• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಜಪೇಯಿ ನೆಲೆಸಿದ್ದ ನಿವಾಸ 'ಗೃಹ' ಸಚಿವ ಅಮಿತ್ ಪಾಲು

|
   ಅಟಲ್ ವಿಹಾರಿ ವಾಜಪೇಯಿ ನೆಲೆಸಿದ್ದ ದೆಹಲಿ ಮನೆ ಅಮಿತ್ ಶಾ ಪಾಲು | Oneindia Kannada

   ನವದೆಹಲಿ, ಜೂನ್ 06: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನೆಲೆಸಿದ್ದ ಕೃಷ್ಣ ಮೆನನ್ ಮಾರ್ಗ್ ನಲ್ಲಿರುವ ನಿವಾಸವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪಾಲಾಗುವ ಸಾಧ್ಯತೆಯಿದೆ.

   ಕೇಂದ್ರ ದೆಹಲಿಯಲ್ಲಿರುವ ಈ ಬಂಗಲೆಯಲ್ಲಿ ಅಮಿತ್ ಶಾ ಅವರಿಗೆ ಅಧಿಕೃತವಾಗಿ ಸರ್ಕಾರದಿಂದ ಹಂಚಿಕೆ ಮಾಡಲಾಗುತ್ತದೆ ಎಂದು ಬಿಜೆಪಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

   ಕಾಶ್ಮೀರದಲ್ಲಿ ಒಳನುಸುಳುವಿಕೆ ತಡೆಯಲು ಅಮಿತ್ ಶಾ ತಂತ್ರ

   ಲೋಕಸಭೆ ಚುನಾವಣೆ 2019ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಗೆದ್ದು, ಮತ್ತೊಮ್ಮೆ ಸರ್ಕಾರ ಸ್ಥಾಪಿಸಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಇದೇ ಮೊದಲ ಬಾರಿಗೆ ಮೋದಿ ಸಂಪುಟ ಸೇರಿದ್ದು, ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

   ಇದಲ್ಲದೆ, ಹೊಸದಾಗಿ ರಚನೆಯಾಗಿರುವ 8 ಸಂಪುಟ ಉಪಸಮಿತಿಗಳಲ್ಲಿಯೂ ಅವರು ಸ್ಥಾನ ಪಡೆದುಕೊಂಡಿದ್ದಾರೆ.

   ನವದೆಹಲಿಯ ಕೃಷ್ಣ ಮೆನನ್ ಮಾರ್ಗದಲ್ಲಿರುವ ಈ ಬಂಗಲೆಗೆ 2004ರಲ್ಲಿ ಬಂದು ನೆಲೆಸಿದ್ದ ವಾಜಪೇಯಿ ಅವರು 14 ವರ್ಷಗಳ ಕಾಲ ಇದೇ ಮನೆಯಲ್ಲಿದ್ದರು. ವಾಜಪೇಯಿ ಅವರ ನಿಧನದ ಬಳಿಕ ಅವರ ಕುಟುಂಬಸ್ಥರು ಕಳೆದ ನವೆಂಬರ್ ತಿಂಗಳಿನಲ್ಲಿ ಈ ಮನೆಯನ್ನು ತೊರೆದಿದ್ದಾರೆ.

   ಮೋದಿ 2.0 ಕನಸಿನ ಬಜೆಟ್, ನಿರ್ಮಲಾ ತಂಡದಿಂದ ರಹಸ್ಯವಾಗಿ ತಯಾರಿ ಕಾರ್ಯ

   'ಈಗ ಈ ಮನೆಯನ್ನು ಅಮಿತ್ ಶಾ ಅವರಿಗೆ ಹಂಚಿಕೆ ಮಾಡಲಾಗುತ್ತದೆ. ಅಮಿತ್ ಶಾ ಅವರು ಇತ್ತೀಚೆಗೆ ಮನೆಗೆ ಭೇಟಿ ನೀಡಿ ಕೆಲ ರಿಪೇರಿ ಕಾರ್ಯಗಳನ್ನು ಸೂಚಿಸಿದ್ದಾರೆ. ಒಂದೆರಡು ತಿಂಗಳಲ್ಲಿ ಮನೆ ಸಂಪೂರ್ಣವಾಗಿ ಸಿದ್ಧವಾಗಲಿದೆ' ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.

   ಸದ್ಯ ನಂ.11, ಅಕ್ಬರ್ ರಸ್ತೆ ನಿವಾಸದಲ್ಲಿ ಅಮಿತ್ ಶಾ ಇದ್ದು, ಕೃಷ್ಣ ಮೆನನ್ ರಸ್ತೆಯ ಬಂಗಲೆಯ ಸಂಖ್ಯೆಯನ್ನು 8 ರಿಂದ 6ಎ ಎಂದು ಬದಲಾಯಿಸಿಕೊಂಡಿದ್ದಾರೆ.

   ಅಟಲ್ ಬಿಹಾರಿ ವಾಜಪೇಯಿ ನೆನಪಲ್ಲಿ ಸದೈವ್ ಅಟಲ್ ಹೆಸರಿನ ಸ್ಮಾರಕವನ್ನು ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನಿರ್ಮಿಸಲಾಗಿದೆ. 2014ರಲ್ಲಿ ತೆಗೆದುಕೊಂಡ ನಿರ್ಣಯದಂತೆ ಹಿರಿಯ ನಾಯಕರು ಕಾಲವಾದ ಬಳಿಕ ಅವರು ನೆಲೆಸಿದ್ದ ಮನೆಯನ್ನು ಪುನರ್ ಬಳಕೆ ಮಾಡಲು ಬಿಜೆಪಿ ಮುಂದಾಗಿದೆ(ಪಿಟಿಐ)

   English summary
   Union Home Minister Amit Shah is likely to be allotted late prime minister Atal Bihari Vajpayee's Krishna Menon Marg residence in the central Delhi, government sources said on Thursday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X