ಇರಾನ್‌ಗೆ ತೆರಳದಂತೆ ಭಾರತದ ವಿದೇಶಾಂಗ ಸಚಿವಾಲಯ ಸಲಹೆ

ನವದೆಹಲಿ, ಜನವರಿ 8: ಯಾವುದೇ ಕಾರಣಕ್ಕೂ ಇರಾನ್‌ಗೆ ಪ್ರಯಾಣ ಬೆಳೆಸಬೇಡಿ ಎಂದು ಭಾರತದ ವಿದೇಶಾಂಗ ಸಚಿವಾಲಯ ಸಲಹೆಯನ್ನು ನೀಡಿದೆ.

ಇರಾಕ್‌ನಲ್ಲಿರುವ ಸಧ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ಅಧಿಸೂಚನೆಯ ತನಕ ಇರಾಕ್‌ಗೆ ಅನಿವಾರ್ಯವಲ್ಲದ ಎಲ್ಲಾ ಪ್ರಯಾಣವನ್ನು ನಿಲ್ಲಿಸಲು ಭಾರತೀಯ ಪ್ರಜೆಗಳಿಗೆ ಸೂಚಿಸಲಾಗಿದೆ.

ಇರಾಕ್‌ನಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳು ಎಚ್ಚರವಾಗಿರಲು ಸೂಚಿಸಲಾಗಿದೆ ಮತ್ತು ಇರಾಕ್‌ನೊಳಗಿನ ಪ್ರಯಾಣವನ್ನು ಸಧ್ಯಕ್ಕೆ ನಿಲ್ಲಿಸುವಂತೆ ತಿಳಿಸಿದ್ದಾರೆ.

Avoid Travel to Iraq says MEA

ಇರಾಕ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ಎಲ್ಲಾ ಸೇವೆಗಳನ್ನು ಒದಗಿಸಲು ಬಾಗ್ದಾದ್‌ನಲ್ಲಿರುವ ನಮ್ಮ ರಾಯಭಾರ ಕಚೇರಿ ಮತ್ತು ಎರ್ಬಿಲ್‌ನ ಕಾನ್ಸುಲೇಟ್ ಕಾರ್ಯನಿರ್ವಹಿಸುತ್ತಲೇ ಇರುತ್ತದೆ ಎಂದು ತಿಳಿಸಿದ್ದಾರೆ.

ಇರಾನ್‌ನ ಕಮಾಂಡೊ ಖಾಸಿಂ ಸುಲೈಮಾನಿ ಹತ್ಯೆ ಬಳಿಕ ಅಮೆರಿಕ ಮತ್ತು ಇರಾನ್ ನಡುವೆ ಸಂಬಂಧ ತೀವ್ರ ಹದಗೆಟ್ಟಿದೆ. ಇರಾನ್ ಇಂದು ಅಮೆರಿಕ ಸೇನಾ ನೆಲೆ ಮೇಲೆ ಕ್ಷಿಪಣಿ ದಾಳಿ ಮಾಡಿದೆ.

ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಇರಾಕ್‌ನಲ್ಲಿ ಅಂದಾಜು 500 ಕೆನಡಾದ ಕೆಲವು ಸೈನಿಕರನ್ನು ತಾತ್ಕಾಲಿಕವಾಗಿ ನೆರೆಯ ಕುವೈತ್‌ಗೆ ಸ್ಥಳಾಂತರಿಸಲಾಗುವುದು ಎಂದು ಕೆನಡಾದ ಉನ್ನತ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+