ಭಾರತೀಯ ಸೇನೆ ಕೈಸೇರಿದ ಅಮೆರಿಕದ ಅತ್ಯಾಧುನಿಕ ರೈಫಲ್ಸ್

ನವದೆಹಲಿ, ಡಿಸೆಂಬರ್ 15: ಭಾರತೀಯ ಸೇನೆಗೆ ಸುಮಾರು 15 ವರ್ಷಗಳ ಬಳಿಕ ಅಮೆರಿಕ ನಿರ್ಮಿತ ಅತ್ಯಾಧುನಿಕ ಎಸ್ಐಜಿ-716 ಅಸಾಲ್ಟ್ ರೈಫಲ್ ಪೂರೈಕೆಯಾಗುತ್ತಿದೆ. ಒಟ್ಟು 72,400 ರೈಫಲ್ಸ್ ಗಳಲ್ಲಿ ಈಗಾಗಲೇ 10 ಸಾವಿರ ಎಸ್ಐಜಿ-716 ರೈಫಲ್ಸ್ ಭಾರತೀಯ ಸೇನೆ ಈಗಾಗಲೇ ಸ್ವೀಕರಿಸಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ಅತೀ ದೂರದ ಗುರಿ ತಲುಪುವ ಸಾಮರ್ಥ್ಯ ಹೊಂದಿರುವ ಈ ರೈಫಲ್ ಗಳನ್ನು ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿನ ಮುಂಚುಣಿ ನೆಲೆಗಳಲ್ಲಿರುವ ಸೈನಿಕರಿಗೆ ಮಾತ್ರ ಕೊಡಲು ನಿರ್ಧರಿಸಿದೆ. ಉಳಿದ ಸೈನಿಕರಿಗೆ ರಷ್ಯಾ ಸಹಭಾಗಿತ್ವದಲ್ಲಿ ತಯಾರಿಸಲಾಗುತ್ತಿರುವ ಕಲಾಶ್ನಿಕೋವ್ ರೈಫಲ್ ಗಳನ್ನು ಮುಂದಿನ ಹಂತದಲ್ಲಿ ನೀಡಲಾಗುತ್ತದೆ.

ಪ್ರಸ್ತುತವಾಗಿ ಬಳಸಲಾಗುತ್ತಿರುವ 5.56 ಎಂಎಂ ಇನ್ಸಾಸ್ ರೈಫಲ್ ಗಳನ್ನು ಬದಲಾವಣೆ ಮಾಡಲು ಸೇನೆ 2005 ರಲ್ಲಿ ಬೇಡಿಕೆ ಇಟ್ಟಿತ್ತು. ಒಟ್ಟು 382 ಬೆಟಾಲಿಯನ್ ಗಳಿಗೆ (ಪ್ರತಿಯೊಂದರಲ್ಲಿಯೂ 850 ಸೈನಿಕರು) ಅತ್ಯಾಧುನಿಕ ಗನ್ ಗಳನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಭ್ರಷ್ಟಾಚಾರ ಆರೋಪಗಳಿಂದ ರೈಫಲ್ ಖರೀದಿ ಒಪ್ಪಂದ ವಿಳಂಬವಾಗಿತ್ತು.

American Sophisticated Rifles Handed over To The Indian Army

ಈಗ ಸುಮಾರು 15 ವರ್ಷಗಳ ಬಳಿಕ ಎಸ್ಐಜಿ-716 ಅಸಾಲ್ಟ್ ರೈಫಲ್ ಭಾರತೀಯ ಸೇನೆಯ ಬತ್ತಳಿಕೆಗೆ ಬರುತ್ತಿದೆ. ನಿರ್ಣಾಯಕ ಕಾರ್ಯಾಚರಣೆಗಳ ಅವಶ್ಯಕತೆಗಳಿಗಾಗಿ ಭಾರತವು ಅಮೆರಿಕದ ಎಸ್ಐಜಿ ಸೌರ್ ಸಂಸ್ಥೆಯಿಂದ 72,400 ಅಸಾಲ್ಟ್ ರೈಫಲ್ಸ್ ಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+