ಕೇಜ್ರಿಗೆ ತಿರುಗೇಟು, ಮೋದಿ ಸರ್ಟಿಫಿಕೇಟ್ ಬಹಿರಂಗ

Posted By:
Subscribe to Oneindia Kannada

ನವದೆಹಲಿ, ಮೇ 09: ಪ್ರಧಾನಿ ನರೇಂದ್ರ ಮೋದಿ ಅವರ ವಿದ್ಯಾರ್ಹತೆ ಬಗ್ಗೆ ಪ್ರಶ್ನೆ ಮಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬಿಜೆಪಿ ಸೋಮವಾರ ತಿರುಗೇಟು ನೀಡಿದೆ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮೋದಿ ಅವರ ಬಿಎ, ಎಂಎ ಪ್ರಮಾಣ ಪತ್ರವನ್ನು ಪ್ರದರ್ಶನ ಮಾಡಿದ್ದಾರೆ.

ಮೋದಿ ಅವರು 1975- 77ರ ತುರ್ತು ಪರಿಸ್ಥಿತಿ ಅವಧಿಯಲ್ಲಿ ದೆಹಲಿ ವಿಶ್ವ ವಿದ್ಯಾಲಯದಿಂದ ಪದವಿ ಶಿಕ್ಷಣ ಪಡೆದಿದ್ದಾರೆ. ಮೋದಿ ಅವರ ವಿದ್ಯಾರ್ಹತೆ ಬಗ್ಗೆ ಸಂಶಯ ವ್ಯಕ್ತಪಡಿಸಿ, ಮೋದಿ ಅವರು ಪದವೀಧರರು ಎಂಬುದಕ್ಕೆ ದೆಹಲಿ ವಿವಿಯಲ್ಲಿ ದಾಖಲೆಯೇ ಇಲ್ಲ ಎಂದು ಕೇಜ್ರಿವಾಲ್ ಅವರು ಇತ್ತೀಚೆಗೆ ಆರೋಪಿಸಿದ್ದರು.

BJP displays Narendra Modi's BA, MA degree certificates, AAP says its Fake

'ದೆಹಲಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಸಂಘದ ನಾಯಕನಾಗಿದ್ದ ನನಗೆ ಮೋದಿ ಅವರ ಕಾಲೇಜು ಶಿಕ್ಷಣದ ಬಗ್ಗೆ ತಿಳಿದಿದೆ' ಎಂದು ಜೇಟ್ಲಿ ವಿವರಿಸಿದರು. ಆದರೆ, ಮೋದಿ ಅವರ ಸರ್ಟಿಫಿಕೆಟ್ ಎಲ್ಲವೂ ನಕಲಿ ಎಂದು ಆಮ್ ಅದ್ಮಿ ಪಕ್ಷದ ಮುಖಂಡ ಆಶುತೋಷ್ ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The BJP on Monday(May09) displayed Prime Minister Narendra Modi's BA and MA certificates(Delhi University) at a press conference in New Delhi following allegations by Aam Admi Party leader Arvind Kejriwal over the PM's educational qualifications.
Please Wait while comments are loading...