ದೆಹಲಿಗಾಗಿ ಬಿಜೆಪಿ ದೂರದೃಷ್ಟಿ ದಾಖಲೆಯಲ್ಲಿ ಏನೇನಿರುತ್ತೆ?
ನವದೆಹಲಿ, ಜ. 2: ಆಮ್ ಆದ್ಮಿ ಅಲೆಗೆ ಬೆದರಿರುವ ಬಿಜೆಪಿ ಪ್ರಣಾಳಿಕೆ ಬಿಡುಗಡೆಯನ್ನೇ ತಡೆಹಿಡಿದಿದೆ. ಕೇಜ್ರಿವಾಲ್ ಕ್ರೇಜ್ ಕಡಿಮೆ ಮಾಡಲು ಕಿರಣ್ ಬೇಡಿ ಅವರನ್ನು ಕರೆತಂದು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದೆ. ಆದರೂ, ಆಪ್ ಅಲೆ ಕಡಿಮೆ ಮಾಡುವುದು ಸಾಧ್ಯವಾಗಿಲ್ಲ.
ನವದೆಹಲಿ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯಾಗಿರುವ ಕಾರಣ ಹೊಸ ಹೊಸ ತಂತ್ರಗಳಿಗೆ ಮೊರೆ ಹೋಗಿದೆ. ಕೇಜ್ರಿವಾಲ್ ದೆಹಲಿಗರಿಗೆ ಹಲವು ಉಚಿತ ಸೌಲಭ್ಯಗಳ ಭರವಸೆ ನೀಡಿದ್ದರೆ, ಬಿಜೆಪಿ ದೂರದೃಷ್ಟಿಗೆ ಮೊರೆ ಹೋಗಿದೆ. ಪ್ರಣಾಳಿಕೆ ಬದಲು ದೂರದೃಷ್ಟಿ ದಾಖಲೆಯನ್ನು ಬಿಡುಗಡೆ ಮಾಡಲು ಹೊರಟಿದೆ. [ಬುಕ್ಕಿಗಳ ನೆಚ್ಚಿನ ಕುದುರೆ ಬಿಜೆಪಿ]

ಈ ದೂರದೃಷ್ಟಿ ದಾಖಲೆ ಕುರಿತು ಕೆಲವು ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.
1. ದೂರದೃಷ್ಟಿ ದಾಖಲೆಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. [ಸುಂದರಿ ಶಾಜಿಯಾಗೆ ನನ್ನ ಮತ]
2. ಈ ದಾಖಲೆಯಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯಿಂದಾಗುವ ಲಾಭಗಳು ಹಾಗೂ ಇದಕ್ಕಾಗಿ ಸ್ಥಳೀಯ ಸರ್ಕಾರದಿಂದ ಕೇಂದ್ರಕ್ಕೆ ಅಗತ್ಯವಾದ ಸಹಕಾರವನ್ನು ಒತ್ತಿ ಹೇಳುವ ಅಂದಾಜಿದೆ.
3. ನವದೆಹಲಿಯಲ್ಲಿ ಮರೀಚಿಕೆಯಾಗಿರುವ ಮಹಿಳಾ ಭದ್ರತೆ ಹಾಗೂ ಇತರ ಅಪರಾಧಗಳನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಕಾರ್ಯನಿರ್ವಹಣೆಯ ಅನಿವಾರ್ಯತೆಯನ್ನು ಹೇಳಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. [ಆಪ್ ನಿಂದ 70 ಅಂಶಗಳ ಪ್ರಣಾಳಿಕೆ]
4. ಆಪ್‌ನಂತೆ ತಕ್ಷಣದ ಲಾಭದ ಬದಲು ದೀರ್ಘ ಕಾಲಿಕ ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಮೂರು ದಶಕಗಳ ಯೋಜನೆಗಳನ್ನು ಪ್ರಕಟಿಸಿ ದೆಹಲಿ 2050 ಘೋಷಣೆ ಹೊರಡಿಸುವ ನಿರೀಕ್ಷೆಯಿದೆ.
5. ದೇಶದ ರಾಜಧಾನಿ ಇಂದು ಜಗತ್ತಿನ ಅತ್ಯಂತ ಕಲುಷಿತ ನಗರಗಳಲ್ಲಿ ಒಂದು. ಆದ್ದರಿಂದ ನವದೆಹಲಿಯನ್ನು ಜಾಗತಿಕ ಮಟ್ಟದ ನಗರವನ್ನಾಗಿ ಪುನರ್ ನಿರ್ಮಿಸುವುದು ಹಾಗೂ ಜಾಗತ್ತಿನ ಪ್ರಮುಖ ನಗರಗಳಲ್ಲಿ ಒಂದಾಗಿ ಗುರುತಿಸುವುಂತೆ ಅಭಿವೃದ್ಧಿಪಡಿಸುವ ಯೋಜನೆ ಅಮಿತ್ ಶಾ ತಲೆಯಲ್ಲಿದೆ ಎನ್ನಲಾಗಿದೆ. [ಕೇಜ್ರಿವಾಲ್ ಗೆ ಮತ್ತೈದು ಪ್ರಶ್ನೆ]
6. ದೂರದೃಷ್ಟಿ ದಾಖಲೆಯು ನವದೆಹಲಿಯ ಪ್ರತಿ ನಾಗರಿಕನನ್ನು ಕೇಂದ್ರೀಕೃಕರಿಸಿರುತ್ತದೆ ಎಂದು ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಈಗಾಗಲೇ ಘೋಷಿಸಿದ್ದಾರೆ.
7. ಇಂದು ನವದೆಹಲಿ ಎದುರಿಸುತ್ತಿರುವ ಗೊಂದಲಗಳನ್ನು ದೂರೀಕರಿಸಿ ಅಭಿವೃದ್ಧಿಯನ್ನು ಮಂತ್ರವಾಗಿಸಿಕೊಳ್ಳಲಾಗುವುದು. ನವದೆಹಲಿಯನ್ನು ಅರಾಜಕತೆಯ ನಗರವಾಗಿಸುವ ಬದಲು ಜಾಗತಿಕ ನಗರವಾಗಿಸುವುದು ನಮ್ಮ ಉದ್ದೇಶ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೈಟ್ಲಿ ಈಗಾಗಲೇ ಹೇಳಿದ್ದಾರೆ.












Click it and Unblock the Notifications