ದೆಹಲಿಯಲ್ಲಿ ನವೆಂಬರ್ 13-17ರವರೆಗೆ ಸಮ-ಬೆಸ ನಿಯಮ ಜಾರಿ

Subscribe to Oneindia Kannada

ನವದೆಹಲಿ, ನವೆಂಬರ್ 9: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನವೆಂಬರ್ 13 ರಿಂದ 17ರವರೆಗೆ ಕಾರುಗಳ ಪ್ರಯಾಣಕ್ಕೆ ಸಮ-ಬೆಸ ನಿಯಮ ಜಾರಿಗೆ ಬರಲಿದೆ ಎಂದು 'ಎಎನ್ಐ' ಸುದ್ದಿ ಸಂಸ್ಥೆ ವರದಿ ಮಾಡಿದೆ.

ವಾಯು ಮಾಲಿನ್ಯಕ್ಕೆ ತತ್ತರಿಸಿದ ದೆಹಲಿ, ಭಾನುವಾರದವರೆಗೆ ಶಾಲೆಗಳು ಬಂದ್

ದೆಹಲಿಯಲ್ಲಿ ವಾಯು ಮಾಲಿನ್ಯ ಮಿತಿ ಮೀರಿದ್ದು ಈ ಹಿನ್ನಲೆಯಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಈ ಕ್ರಮ ಕೈಗೊಳ್ಳಲಾಗುತ್ತಿದೆ.

Air Pollution: 'Odd-Even' policy to come back in Delhi next week

ಇಂದು ಬೆಳಗ್ಗೆಯಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಮ-ಬೆಸ ನಿಯಮ ಜಾರಿಗೆ ತರಲು ಚಿಂತನೆ ನಡೆಸುತ್ತಿದ್ದೇವೆ ಎಂದಿದ್ದರು.

ಆದರೆ ದೆಹಲಿಯ ಸುತ್ತ ಮುತ್ತಲಿನ ರಾಜ್ಯಗಳಲ್ಲಿ ಬೆಳೆಗಳನ್ನು ಉರಿಸುವುದಕ್ಕೆ ಪರ್ಯಾಯ ಕಂಡುಕೊಳ್ಳದಿದ್ದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಬರಲು ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಪ್ರತಿಪಾದಿಸಿದ್ದಾರೆ.

"ರಾಜ್ಯ ಸರಕಾರಗಳು ಬೆಳೆಗಳನ್ನು ಉರಿಸುವುದಕ್ಕೆ ಪರ್ಯಾಯವಾಗಿ ಆರ್ಥಿಕ ಕಾರ್ಯಸಾಧು ವಿಧಾನಗಳನ್ನು ಕಂಡುಕೊಳ್ಳದೇ ಇದ್ದಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಬರಲು ಸಾಧ್ಯವಿಲ್ಲ. ಒಂದೊಮ್ಮೆ ಕೇಂದ್ರ ಸರಕಾರ, ಉತ್ತರ ಪ್ರದೇಶ, ಪಂಜಾಬ್ ಮತ್ತು ಹರ್ಯಾಣ ಸರಕಾರಗಳು ರಾಜಕೀಯವನ್ನು ಬದಿಗಿಟ್ಟು ಒಟ್ಟಾದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು," ಎಂದೂ ಅವರು ಹೇಳಿದ್ದಾರೆ.

ದೆಹಲಿ ಮಾಲಿನ್ಯ: ನಿರ್ಮಾಣ ಕಾರ್ಯ, ಟ್ರಕ್ ಪ್ರವೇಶಗಳಿಗೆ ನಿರ್ಬಂಧ

ಕಳೆದ ವರ್ಷ ದೆಹಲಿಯಲ್ಲಿ ಆಮ್ ಆದ್ಮಿ ಸರಕಾರ ಸಮ ಮತ್ತು ಬೆಸ ಸಂಖ್ಯೆಯ ನಂಬರ್ ಪ್ಲೇಟ್ ಹೊಂದಿರುವ ವಾಹನಗಳಿಗೆ ದಿನ ಬಿಟ್ಟು ದಿನ ಪ್ರಯಾಣಕ್ಕೆ ಅವಕಾಶ ಕಲ್ಪಿಸಿತ್ತು. ಜನವರಿ ಮತ್ತು ಏಪ್ರಿಲ್ ನಲ್ಲಿ ಎರಡು ಅವಧಿಗೆ 14 ದಿನಗಳ ಕಾಲ ಈ ನಿಯಮ ಜಾರಿಗೆ ತರಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The car rationing system will be implemented in the national capital from November 13 to 17, sources have told ANI. The decision has been taken in view of the prevailing air pollution in Delhi and parts of North India.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ