ಟ್ವಿಟ್ಟರಲ್ಲಿ ಹಣಕ್ಕಾಗಿ ಕೈಯೊಡ್ಡಿದ ಕೇಜ್ರಿವಾಲ್ ಅಪಹಾಸ್ಯ
ನವದೆಹಲಿ, ಜು. 14 : ದಿಟ್ಟ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಪಾತ್ರರಾಗಿರುವ ದೆಹಲಿಯ ಮುಖ್ಯಮಂತ್ರಿ ಜನರ ಮುಂದೆ ಮತ್ತೆ ಕೈಯೊಡ್ಡಿ ನಿಂತಿದ್ದಾರೆ. ಮತ ಯಾಚನೆಗೆ ಅಲ್ಲ, ಹಣ ಯಾಚನೆಗೆ! ಹೌದು, ಆಮ್ ಆದ್ಮಿ ಪಕ್ಷದ ಕೈ ಖಾಲಿಯಾಗಿರುವ ಕಾರಣ ಜನ ಧಾರಾಳವಾಗಿ ದೇಣಿಗೆ ನೀಡಬೇಕೆಂದು ಅರವಿಂದ್ ಕೇಜ್ರಿವಾಲ್ ಹಸ್ತ ಚಾಚಿದ್ದಾರೆ.
"ದೆಹಲಿಯಲ್ಲಿ ಆಪ್ ಅಧಿಕಾರಕ್ಕೆ ಬಂದ ನಂತರ ಪಕ್ಷದ ಬೊಕ್ಕಸ ಖಾಲಿಯಾಗಿದೆ. ದೈನಂದಿನ ಖರ್ಚಿಗೆ ದುಡ್ಡು ಸಾಲುತ್ತಿಲ್ಲ. ಪಕ್ಷ ನಡೆಸಲು ಸಾರ್ವಜನಿಕರೇ ನಮಗೆ ದುಡ್ಡು ನೀಡಬೇಕು. ನಮ್ಮನ್ನು ಅಧಿಕಾರಕ್ಕೆ ತಂದಿದ್ದಕ್ಕೆ ನಾವು ಆಭಾರಿಯಾಗಿದ್ದೇವೆ. ಆದರೆ, ಅವರೇ ಈಗ ನಮ್ಮನ್ನು ಸಲಹಬೇಕಾಗಿದೆ" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೈಚಾಚಿದ್ದಾರೆ.
"ಜನರಿಂದಲೇ ದೇಣಿಗೆ ಕೇಳುತ್ತಿರುವುದಕ್ಕೆ ಇದೆಂಥ ಮುಖ್ಯಮಂತ್ರಿ ಎಂದು ನೀವು ಆಕ್ರೋಶ ವ್ಯಕ್ತಪಡಿಸಬಹುದು. ನಾವು ಬೇರೆ ಮಾರ್ಗಗಳಿಂದ ಹಣವನ್ನು ಹೊಂದಿಸಿಕೊಳ್ಳಬಹುದು. ಆದರೆ, ತಪ್ಪು ದಾರಿ ಹಿಡಿದು ಹಣ ಸಂಗ್ರಹಿಸುವುದು ನಮಗೆ ಬೇಕಾಗಿಲ್ಲ" ಎಂದು ಅರವಿಂದ್ ಕೇಜ್ರಿವಾಲ್ ವಿನಮ್ರವಾಗಿ ಜನರ ಮುಂದೆ ತಮ್ಮ ತೊಂದರೆಯನ್ನು ಹೇಳಿಕೊಂಡಿದ್ದಾರೆ. [ಆಮ್ ಆದ್ಮಿ ಪಕ್ಷಕ್ಕೆ, ಏಪ್ರಿಲ್ ಫೂಲ್ ಕೆಚ್ ಅಪ್!]
ಪಕ್ಷದಿಂದ ಸಿಡಿದು ಹೊರಬಿದ್ದಿರುವ ಆಪ್ ವಾಲಂಟೀರ್ ಆಕ್ಷನ್ ಮಂಚ್ (AVAM), ಅರವಿಂದ್ ಕೇಜ್ರಿವಾಲ್ ಅವರು ನಾಲ್ಕು ಕಂಪನಿಗಳಿಂದ 2 ಕೋಟಿ ರು. ಅಕ್ರಮ ದೇಣಿಗೆಯನ್ನು ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಇದು ನನ್ನ ಇಮೇಜಿಗೆ ಮಸಿ ಬಳಿಯುವ ತಂತ್ರ, ನನ್ನ ವಿರುದ್ಧ ವಿರೋಧಿಗಳು ಮಾಡುವ ಷಡ್ಯಂತ್ರ ಎಂದು ಅರವಿಂದ್ ಕೇಜ್ರಿವಾಲ್ ಪ್ರತ್ಯಾರೋಪ ಮಾಡಿದ್ದರು. [ಟೈಮ್ಸ್ ಪ್ರಭಾವಿಗಳ ಪಟ್ಟಿಯಲ್ಲಿ ಮೋದಿ ಜೊತೆ ಕೇಜ್ರಿ]

ಅಯ್ಯೋ ಪಾಪ ಅನ್ನದ ಜನರು
ಅರವಿಂದ್ ಕೇಜ್ರಿವಾಲ್ ಅವರ ಈ ನಡೆಗೆ ಜನರು, ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಅಯ್ಯೋ ಪಾಪ ಅಂದಿಲ್ಲ. ನಿನ್ನೆ ಫೈವ್ ಸ್ಟಾರ್ ಹೋಟೆಲಿನಲ್ಲಿ ಇಫ್ತಾರ್ ಪಾರ್ಟಿ ಆಯೋಜಿಸಿದ್ದ ಅರವಿಂದ್ ಇಂದು ಭಿಕ್ಷೆ ಬೇಡಲು ನಿಂತಿದ್ದಾರೆ ಎಂದು ಕೇಜ್ರಿವಾಲ್ ಅವರ ಈ ನಡೆಯನ್ನು ಟ್ವಿಟ್ಟಿಗರು ಅಪಹಾಸ್ಯ ಮಾಡಿದ್ದಾರೆ.
|
ನಿನ್ನೆ ಇಫ್ತಾರ್ ಕೂಟ, ಇಂದು ಹಣ ಬೇಕಂತೆ
ನಿನ್ನೆ ಮುಸ್ಲಿಂರಿಗಾಗಿ ಫೈವ್ ಸ್ಟಾರ್ ಹೋಟೆಲಿನಲ್ಲಿ ಅರವಿಂದ್ ಇಫ್ತಾರ್ ಕೂಟ ಏರ್ಪಡಿಸಿದ್ದರು. ಈಗ ನಾಚಿಕೆಯಿಲ್ಲದೆ ಹಣ ಬೇಕೆಂದು ಕೇಳುತ್ತಿದ್ದಾರೆ.
|
ಗಬ್ಬರ್ ಸಿಂಗ್ ಮಾತಿನ ಚಾಟಿ
ಅರವಿಂದ್ ನಿಜವಾದ ದೇಶಭಕ್ತ. (Do)nationಗಾಗಿ ಏನು ಬೇಕಾದರೂ ಮಾಡಲು ಸಿದ್ಧ
|
ಏನಂತೀರಿ ಇಂಥ ಟ್ವೀಟಿಗೆ?
ಮಹಾಜನತೆಯೆ, ಆಪ್‌ಗೆ ದಯವಿಟ್ಟು ದೇಣಿಗೆ ನೀಡಿರಿ. ಅರವಿಂದ್ ಅವರ ಇಮೇಜ್ ಹೆಚ್ಚಿಸುವ ಜಾಹೀರಾತಿಗೆ ಹಣ ಬೇಕು.
|
ಅಟಿಟ್ಯೂಡಲ್ಲಿ ಯಾವುದೇ ಬದಲಾವಣೆ ಇಲ್ಲ
ಅರವಿಂದ್ ಕೇಜ್ರಿವಾಲ್ ಒಂದು ರೀತಿ ಗ್ರೀಸ್ ದೇಶವಿದ್ದ ಹಾಗೆ. ಯಾವಾಗಲೂ ಹಣ ಕೇಳುತ್ತಿರುತ್ತಾರೆ. ಹಣ ಖರ್ಚು ಮಾಡುವ ಬಗ್ಗೆ ದಾಖಲೆಯೂ ಇಲ್ಲ, ಪ್ರಜ್ಞಾವಂತಿಕೆಯೂ ಇಲ್ಲ. ಆದರೂ ಅಟಿಟ್ಯೂಡಲ್ಲಿ ಯಾವುದೇ ಬದಲಾವಣೆ ಇಲ್ಲ.
|
ಆಪ್ ಸಂಗ್ರಹಿಸಿರುವ ದೇಣಿಗೆಯ ಲೆಕ್ಕಪತ್ರ
ಆಮ್ ಆದ್ಮಿ ಪಕ್ಷ ಸಂಗ್ರಹಿಸಿರುವ ದೇಣಿಗೆಯ ಲೆಕ್ಕಪತ್ರ ಇಲ್ಲಿದೆ.












Click it and Unblock the Notifications