಾಯಕ್ಕು

BJP Prime Minister candidate Narendra Modi can sell tea at AICC meet - Mani Shankar Aiyar
ನವದೆಹಲಿ, ಜ.17- ಇತ್ತ ಬಿಜೆಪಿಯ ಪ್ರಧಾನಿ ಆಕಾಂಕ್ಷಿ ನರೇಂದ್ರ ಮೋದಿಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿರುವ ಹೊತ್ತಿನಲ್ಲೇ ಅತ್ತ ಕಾಂಗ್ರೆಸ್ ಪಕ್ಷವು ಮತ್ತೆ ಅವರನ್ನು ಜರಿದಿದೆ.

ಈ ಹಿಂದೆ ಚಹಾ ಮಾರುವವರು ದೇಶದ ಪ್ರಧಾನಿ ಹುದ್ದೆಗೇರಲು ನಾಲಾಯಕ್‌ ಎಂದು ಸಮಾಜವಾದಿ ಪಕ್ಷದ ಸಂಸದ ನರೇಶ್‌ ಅಗರ್‌ವಾಲ್‌ ಮೋದಿ ಕುರಿತು ಹೇಳಿದ್ದರು. ಇದೀಗ ಕಾಂಗ್ರೆಸ್ಸಿನ ನಾಯಕರು ಈಗ ಇನ್ನೂ ಒಂದು ಮೆಟ್ಟಿಲು ಕೆಳಗೆ ಜಾರಿದ್ದು 'ಮೋದಿ ಎಂದಿಗೂ ಪ್ರಧಾನಿ ಯಾಗೊಲ್ಲ. ಆತ ಏನಿದ್ದರೂ ಕಾಂಗ್ರೆಸ್ ಕಚೇರಿಯಲ್ಲಿ ಚಹಾ ಮಾರುವ ವ್ಯಕ್ತಿಯಾಗಬಹುದು' ಎಂದು ಹೇಳಿದ್ದಾರೆ.

ಕಾಂಗ್ರೆಸ್ಸಿನ ಹಿರಿಯ ನಾಯಕ, ರಾಜ್ಯಸಭೆ ಸದಸ್ಯ ಮಣಿ ಶಂಕರ್ ಅಯ್ಯರ್ ಅವರು ಇಂದು AICC ಸಮಾವೇಶದಲ್ಲಿ ಮಾತನಾಡುತ್ತಾ ಮೋದಿ ಬಗ್ಗೆ ಹೀಗೆ ಹೇಳಿದ್ದಾರೆ.

ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಮೋದಿ ಬಗ್ಗೆ ಮುರುಕೊಂಡು ಬಿದ್ದ ಮಣಿಶಂಕರ್ ಅಯ್ಯರ್ 'ಆತ ಪ್ರಧಾನಿ ಹುದ್ದೆಗೆ ಏರುವುದು ಕನಸಿನ ಮಾತು. ನನ್ನ ಮಾತನ್ನು ಕೇಳಿ. 21ನೇ ಶತಮಾನದಲ್ಲಿ ಆತ ಎಂದಿಗೂ ಪ್ರಧಾನಿಯಾಗಲಾರ. ಬೇಕಾದರೆ ಇಲ್ಲೀಗ ನಡೆಯುತ್ತಿರುವ ಮಹಾಧಿವೇಶನಕ್ಕೆ ಬಂದು ಆತ ಚಹಾ ಮಾರಾಟ ಮಾಡಬಹುದು. ಅದಕ್ಕೆ ನಾವು ವ್ಯವಸ್ಥೆ ಮಾಡುತ್ತೇವೆ' ಎಂದಿದ್ದಾರೆ.

'ಮಣಿ ಶಂಕರ್ ಅಯ್ಯರ್ ಅಂತಹ ವ್ಯಕ್ತಿಯಿಂದ ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ?' ಎಂದು ಬಿಜೆಪಿ ವಕ್ತಾರರು ತಕ್ಷಣಕ್ಕೆ ಪ್ರತಿಕ್ರಿಯಿಸಿದ್ದಾರೆ.

ಇನ್ನು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಮೋದಿ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆಯನ್ನು ಖಂಡಿಸಿದ್ದಾರೆ: 'ಮೋದಿ ಬಗ್ಗೆ ಅನೇಕ ನಕಾರಾತ್ಮಕ ಅಂಶಗಳಿವೆ. ಆದರೆ ಆತನ ಬಾಲ್ಯ ನಿಜಕ್ಕೂ ಬಡತನದಿಂದ ಕೂಡಿತ್ತು. ಅದನ್ನು ಯಾರೂ ಅಲ್ಲಗಳೆಯಲಾರರು. ಅಂತಹ ವ್ಯಕ್ತಿಯನ್ನು ದೂಷಿಸುವ ಮೂಲಕ ಬಹುಶಃ ನಾವು ನಮ್ಮ ಪ್ರಚಾರಕ್ಕೆ ಸಂಚಕಾರ ತಂದುಕೊಳ್ಳೂತ್ತಿದ್ದೇವನೋ' ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+