ಮೋದಿ ಬೆಂಬಲಕ್ಕೆ ಶರದ್ ಪವಾರ್, ಧನ್ಯವಾದ ಹೇಳಿದ ಶಾ!
ನವದೆಹಲಿ, ಸೆಪ್ಟೆಂಬರ್ 28: ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಮರ್ಥಿಸುವ ಧಾಟಿಯಲ್ಲಿ ಮಾತನಾಡಿದ ಎನ್ ಸಿಪಿ(ನ್ಯಾಶ್ನಲಿಸ್ಟಿಕ್ ಕಾಂಗ್ರೆಸ್ ಪಾರ್ಟಿ) ಮುಖ್ಯಸ್ಥ ಶರದ್ ಪವಾರ್ ಅವರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಧನ್ಯವಾದ ಅರ್ಪಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಶಾ, 'ತಮ್ಮದೇ ಪಕ್ಷದೊಂದಿಗೆ(ಕಾಂಗ್ರೆಸ್) ಮೈತ್ರಿ ಮಾಡಿಕೊಂಡ ಎನ್ ಸಿಪಿ ಮುಖಂಡರ ಹೇಳುವ ಮಾತನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಮ್ಮೆ ಆಲಿಸಿಕೊಳ್ಳಬೇಕು. ಎಲ್ಲ ಪಕ್ಷ ರಾಜಕೀಯಕ್ಕಿಂತ ರಾಷ್ಟ್ರೀಯ ಹಿತಾಸಕ್ತಿ ದೊಡ್ಡದು' ಎಂದು ಶರದ್ ಪವಾರ್ ಹೇಳಿದ್ದಾರೆ. ರಫೇಳ್ ಡೀಲ್ ಗೆ ಸಂಬಂಧಿಸಿದಂತೆ ಮೋದಿ ಅವರನ್ನು ಅನುಮಾನಿಸುವುದು ಸರಿಯಲ್ಲ, ನನಗೆ ಪ್ರಧಾನಿಗಳ ಮೇಲೆ ಅಪನಂಬಿಕೆ ಇಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳು' ಎಂದು ಶಾ ತಿಳಿಸಿದ್ದಾರೆ.

ಮರಾಠಿ ಚಾನೆಲ್ ವೊಂದಕ್ಕೆ ಸಂದರ್ಶನ ನೀಡುತ್ತಿದ್ದ ಪವಾರ್, ರಫೇಲ್ ಫೈಟರ್ ಜೆಟ್ ಒಪ್ಪಮದಕ್ಕೆ ಸಂಬಂಧಿಸಿದಂತೆ ಮಾಹಿತಿ ಬಿಡುಗಡೆ ಮಾಡಲು ವಿಪಕ್ಷಗಳು ಒತ್ತಾಯಿಸುತ್ತಿರುವುದನ್ನು ಅವರು ಖಂಡಿಸಿದ್ದರು. 'ರಾಷ್ಟ್ರದ ಹಿತಾಸಕ್ತಿ ಎಲ್ಲ ಪಕ್ಷ ರಾಜಕೀಯಕ್ಕಿಂತ ದೊಡ್ಡದು. ನನಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಯಾವುದೇ ಅನುಮಾನವಿಲ್ಲ' ಎಂದು ಪವಾರ್ ಸ್ಪಷ್ಟವಾಗಿ ಹೇಳಿದ್ದರು.












Click it and Unblock the Notifications