'90 ವರ್ಷದ ಅನುಭವಿ ಕಂಪನಿ, ಅನನುಭವಿ ರಿಲಯನ್ಸ್ ಅನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ'

ನವದೆಹಲಿ, ನವೆಂಬರ್ 14: ರಫೇಲ್ ಯುದ್ಧ ವಿಮಾನ ಖರೀದಿ ವಿಚಾರ ಬುಧವಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಈ ವೇಳೆ ಕಲಾಪದಲ್ಲಿ ಯಾರು, ಏನು ಹೇಳಿದರು ಎಂಬ ಸಂಗತಿ ಬಹಳ ಆಸಕ್ತಿಕರವಾಗಿದೆ. ಅದರ ವಿವರಗಳು ಇಲ್ಲಿವೆ.

ಅರುಣ್ ಶೌರಿ: 1929ನೇ ಇಸವಿಯಲ್ಲಿ ಸ್ಥಾಪನೆಯಾಗಿ, ಆ ಪ್ರಮಾಣದ ಅನುಭವ ಇರುವ ಫ್ರಾನ್ಸ್ ನ ಡಸಾಲ್ಟ್ ಕಂಪನಿಯು ಅನುಭವವೇ ಇಲ್ಲದೇ ಕಂಪನಿಯೊಂದನ್ನು ಭಾಗೀದಾರ ಎಂದು ಆರಿಸಿಕೊಳ್ಳಲು ಸಾಧ್ಯವಿಲ್ಲ.

ಕೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾದ ಶೌರಿ, ಭೂಷಣ್ ಸಿಬಿಐ ಭೇಟಿ!

ಅರುಣ್ ಶೌರಿ: ಸ್ವತಃ ಡಸಾಲ್ಟ್ ಕಂಪನ್ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿತ್ತು.

Arun Shourie submission in SC regarding Rafale deal

ಅರುಣ್ ಶೌರಿ: ಆಗಿನ ರಕ್ಷಣಾ ಸಚಿವ ಮನೋಹರ್ ಪರಿಕರ್ ಗೆ ಈ ವ್ಯವಹಾರದ ಬಗ್ಗೆ ಗೊತ್ತೇ ಇರಲಿಲ್ಲ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಅರುಣ್ ಶೌರಿ: ಯುದ್ಧ ವಿಮಾನ ಖರೀದಿಯ ಬೆಲೆ ಹೇಗೆ ಹೆಚ್ಚಾಯಿತು?

ಅರುಣ್ ಶೌರಿ: ವಿಮಾನವನ್ನು ತಯಾರು ಮಾಡುವುದಕ್ಕೆ ಎಚ್ಎಎಲ್ ಗೆ ಪೂರ್ಣ ಸಾಮರ್ಥ್ಯ ಇದೆ. ಈ ಬಗ್ಗೆ ಸರಕಾರ ನೀಡಿದ ಹೇಳಿಕೆ ಒಪ್ಪಲು ಸಾಧ್ಯವೇ ಇಲ್ಲ.

ರಫೇಲ್ ಒಪ್ಪಂದಕ್ಕೆ ಎಚ್‌ಎಎಲ್‌ಅನ್ನು ಏಕೆ ಆಯ್ದುಕೊಳ್ಳಲಿಲ್ಲ: ಕಾರಣ ನೀಡಿದ ಕೇಂದ್ರ ಸರ್ಕಾರ

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್: ನಾವೀಗ ಚರ್ಚೆ ಮಾಡುತ್ತಿರುವ ವಿಚಾರ ವಾಯು ಸೇನೆಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ನಾವು ಭಾರತೀಯ ವಾಯು ಸೇನೆಯಿಂದ ಒಬ್ಬರನ್ನು ಭೇಟಿ ಆಗಬೇಕು, ಸಚಿವಾಲಯದಿಂದ ಅಲ್ಲ.

ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್: ಅಂಥವರು ಇಲ್ಲಿ ಶೀಘ್ರದಲ್ಲೇ ಇರುತ್ತಾರೆ.

ರಫೇಲ್ ವಿಮಾನ ಖರೀದಿ ಪರವಾಗಿ ವಾಯುಸೇನೆ ಮುಖ್ಯಸ್ಥರು ಹೇಳಿದ್ದೇನು?

ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ (ಕೇಂದ್ರ ಸರಕಾರ ಪರ ವಕಾಲತ್ತು ವಹಿಸಿರುವವರು): ನಮ್ಮ ಬಳಿ ಇರುವ ಶಸ್ತ್ರಾಸ್ತ್ರ ಹಾಗೂ ವೈಮಾನಿಕ ಶಕ್ತಿ ಬಗ್ಗೆ ರಹಸ್ಯ ಕಾಪಾಡಲಾಗುತ್ತದೆ. ನಮ್ಮ ಶಕ್ತಿ ಬಗ್ಗೆ ಶತ್ರುಗಳಿಗೆ ತಿಳಿದರೆ ಅಪಾಯಕಾರಿ ಪರಿಣಾಮ ಬೀರುತ್ತದೆ.

ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್: ಭಾರತದ ಸುಪ್ರೀಂ ಕೋರ್ಟ್ ಬಗ್ಗೆ ನಮಗೆ ಗೌರವ ಇರುವ ಕಾರಣಕ್ಕೆ ಕೋರ್ಟ್ ಗೆ ಮಾಹಿತಿ ನೀಡಿದ್ದೇವೆ. ಒಟ್ಟು ಬೆಲೆ, ಶಸ್ತ್ರಾಸ್ತ್ರಗಳ ಮಾಹಿತಿ ಸಹ ನೀಡಿದ್ದೇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+