1 ಲಕ್ಷದ ಕ್ರೆಡಿಟ್ ಕಾರ್ಡ್ ಬಿಲ್, ವರ್ಷದಲ್ಲಿ 10 ಲಕ್ಷ ಜಮೆ ಮೇಲೆ ಐಟಿ ಕಣ್ಣು

Posted By:
Subscribe to Oneindia Kannada

ನವದೆಹಲಿ, ಜನವರಿ 17: ಯಾವುದೇ ಖಾತೆಗೆ ವರ್ಷದಲ್ಲಿ ಸರಾಸರಿ ಹತ್ತು ಲಕ್ಷ ರುಪಾಯಿ ಜಮೆಯಾಗಿದ್ದರೆ, ಯಾವುದೇ ಕ್ರೆಡಿಟ್ ಕಾರ್ಡ್ ನ ಬಿಲ್ ಒಂದು ಲಕ್ಷ ಮತ್ತು ಅದಕ್ಕಿಂತ ಹೆಚ್ಚಾಗಿದ್ದಾರೆ ಆ ಬಗ್ಗೆ ಮಾಹಿತಿ ನೀಡುವಂತೆ ಬ್ಯಾಂಕ್ ಗಳಿಗೆ ಆದಾಯ ತೆರಿಗೆ ಇಲಾಖೆಯು ಕೇಳಿದೆ.

ಜನವರಿ 17ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಯಾವ ಯಾವ ನಗದು ವ್ಯವಹಾರಗಳ ಬಗ್ಗೆ ಮಾಹಿತಿ ನೀಡಬೇಕು ಎಂಬ ಪಟ್ಟಿಯನ್ನು ನೀಡಿದೆ. ಈ ಹಿಂದೆ ಅಂದರೆ ನವೆಂಬರ್ 2016ರಲ್ಲಿ, ನವೆಂಬರ್ 9ರಿಂದ ಡಿಸೆಂಬರ್ 30ರ ಮಧ್ಯೆ 2.5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಜಮೆ ಮಾಡಿದವರ ವಿವರವನ್ನು ನೀಡುವಂತೆ ಬ್ಯಾಂಕ್ ಗಳಿಗೆ ತಿಳಿಸಲಾಗಿತ್ತು.[ಬೆಂಗಳೂರು, ಮಂಗಳೂರು, ಗೋವಾದಲ್ಲಿ ಐಟಿ ದಾಳಿ]

Income tax

2016ರ ನವೆಂಬರ್ 9 ಹಾಗೂ ಡಿಸೆಂಬರ್ 30ರ ಮಧ್ಯೆ ಚಾಲ್ತಿ ಖಾತೆಗೆ ಸರಾಸರಿ 12.5 ಲಕ್ಷಕ್ಕಿಂತ ಹೆಚ್ಚು ಹಾಗೂ ಉಳಿತಾಯ ಖಾತೆ 2.5 ಲಕ್ಷ ಅದಕ್ಕಿಂತ ಹೆಚ್ಚು ಜಮೆಯಾಗಿದ್ದರೆ ಆ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಲಾಗಿದೆ.

ಅದರ ಜತೆಗೆ 2016ರ ಏಪ್ರಿಲ್ 1 ಮತ್ತು ನವೆಂಬರ್ 9ರ ಮಧ್ಯೆ ವರದಿ ಮಾಡುವಂಥ ವ್ಯವಹಾರಗಳು ನಡೆದಿದ್ದರೆ ಆ ಬಗ್ಗೆ ಜನವರಿ 31, 2017ರೊಳಗೆ ಗಮನಕ್ಕೆ ತರಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.[ಚೆನ್ನೈ: ಆಭರಣ ಮಳಿಗೆಗಳ ಮೇಲೆ ಆದಾಯ ತೆರಿಗೆ ದಾಳಿ]

ಷೇರು ಮೂಲಕ ಕೂಡ ಸರಾಸರಿ ಹಣ ಹತ್ತು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣ ವಾಪಸ್ ಪಡೆದಿದ್ದರೆ, ಅದೇ ರೀತಿ ವಿದೇಶಿ ಕರೆನ್ಸಿ, ಟ್ರಾವೆಲರ್ ಚೆಕ್ ಗಳನ್ನು ಹತ್ತು ಲಕ್ಷ ರುಪಾಯಿಗೆ ಪಡೆದಿದ್ದರೆ, ಯಾವುದೇ ಆಸ್ತಿ ಮೂವತ್ತು ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಖರೀದಿ ಅಥವಾ ಮಾರಾಟವಾಗಿದ್ದರೆ ಹೀಗೆ ಪಟ್ಟಿ ಮುಂದುವರಿಯುತ್ತದೆ. ಅಂಥ ಎಲ್ಲ ವ್ಯವಹಾರಗಳನ್ನು ಆದಾಯ ತೆರಿಗೆ ಇಲಾಖೆ ಪರಿಶೀಲಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The tax department has asked banks to report deposits in any account aggregating Rs 10 lakh in a year, as well as cash payments of Rs 1 lakh or more on credit card bills.
Please Wait while comments are loading...