ಅಮೃತಸರ ದುರಂತಕ್ಕೆ ಪರಿಹಾರ ನೀಡಲ್ಲ: ರೈಲ್ವೇ ಇಲಾಖೆ

ನವದೆಹಲಿ, ಅಕ್ಟೋಬರ್ 20: ಪಂಜಾಬಿನ ಅಮೃತಸರದಲ್ಲಿ ಸಂಭವಿಸಿದ ರೈಲ್ವೇ ದುರಂತದಲ್ಲಿ ಮೃತರಾದವರ ಕುಟುಂಬಕ್ಕೆ ಮತ್ತು ಗಾಯಗೊಂಡವರಿಗೆ ರೈಲ್ವೇ ಇಲಾಖೆ ಯಾವುದೇ ಕಾರಣಕ್ಕೂ ಪರಿಹಾರ ನೀಡುವುದಿಲ್ಲ ಎಂದು ಹೇಳಿದೆ.

ರೈಲ್ವೇ ಅಪಘಾತದಿಂದ ಸಂಭವಿಸಿದ ದುರಂತ ಇದಲ್ಲ. ಇದರಲ್ಲಿ ರೈಲ್ವೇ ಇಲಾಖೆಯ ಪಾತ್ರವೇನೂ ಇಲ್ಲ ಎಂದು ಅದು ಸ್ಪಷ್ಟನೆ ನೀಡಿದೆ. ಘಟನೆ ಕುರಿತು ರೈಲ್ವೇ ಇಲಾಖೆಯ ವಿರುದ್ಧ ತನಿಖೆ ನಡೆಸುವ ಅಗತ್ಯವಿಲ್ಲ. ತಿರುವಿನಲ್ಲಿ ರೈಲನ್ನು ನಿಧಾನ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಆದ್ದರಿಂದ ತನಿಖೆ ಮಾಡುವ ಅಗತ್ಯವೇನಿದೆ ಎಂದು ಕೇಂದ್ರ ರೈಲ್ವೇ ಇಲಾಖೆಯ ರಾಜ್ಯ ಸಚಿವ ಜಯಂತ್ ಸಿನ್ಹಾ ಹೇಳಿದ್ದಾರೆ.

ರೈಲ್ವೇ ನಿಲ್ದಾಣದ ಬಳಿ ಇಂಥ ಕಾರ್ಯಕ್ರಮಗಳು ನಡೆಯದಂತೆ ಆಯಾ ಸ್ಥಳದ ಮೇಲ್ವಿಚಾರಕರು ಗಮನ ಹರಿಸಬೇಕು. ಇದರಲ್ಲಿ ರೈಲ್ವೇ ಇಲಾಖೆಯ ತಪ್ಪಿಲ್ಲ ಎಂದು ಅವರು ಸಮರ್ಥನೆ ಮಾಡಿಕೊಂಡಿದ್ದಾರೆ.

Amritsar tragedy is not an accident: railways will not give componsation

ಶುಕ್ರವಾರ ರಾತ್ರಿ ವಿಜಯದಶಮಿ ಉತ್ಸವದಂದು ರಾವಣನ ಪ್ರತಿಕೃತಿಯನ್ನು ದಹಿಸುತ್ತ, ದಸರಾ ಆಚರಿಸುತ್ತಿದ್ದ ಜನರ ಮೇಲೆ ರೈಲು ಹರಿದ ಪರಿಣಾಮ ಸಂಭವಿಸಿದ ದುರಂತದಲ್ಲಿ 61 ಜನ ಮೃತಪಟ್ಟಿದ್ದರು. ಇತ್ತೀಚೆಗೆ ನಡೆದ ಘೋರ ದುರಂತ ಇದು ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+