ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ, ಜಾರ್ಖಂಡ್ ಮತ್ತು ಉ.ಪ್ರದೇಶ ಭಾರತದ ಅತ್ಯಂತ ಬಡ ರಾಜ್ಯಗಳು: MPI ವರದಿ

|
Google Oneindia Kannada News

ನವದೆಹಲಿ ನವೆಂಬರ್ 26: ನೀತಿ ಆಯೋಗದ ಬಹು ಆಯಾಮದ ಬಡತನ ಸೂಚ್ಯಂಕ (MPI) ಬಡ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ಭಾರತದ ಅತ್ಯಂತ ಬಡ ರಾಜ್ಯಗಳಾಗಿ ಹೊರಹೊಮ್ಮಿವೆ.

ಸೂಚ್ಯಂಕದ (MPI) ಪ್ರಕಾರ, ಬಿಹಾರದಲ್ಲಿ ಶೇಕಡಾ 51.91ರಷ್ಟು ಜನ ಬಡವರಾಗಿದ್ದರೆ, ಜಾರ್ಖಂಡ್‌ನಲ್ಲಿ ಶೇಕಡಾ 42.16 ಮತ್ತು ಉತ್ತರ ಪ್ರದೇಶದಲ್ಲಿ ಶೇಕಡಾ 37.79 ರಷ್ಟು ಜನ ಬಡವರಾಗಿದ್ದಾರೆ. ಮಧ್ಯಪ್ರದೇಶ ಶೇ.36.65 ಮತ್ತು ಮೇಘಾಲಯ ಶೇ.32.67ರಷ್ಟಿದ್ದು ಈ ರಾಜ್ಯಗಳು ಮೊದಲ ಐದು ಸ್ಥಾನಗಳಲ್ಲಿವೆ. ಇನ್ನೂ ಕೇರಳ (ಶೇ. 0.71), ಗೋವಾ (ಶೇ. 3.76), ಸಿಕ್ಕಿಂ (ಶೇ. 3.82), ತಮಿಳುನಾಡು (ಶೇ. 4.89) ಮತ್ತು ಪಂಜಾಬ್ (ಶೇ. 5.59) ಭಾರತದಾದ್ಯಂತ ಕಡಿಮೆ ಬಡತನವನ್ನು ದಾಖಲಿಸಿವೆ ಮತ್ತು ಸೂಚ್ಯಂಕದಲ್ಲಿ ಕೆಳಭಾಗದಲ್ಲಿವೆ.

ವರದಿಯ ಪ್ರಕಾರ, ಭಾರತದ ರಾಷ್ಟ್ರೀಯ ಎಂಪಿಐ ಮಾಪನವೂ ಆಕ್ಸ್‌ಫರ್ಡ್ ಪಾವರ್ಟಿ ಮತ್ತು ಮಾನವ ಅಭಿವೃದ್ಧಿ ಉಪಕ್ರಮ(OPHI) ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(UNDP) ಅಭಿವೃದ್ಧಿಪಡಿಸಿದ ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ಮತ್ತು ದೃಢವಾದ ವಿಧಾನವನ್ನು ಬಳಸುತ್ತದೆ.

Bihar, Jharkhand and Uttar Pradesh are the poorest states in India: MPI Report

ವರದಿಯ ಪ್ರಕಾರ, ಭಾರತದ MPI ಮೂರು ವಿಷಯಗಳ ಆಧಾರದ ಮೇಲೆ ಈ ಸರ್ವೇಯನ್ನು ಮಾಡಿದೆ. ಆರೋಗ್ಯ, ಶಿಕ್ಷಣ ಮತ್ತು ಜೀವನ ಮಟ್ಟ ಆಧಾರದ ಮೇಲೆ ಈ ಸಂಶೋಧನೆ ಮಾಡಲಾಗಿದೆ. ಇವುಗಳನ್ನು 12 ಸೂಚಕಗಳು ಪ್ರತಿನಿಧಿಸುತ್ತವೆ. ಜೊತೆಗೆ ಪೋಷಣೆ, ಮಗು ಮತ್ತು ಹದಿಹರೆಯದವರ ಮರಣ, ಪ್ರಸವಪೂರ್ವ ಆರೈಕೆ, ಶಾಲಾ ವರ್ಷಗಳು, ಶಾಲಾ ಹಾಜರಾತಿ, ಅಡುಗೆ ಇಂಧನ, ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್, ವಸತಿ, ಆಸ್ತಿಗಳು ಮತ್ತು ಬ್ಯಾಂಕ್ ಖಾತೆಗಳು ಆಧಾರದ ಮೇಲೆ ಈ ವರದಿ ಹೊರಬಂದಿದೆ.

ಆರೋಗ್ಯ ಮತ್ತು ಪೋಷಣೆ, ಶಿಕ್ಷಣ ಮತ್ತು ಜೀವನ ಮಟ್ಟ ಮುಂತಾದ ಕ್ಷೇತ್ರಗಳನ್ನು ಒಳಗೊಂಡಿರುವ 12 ಪ್ರಮುಖ ಅಂಶಗಳನ್ನು ಬಳಸಿಕೊಂಡು ರಾಷ್ಟ್ರೀಯ MPI ಅಳತೆಯನ್ನು ನಿರ್ಮಿಸಲಾಗಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದಾರೆ.

ಸುಸ್ಥಿರ ಅಭಿವೃದ್ಧಿ ಗುರಿಗಳು (SDG) ಚೌಕಟ್ಟು ಅಭಿವೃದ್ಧಿ ನೀತಿಗಳು, ಸರ್ಕಾರದ ಆದ್ಯತೆಗಳು ಮತ್ತು ಪ್ರಪಂಚದಾದ್ಯಂತ ಅಭಿವೃದ್ಧಿ ಪ್ರಗತಿಯನ್ನು ಅಳೆಯಲು ಮೆಟ್ರಿಕ್‌ಗಳನ್ನು ಮರು ವ್ಯಾಖ್ಯಾನಿಸಿದೆ. ಇದನ್ನು 2015ರಲ್ಲಿ 193 ದೇಶಗಳು ಅಳವಡಿಸಿಕೊಂಡಿವೆ. 17 ಜಾಗತಿಕ ಗುರಿಗಳು ಮತ್ತು 169 ಟಾರ್ಗೆಟ್​ಗಳೊಂದಿಗೆ SDG ಫ್ರೇಮ್‌ವರ್ಕ್ ಅದರ ಪೂರ್ವ ಆವೃತ್ತಿಯಾದ ಮಿಲೇನಿಯಮ್ ಡೆವಲಪ್‌ಮೆಂಟ್ ಗೋಲ್ಸ್ (MDG)ಗೆ ಹೋಲಿಸಿದರೆ ವ್ಯಾಪ್ತಿ ಮತ್ತು ಪ್ರಮಾಣದಲ್ಲಿ ಗಮನಾರ್ಹವಾಗಿ ವಿಸ್ತಾರವಾಗಿದೆ.

ಬಹು ಆಯಾಮದ ಬಡತನವನ್ನು ಮೇಲ್ವಿಚಾರಣೆ ಮಾಡುವ ಸಾರ್ವಜನಿಕ ನೀತಿ ಸಾಧನವನ್ನು ಸ್ಥಾಪಿಸುವಲ್ಲಿ ಭಾರತದ ರಾಷ್ಟ್ರೀಯ ಬಹು ಆಯಾಮದ ಬಡತನ ಸೂಚ್ಯಂಕದ ಅಭಿವೃದ್ಧಿಯು ಪ್ರಮುಖ ಕೊಡುಗೆಯಾಗಿದೆ. ಸಾಕ್ಷ್ಯಾಧಾರಿತ ಮತ್ತು ಕೇಂದ್ರೀಕೃತ ಮಧ್ಯಸ್ಥಿಕೆಗಳನ್ನು ತಿಳಿಸುತ್ತದೆ. ಇದರಿಂದಾಗಿ ಯಾರೂ ಹಿಂದೆ ಉಳಿಯುವುದಿಲ್ಲ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರ ಮುನ್ನುಡಿಯಲ್ಲಿ ಹೇಳಿದ್ದಾರೆ. ಅಲ್ಲದೆ, 2015-16ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (NFHS) ಉಲ್ಲೇಖದ ಅವಧಿಯನ್ನು ಭಾರತದ ಮೂಲ ಆಧರಿಸಿ ರಾಷ್ಟ್ರೀಯ MPI ಅಳತೆಯ ಕುರಿತು ವರದಿಯಾಗಿದೆ ಎಂದು ಅವರು ಹೇಳಿದ್ದಾರೆ.

Recommended Video

ಪರೋಕ್ಷವಾಗಿ ಕಾಂಗ್ರೆಸ್ಸ್ ಪಕ್ಷಕ್ಕೆ ಟಾಂಗ್ ಕೊಟ್ಟ ಮೋದಿ! | Oneindia Kannada

ಆಯೋಗದ ಪ್ರಕಾರ, ರಾಷ್ಟ್ರೀಯ MPI ಬಹುಆಯಾಮದ ಬಡತನ ಸೂಚ್ಯಂಕ ಬಡತನದ ಮಟ್ಟ ಮತ್ತು ಸಮಯದೊಂದಿಗೆ ಅದರ ಬದಲಾವಣೆಯ ನೋಟವನ್ನು ಒದಗಿಸುತ್ತದೆ. "ಇದು ದೇಶದಲ್ಲಿನ ಬಡತನದ ಒಟ್ಟಾರೆ ಚಿತ್ರವನ್ನು ಪ್ರಸ್ತುತಪಡಿಸುತ್ತದೆ. ಜೊತೆಗೆ ರಾಜ್ಯ, ಜಿಲ್ಲೆಗಳು ಮತ್ತು ನಿರ್ದಿಷ್ಟ ವಲಯಗಳ ಆಳವಾದ ವಿಶ್ಲೇಷಣೆಯನ್ನು ಸಕ್ರಿಯಗೊಳಿಸುತ್ತದೆ. ಆರೋಗ್ಯ ಮತ್ತು ಪೋಷಣೆ, ಶಿಕ್ಷಣ ಮತ್ತು ಜೀವನ ಮಟ್ಟಗಳ ಆಯಾಮಗಳ ಅಡಿಯಲ್ಲಿ ಮತ್ತು ಅಸ್ತಿತ್ವದಲ್ಲಿರುವ ವಿತ್ತೀಯ ಬಡತನದ ಅಂಕಿಅಂಶಗಳಿಗೆ ಪೂರಕವಾಗಿದೆ" ಎಂದು ಅದು ಹೇಳಿದೆ.

English summary
Bihar, Jharkhand and Uttar Pradesh have emerged as the poorest states in India, according to the Niti Aayog's Multidimensional Poverty Index (MPI).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X