ಪ್ರತಿಭಟನೆ ವೇಳೆ ಬಿಜೆಪಿ ಸಂಸದ ಮನೋಜ್ ತಿವಾರಿಗೆ ಗಾಯ: ಆಸ್ಪತ್ರೆಗೆ ದಾಖಲು
ನವದೆಹಲಿ, ಅಕ್ಟೋಬರ್ 12: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮನೆಯ ಮುಂದೆ ಇಂದು ಪ್ರತಿಭಟನೆ ವೇಳೆ ಬಿಜೆಪಿ ಸಂಸದ ಮನೋಜ್ ತಿವಾರಿ ಗಾಯಗೊಂಡಿದ್ದಾರೆ. ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಮನೋಜ್ ತಿವಾರಿ (50) ಕೆಳಗೆ ಬಿದ್ದಿರುವ ಹಾಗೂ ಅವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದ ಬೆಂಬಲಿಗರಿಂದ ಸುತ್ತುವರಿದ ದೃಶ್ಯಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿವೆ.
ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ನದಿ ತೀರದಲ್ಲಿ ಛಠ್ ಆಚರಣೆಗಳನ್ನು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ನಿಷೇಧಿಸಿದೆ. ಡಿಡಿಎಂಎ ಆದೇಶದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಸೆಪ್ಟೆಂಬರ್ 30 ರ ಆದೇಶದಲ್ಲಿ ಹಬ್ಬಗಳ ಸಂದರ್ಭಗಳಲ್ಲಿ ಜಾತ್ರೆಗಳು ಮತ್ತು ಆಹಾರ ಮಳಿಗೆಗಳನ್ನು ನಿಷೇಧಿಸಿತ್ತು. ನಗರದಲ್ಲಿ ಛಠ್ ಕೂಟಗಳನ್ನು ನಿಷೇಧಿಸಿದ ದೆಹಲಿ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದರು.
ನಗರದಲ್ಲಿ ಛಠ್ ಕೂಟಗಳನ್ನು ನಿಷೇಧಿಸಿರುವ ದೆಹಲಿ ಸರ್ಕಾರದ ವಿರುದ್ಧ ಮನೋಜ್ ತಿವಾರಿ ಹಾಗೂ ಬೆಂಬಲಿಗರು ತಿರುಗಿ ಬಿದ್ದಿದ್ದು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನೆ ಮುಂದೆ ಪ್ರತಿಭಟಿಸುತ್ತಿದ್ದರು. ಪ್ರತಿಭಟನೆಯ ಮೊದಲು ಅವರು ಪ್ರತಿಭಟನೆಗೆ ಸೇರುವಂತೆ ಜನರಿಗೆ ಮನವಿ ಮಾಡಿದರು.
ಇನ್ನೊಂದು ವಿಡಿಯೋದಲ್ಲಿ ಮನೋಜ್ ತಿವಾರಿ ಅವರು ಪ್ರತಿಭಟನೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವುದು ಕಂಡು ಬರುತ್ತದೆ. ನಂತರ ಅವರು ಕೆಳಗೆ ಬಿದ್ದಿರುವ ದೃಶ್ಯಗಳು ವೈರಲ್ ಆಗಿವೆ. ಘಟನೆಯ ಬಳಿಕ ಉತ್ಸವದ ಮೇಲಿನ ನಿಷೇಧವನ್ನು ತೆಗೆದು ಹಾಕಲು ಎಎಪಿ ಸರ್ಕಾರ ಡಿಡಿಎಂಎ (ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಆಗ್ನೇಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ) ಗೆ ಪ್ರಸ್ತಾವನೆಯನ್ನು ಕಳುಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಡಿಡಿಎಂಎ ಕೊರೊನಾ ಮಾರ್ಗಸೂಚಿ:
ಕೊರೊನಾ ಮೂರನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಡಿಡಿಎಂಎ ಕೊರೊನಾ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಜಾತ್ರೆಗಳನ್ನು ಆಯೋಜಿಸುವಂತಿಲ್ಲ. ಯಾವುದೇ ಪ್ರಸಾದ ವಿತರಣೆ ಮಾಡುವಂತಿಲ್ಲ, ಗುಂಪುಗೂಡುವಿಕೆ ಮತ್ತು ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶವನ್ನು ನಿಷೇಧಿಸಲಾಗಿದೆ. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ನದಿಯ ದಡದಲ್ಲಿ ಛಠ್ ಪೂಜೆಯನ್ನು ಮಾಡುವುದನ್ನು ನಿರ್ಬಂಧಿಸಲಾಗಿದೆ. ಮಾತ್ರವಲ್ಲದೆ ಕೋವಿಡ್ ಹರಡುವುದನ್ನು ತಪ್ಪಿಸಲು ಛಠ್ ಆಚರಣೆಗಳನ್ನು ಈ ವರ್ಷ ನಿರ್ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಈ ಹಿಂದೆ ಹೇಳಿದ್ದರು.
मैं #ChhathVirodhiKejriwal के ख़िलाफ़ प्रदर्शन में पहुँचने वाला हुँ.. pic.twitter.com/48es7H88RL
— Manoj Tiwari 🇮🇳 (@ManojTiwariMP) October 12, 2021
ಮನೋಜ್ ತಿವಾರಿ ವಿರೋಧ:
ಈ ತಿಂಗಳ ಆರಂಭದಲ್ಲಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆದೇಶದ ವಿರುದ್ಧ ಮನೋಜ್ ತಿವಾರಿ ಕಿಡಿ ಕಾರಿದ್ದರು. "ದೆಹಲಿಯಲ್ಲಿ 1.8 ಕೋಟಿ ಜನರಿಗೆ ಲಸಿಕೆ ಹಾಕಲಾಗಿದ್ದರೆ, ಮಾರುಕಟ್ಟೆಗಳಿಂದ ಹಿಡಿದು ಮೆಟ್ರೋ, ಬಸ್, ಥಿಯೇಟರ್, ಮದ್ಯದ ಅಂಗಡಿಗಳು ಎಲ್ಲವೂ ತೆರೆದಿರುತ್ತವೆ. ಹಾಗಾದರೆ ಛತ್ ಅನ್ನು ಏಕೆ ಆಚರಿಸಲು ಸಾಧ್ಯವಿಲ್ಲ? ಇದಕ್ಕೆ ಮಾತ್ರ ಯಾಕೆ ಕೋವಿಡ್ ಪ್ರೋಟೋಕಾಲ್ ಅಂಟಿಕೊಳ್ಳುವುದು. ಅರವಿಂದ್‌ಕೆಜ್ರಿವಾಲ್ ಇದಕ್ಕೆ ನನಗೆ ತಕ್ಷಣದ ಪರಿಹಾರ ನೀಡಿ" ಎಂದು ಟ್ವೀಟ್ ಮಾಡಿದ್ದರು.
छठ महापर्व की विरोधी केजरीवाल सरकार के विरोध में दिल्ली भाजपा का मुख्यमंत्री आवास पर प्रचंड प्रदर्शन। @ManojTiwariMP @adeshguptabjp #ChhathVirodhiKejriwal https://t.co/bQfnywr9zL
— Office Of Manoj Tiwari🇮🇳 (@ManojTiwariOffc) October 12, 2021
ಜೊತೆಗೆ "ದೆಹಲಿ ಸರ್ಕಾರ ಈಜುಕೊಳಗಳನ್ನು ತೆರೆಯಲು ಅವಕಾಶ ನೀಡಿದೆ, ಆದರೆ ಛಠ್ ಪೂಜೆಯನ್ನು ನಿಷೇಧಿಸಿದೆ. ಜನರು ಹಬ್ಬದ ಸಮಯದಲ್ಲಿ ಛಠ್ ಪೂಜೆ ಮಾಡುವುದರಿಂದ ಮೊಣಕಾಲು ನೀರಿನಲ್ಲಿ ಮುಳುಗುತ್ತದೆ. ಕೊರೊನಾ ಮೊಣಕಾಲುಗಳಿಂದ ಬರುವುದಿಲ್ಲ. ಕೋವಿಡ್ ಮಾರ್ಗಸೂಚಿಗಳಲ್ಲಿ ಕೊರೊನಾ ಬಾಯಿ ಮತ್ತು ಮೂಗಿನ ಮೂಲಕ ಹರಡುತ್ತದೆ ಎಂದು ಹೇಳುತ್ತದೆ. ಮೊಣಕಾಲುಗಳಿಂದ ಅಲ್ಲ" ಎಂದು ಹರಿಹಾಯ್ದಿದ್ದರು.
ಅಕ್ಟೋಬರ್ 11ರಂದು ಈ ಸಮಯಕ್ಕೆ ದೆಹಲಿಯಲ್ಲಿ 23 ಹೊಸ ಕೊವಿಡ್ 19 ಪ್ರಕರಣಗಳು ಪತ್ತೆಯಾಗಿವೆ, ಯಾವುದೇ ವ್ಯಕ್ತಿ ಮೃತಪಟ್ಟಿಲ್ಲ, ಪಾಸಿಟಿವಿ ದರ ಶೇ 0.05ರಷ್ಟಿದೆ. ಒಟ್ಟಾರೆ, 14.13 ಲಕ್ಷಕ್ಕೂ ಅಧಿಕ ಮಂದಿ ಚೇತರಿಕೆ ಕಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.












Click it and Unblock the Notifications