ನಿರ್ಮಲಾ ಸಿತಾರಾಮನ್ ಪತಿ ಹೇಳಿಕೆ ಬಗ್ಗೆ ಶಾ ಖಡಕ್ ಉತ್ತರ

Recommended Video

      Amit Shah has a view on Nirmala Sitharaman's husband's criticism | Oneindia Kannada

      ನವದೆಹಲಿ, ಅಕ್ಟೋಬರ್ 14: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಪರಾಕಲ ಪ್ರಭಾಕರ್ ಅವರು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಅಮಿತ್ ಶಾ, ಮಾಧ್ಯಮಗಳ ಮೇಲೆ ಮತ್ತು ವಿಪಕ್ಷಗಳ ಮೇಲೆ ಹರಿಹಾಯ್ದರು.

      'ಇಂಡಿಯಾ ಟುಡೆ' ಟಿವಿಗೆ ಅವರು ನೀಡಿದ ಸಂದರ್ಶನದಲ್ಲಿ, "ಪತಿ ಮತ್ತು ಪತ್ನಿ ಇಬ್ಬರೂ ವಿಭಿನ್ನ ಅಭಿಪ್ರಾಯಗಳನ್ನು ಹೊಂದುವಂತಿಲ್ಲ ಎಂಬ ದೇಶದಲ್ಲಿ ನಾವಿದ್ದೇವೆಯೇ? ಅವರವರ ಅಭಿವ್ಯಕ್ತಿ ಸ್ವಾತಂತ್ರ್ಯ ಅವರವರಿಗಿದೆ. ನಿರ್ಮಲಾ ಸೀತಾರಾಮನ್ ಅವರ ಪತಿ ಸರ್ಕಾರದ ನಿಯಮಗಳನ್ನು ಟೀಕಿಸಿದರೆ ಅದರಲ್ಲಿ ತಪ್ಪೇನಿದೆ? ಹಣಕಾಸು ಸಚಿವರ ಪತಿ ಎಂಬ ಕಾರಣಕ್ಕೆ ಅವರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿಲ್ಲ ಎಂದರೆ ಹೇಗೆ?" ಎಂದು ಅಮಿತ್ ಶಾ ಪ್ರಶ್ನಿಸಿದರು.

      "ಭಾರತೀಯ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ. ಆದರೆ ಪತಿ ಮತ್ತು ಪತ್ನಿ ಇಬ್ಬರೂ ವಿಭಿನ್ನ ಅಭಿಪ್ರಾಯ ಹೊಂದುವಂತೆಯೇ ಇಲ್ಲ ಎನ್ನುವವರು ತಮ್ಮನ್ನು ತಾವು ಉದಾರಿಗಳು ಎಂದು ಹೇಗೆ ಕರೆದುಕೊಳ್ಳುತ್ತಾರೆ? ಆರೋಗ್ಯಕರ ರಾಜಕಾರಣದಲ್ಲಿ ಪ್ರತಿವ್ಯಕ್ತಿಗೂ ತನ್ನನ್ನು ತಾನು ಅಭಿವ್ಯಕ್ತಿಪಡಿಸುವ ಸ್ವಾತತ್ರ್ಯವಿರುತ್ತದೆ" ಎಂದು ಶಾ ಹೇಳಿದರು.

      Amit Shahs Reaction On Nirmala Sitharaman Husbands Criticism

      ಆರ್ಥಿಕ ಕುಸಿತದ ಕುರಿತು ಕಳವಳ ವ್ಯಕ್ತಪಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ, ಅರ್ಥಶಾಸ್ತ್ರಜ್ಞ ಪರಾಕಲ ಪ್ರಭಾಕರ್, ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹರಾವ್ ಮತ್ತು ಡಾ. ಮನಮೋಹನ್ ಸಿಂಗ್ ರೂಪಿಸಿದ್ದ ಆರ್ಥಿಕತೆಯ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಸಲಹೆ ನೀಡಿದ್ದರು. ಜೊತೆಗೆ ಆರ್ಥಿಕತೆ ಕುಸಿತ ಕಾಣುತ್ತಿದ್ದರೂ ಅದನ್ನು ಸರಿದಾರಿಗೆ ತರುವ ಇಚ್ಛಾಶಕ್ತಿ ಸರ್ಕಾರಕ್ಕಿಲ್ಲ ಎಂದು ದೂರಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+