ರಾಹುಲ್ ಗಾಂಧಿಯಿಂದ ಏನನ್ನು ನಿರೀಕ್ಷಿಸಲು ಸಾಧ್ಯ : ಅಮಿತ್ ವ್ಯಂಗ್ಯ

ನವದೆಹಲಿ, ಮೇ 26: "ಬಿಜೆಪಿಯು ದಣಿವರಿಯದೆ ಕೆಲಸ ಮಾಡುವ ಮತ್ತು ಜಗತ್ತಿನ ಅತ್ಯಂತ ಜನಪ್ರಿಯ ಪ್ರಧಾನಿಯನ್ನು ದೇಶಕ್ಕೆ ನೀಡಿದೆ" ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ನಾಲ್ಕು ವರ್ಷ ತುಂಬಿದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

"ದಿನಕ್ಕೆ 15-18 ಗಂಟೆ ಕೆಲಸ ಮಾಡುವ ಪ್ರಧಾನಿ ಅವರು. ಈ ಪ್ರಧಾನಿ ಬಿಜೆಪಿಯ ನಾಯಕ ಎನ್ನಲು ನಮಗೆ ಹೆಮ್ಮೆಯಾಗುತ್ತದೆ" ಎಂದು ಮೋದಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಕರ್ತರು ಕೇಳಿದ ಹಲವು ಪ್ರಶ್ನೆಗಳಿಗೆ ಈ ಸಂದರ್ಭದಲ್ಲಿ ಅಮಿತ್ ಶಾ ಉತ್ತರ ನೀಡಿದರು.

ಅಮಿತ್ ಶಾ ಪತ್ರಿಕಾಗೋಷ್ಠಿಯ ಹೈಲೈಟ್ಸ್ ಇಲ್ಲಿದೆ.

ರಾಹುಲ್ ಗಾಂಧಿ ಬಗ್ಗೆ

ಮೋದಿ ಸರ್ಕಾರದ ಸಾಧನೆಯ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ ಅವರ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, 'ಅವರು ವಿರೋಧ ಪಕ್ಷದವರು. ಅವರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ? ಅವರು ಇಂಥ ಆರೋಪ ಮಾಡಲೇಬೇಕು. ಯಾರು ಬೇಕಾದರೂ ನಮಗೆ ಸವಾಲೆಸೆಯಬಹುದು. ನಾವು ಪಾರದರ್ಶಕವಾಗಿ ಎಲ್ಲ ಮಾಹಿತಿಯನ್ನೂ ನೀಡಲು ಸಿದ್ದರಿದ್ದೇವೆ' ಎಂದರು.

ಬಿಜೆಪಿ ಪಾಲಿಗೆ ಯುದ್ಧ ಕೊನೆಯ ಆಯ್ಕೆ

ಭಾರತೀಯ ಜನತಾ ಪಕ್ಷದ ಪಾಲಿಗೆ ಯುದ್ಧ ಎಂಬುದು ಎಂದಿಗೂ ಕೊನೆಯ ಆಯ್ಕೆ. ಗಡಿ ಭದ್ರತೆಯ ಕುರಿತು ನಾವು ಝೀರೋ ಟಾಲರೆನ್ಸ್ ಹೊಂದಿದ್ದೇವೆ. ಅತ್ಯಂತ ಹೆಚ್ಚಿನ ಸಂಖ್ಯೆ ಭಯೋತ್ಪಾದಕರನ್ನು ಕೊಲ್ಲಲ್ಪಟ್ಟಿದ್ದು ಬಿಜೆಪಿ ಆಡಳಿತದಲ್ಲಿ ಎಂಬುದು ಗೊತ್ತಿರಲಿ! - ಅಮಿತ್ ಶಾ

ಇಂಧನ ಬೆಲೆ ಏರಿಕೆ ಬಗ್ಗೆ

'ಇಂಧನ ಬೆಲೆ ಏರಿಕೆಯ ಬಗ್ಗೆ ಈಗ ಸಾಕಷ್ಟು ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ಮೂರು ವರ್ಷಗಳ ಕಾಲ ಇದೇ ದರ ಇತ್ತು. ಆಗ ಯಾರೂ ಪ್ರಶ್ನೆ ಮಾಡಲಿಲ್ಲ. ಆದರೆ ಈಗ ಮೂರೇ ದಿನಕ್ಕೆ ಪ್ರಶ್ನೆ ಮಾಡುತ್ತಿದ್ದೀರಿ! ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದೆ. ನಾವು ಇದಕ್ಕೆ ದೀರ್ಘಕಾಲೀನ ಪರಿಹಾರ ಹುಡುಕುತ್ತೇವೆ'- ಅಮಿತ್ ಶಾ

ಚಂದ್ರಬಾಬು ನಾಯ್ಡು ಬಿಟ್ಟರೇನು? ನಿತೀಶ್ ಬಂದರು!

ಎನ್ ಡಿಎ ಸರ್ಕಾರದಿಂದ ಟಿಡಿಪಿ ಹೊರಹೋಗಿದ್ದು ಸತ್ಯ. ಆದರೆ ನಿತೀಶ್ ಕುಮಾರ್ ನಮ್ಮ ಜೊತೆ ವಾಪಸ್ ಬಂದರು! 2014 ರ ನಂತರ 11 ಕ್ಕೂ ಹೆಚ್ಚು ಪಕ್ಷಗಳು ಎನ್ ಡಿಎ ಜೊತೆ ಬಂದವು. ಎನ್ ಡಿಎ ಕುಟುಂಬ ವೃದ್ಧಿಯಾಗಿದೆ, ಬಲ ಕಡಿಮೆಯಾಗಿಲ್ಲ. ಚಂದ್ರಬಾಬು ನಾಯ್ಡಯ ಅವರೊಬ್ಬರೇ ಹೊರಹೋಗಿದ್ದು- ಅಮಿತ್ ಶಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+