ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ವಾಯು ಸೇನೆಯ ಮುಂದಿನ ಮುಖ್ಯಸ್ಥ ಆರ್ ಕೆಎಸ್ ಬದೌರಿಯಾ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 19: ಭಾರತೀಯ ವಾಯು ಸೇನೆಯ ಮುಂದಿನ ಮುಖ್ಯಸ್ಥರು ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಏರ್ ಮಾರ್ಷಲ್ ಆರ್ ಕೆಎಸ್ ಬದೌರಿಯಾ ಅವರನ್ನು ಮುಂದಿನ ಮುಖ್ಯಸ್ಥರನ್ನಾಗಿ ಸರ್ಕಾರವು ಗುರುವಾರ ಘೋಷಣೆ ಮಾಡಿದೆ. ಏರ್ ಚೀಫ್ ಮಾರ್ಷಲ್- ಈಗಿನ ಮುಖ್ಯಸ್ಥ ಬಿ. ಎಸ್. ಧನೋವಾ ಸೆಪ್ಟೆಂಬರ್ ಮೂವತ್ತರಂದು ನಿವೃತ್ತರಾಗಲಿದ್ದಾರೆ.

ಸೇನೆ ಬತ್ತಳಿಕೆ ಸೇರಿದ ಬಾಲಕೋಟ್ ದಾಳಿಗೆ ಬಳಸಿದ ಆಸ್ತ್ರ ಸ್ಪೈಸ್ ಬಾಂಬ್ಸೇನೆ ಬತ್ತಳಿಕೆ ಸೇರಿದ ಬಾಲಕೋಟ್ ದಾಳಿಗೆ ಬಳಸಿದ ಆಸ್ತ್ರ ಸ್ಪೈಸ್ ಬಾಂಬ್

ಸದ್ಯಕ್ಕೆ ಬದೌರಿಯಾ ಅವರು ವಾಯು ಸೇನೆಯ ಎರಡನೇ ಮುಖ್ಯಸ್ಥರಾಗಿದ್ದಾರೆ. ಅಧಿಕಾರಿಗಳ ವಲಯದಲ್ಲಿ ಅವರನ್ನು 'ಛೋಟು' ಎಂದು ಕರೆಯಲಾಗುತ್ತದೆ. ಐವತ್ತೊಂಬತ್ತು ಸಾವಿರ ಕೋಟಿ ರುಪಾಯಿಯ ರಫೇಲ್ ಯುದ್ಧ ವಿಮಾನ ವ್ಯವಹಾರವನ್ನು ಅಂತಿಮಗೊಳಿಸುವಲ್ಲಿ ಮುಂಚೂಣಿಯಲ್ಲಿ ಇದ್ದವರು ಬದೌರಿಯಾ.

Air Chief Marshal RKS Bhaduaria Will Be Next Indian Air Force Chief

ಒಂದು ವೇಳೆ ವಾಯು ಸೇನೆ ಮುಖ್ಯಸ್ಥರಾಗಿ ಬದೌರಿಯಾ ಅವರನ್ನು ನೇಮಿಸದಿದ್ದರೆ ಸೆಪ್ಟೆಂಬರ್ ಮೂವತ್ತರಂದು ನಿವೃತ್ತರಾಗಬೇಕಿತ್ತು. ಏರ್ ಮಾರ್ಷಲ್ ಗಳಾದ ಬಿ. ಸುರೇಶ್ ಹಾಗೂ ಆರ್. ನಂಬಿಯಾರ್ ಕೂಡ ಮುಖ್ಯಸ್ಥರ ಹುದ್ದೆ ರೇಸ್ ನಲ್ಲಿ ಇದ್ದ ಇತರ ಇಬ್ಬರು. ಸಾಮಾನ್ಯವಾಗಿ ಮುಖ್ಯಸ್ಥರ ನಿವೃತ್ತಿಯ ದಿನ ಯಾರು ಸೇವಾವಧಿಯಲ್ಲಿ ಹಿರಿಯರು ಇರುತ್ತಾರೋ ಅವರಿಗೆ ಪದೋನ್ನತಿ ನೀಡಿ, ಮುಖ್ಯಸ್ಥರಾಗಿ ಮಾಡುತ್ತಾರೆ.

English summary
Air chief marshal RKS Bhaduaria will be next Indian Air Force chief, announced on Thursday by government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X