• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೃಷಿ ಕಾನೂನು ರದ್ದು: ಬಾಲಿವುಡ್ ಸೆಲೆಬ್ರಿಟಿಗಳ ಪ್ರತಿಕ್ರಿಯೆ

|
Google Oneindia Kannada News

ನವದೆಹಲಿ, ನವೆಂಬರ್ 19: ವಿವಾದಿತ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಒಂದು ವರ್ಷದಿಂದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆ ಇಂದು ಈಡೇರಿದೆ. ಮೂರು ಕೃಷಿ ಕಾನೂನುಗಳನ್ನು ಕೇಂದ್ರವು ರದ್ದುಗೊಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ. ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ಅವರ ಜನ್ಮದಿನದ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ದೂರದರ್ಶನದ ಭಾಷಣದಲ್ಲಿ ಘೋಷಣೆ ಮಾಡಿದ ಮೋದಿ, ಈ ಸುಧಾರಣಾ ಕ್ರಮಗಳ ವಿರುದ್ಧದ ತಮ್ಮ ಆಂದೋಲನವನ್ನು ಕೈಬಿಟ್ಟು ಹೊಸ ಆರಂಭಕ್ಕೆ ಕರೆ ನೀಡಿ ಪ್ರತಿಭಟನಾ ನಿರತ ರೈತರಿಗೆ ಮನವಿ ಮಾಡಿದರು.

ನವೆಂಬರ್ 29 ರಿಂದ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕಾನೂನುಗಳನ್ನು ಹಿಂತೆಗೆದುಕೊಳ್ಳಲಾಗುತ್ತದೆ ಎಂದು ಪ್ರಧಾನಿ ಶುಕ್ರವಾರ ಹೇಳಿದರು. ಮೋದಿಯ ಘೋಷಣೆಯಿಂದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ವಿರೋಧಪಕ್ಷದ ನಾಯಕರು ಮೋದಿಯ ಘೋಷಣೆಯನ್ನು ಸ್ವಾಗತಿಸಿದ್ದಾರೆ. ಇನ್ನೂ ಬಾಲಿವುಡ್ ಸ್ಟಾರ್ ನಟ ನಟಿಯರು ಮೋದಿ ಅವರ ಘೋಷಣೆಯನ್ನು ಸ್ವಾಗತಿಸಿದ್ದಾರೆ. ತಾಪ್ಸಿ ಪನ್ನು, ರಿಚಾ ಚಡ್ಡಾ, ಹಿಮಾಂಶಿ ಖುರಾನಾ, ಕಂಗನಾ ರಣಾವತ್ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮೂರು ವಿವಾದಾಸ್ಪದ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಪ್ರಧಾನಿ ಮೋದಿಯವರ ನಿರ್ಧಾರದ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ. ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆಯನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಚಿತ್ರರಂಗದ ಹಲವು ಗಣ್ಯರು ಕೂಡ ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ.

"ಇದೊಂದು ಅದ್ಭುತ ಸುದ್ದಿ. ಕೃಷಿ ಕಾನೂನುಗಳನ್ನು ಹಿಂಪಡೆದಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದಗಳು. ರೈತರೇ, ಶಾಂತಿಯುತ ಪ್ರತಿಭಟನೆಗಳ ಮೂಲಕ ನ್ಯಾಯಯುತ ಬೇಡಿಕೆಗಳನ್ನು ಎತ್ತಿದ್ದಕ್ಕಾಗಿ ಧನ್ಯವಾದಗಳು. ಶ್ರೀ ಗುರುನಾನಕ್ ಅವರ ಜಯಂತಿಯಂದು ನಿಮ್ಮ ಕುಟುಂಬಗಳಿಗೆ ಸಂತೋಷದಿಂದ ಮರಳುತ್ತೀರಿ ಎಂದು ಭಾವಿಸುತ್ತೇವೆ" ಎಂದು ಸೋನು ಸೂದ್ ಟ್ವೀಟ್ ಮಾಡಿದ್ದಾರೆ.

ಟ್ವೀಟ್ ಒಂದನ್ನು ರೀಟ್ವೀಟ್ ಮಾಡಿರುವ ನಟಿ ರಿಚಾ ಚಾದ, ಇದು ರೈತರ ಗೆಲುವು ಎಂದಿದ್ದಾರೆ. "ಜೀತ್ ಗಯೇ ಆಪ್! ಆಪ್ ಕಿ ಜೀತ್ ಸಬ್ ಕಿ ಜೀತ್ ಹೈ (ನೀವು ಗೆದ್ದಿದ್ದೀರಿ. ನಿಮ್ಮ ಗೆಲುವು ಎಲ್ಲರ ಗೆಲುವು)" ಎಂದು ಬರೆದಿದ್ದಾರೆ.

ಈ ನಿರ್ಧಾರವನ್ನು ಶ್ಲಾಘಿಸಿದವರಲ್ಲಿ ತಾಪ್ಸಿ ಪನ್ನು ಮೊದಲಿಗರು. ಗುರುನಾನಕ್ ಜಯಂತಿಯಂದು ಎಲ್ಲರಿಗೂ ಶುಭ ಹಾರೈಸಿದ ಅವರು ಪ್ರಧಾನಿ ಮೋದಿಯವರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ನಟಿ ಶ್ರುತಿ ಸೇಠ್ ಟ್ವೀಟ್ ಮಾಡಿ, "ಇಷ್ಟು ದಿನ ಹಲವಾರು ರೈತರು ಜೀವಗಳನ್ನು ಕಳೆದುಕೊಂಡಿದ್ದಾರೆ. ಆದರೆ ರೈತರು ತಮ್ಮ ನೆಲವನ್ನು ಶಾಂತಿಯುತವಾಗಿ ಹಿಡಿದಿದ್ದಕ್ಕಾಗಿ ಹೆಮ್ಮೆಪಡುತ್ತಾರೆ! ಜೈ ಕಿಸಾನ್. ಜೈ ಹಿಂದ್ (sic)" ಎಂದು ಟ್ವೀಟ್ ಮಾಡಿದ್ದಾರೆ.

ಬಿಗ್ ಬಾಸ್ 13 ಖ್ಯಾತಿಯ ಪಂಜಾಬಿ ನಟಿ ಹಿಮಾಂಶಿ ಖುರಾನಾ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ಎಲ್ಲಾ ರೈತರಿಗೆ ಅಭಿನಂದನೆಗಳು. "ಅಂತಿಮವಾಗಿ ಗೆಲುವು ನಿಮ್ಮದಾಗಿದೆ, ಎಲ್ಲಾ ರೈತರಿಗೆ ಅಭಿನಂದನೆಗಳು. ಗುರುನಾನಕ್ ದೇವ್ ಜಿಯವರ ಪ್ರಕಾಶ್ ಪರ್ವ್ನ ದೊಡ್ಡ ಉಡುಗೊರೆ. ಹ್ಯಾಪಿ ಗುರುಪುರಬ್" ಎಂದು ಬರೆದಿದ್ದಾರೆ.

ಇಂದು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಪ್ರಧಾನಿ ಮೋದಿ ಘೋಷಿಸಿದರು. ಗುರುನಾನಕ್ ದೇವ್ ಅವರ ಜಯಂತಿ ಸಂದರ್ಭದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಸರ್ಕಾರವು ಈ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಸಾಂವಿಧಾನಿಕ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಇಷ್ಟೇ ಅಲ್ಲ ರೈತರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ ಪ್ರಧಾನಿ ಸರ್ಕಾರ ಸಣ್ಣ ರೈತರಿಗಾಗಿ ಹಲವಾರು ಕಲ್ಯಾಣ ಯೋಜನೆಗಳನ್ನು ತಂದಿದೆ ಎಂದು ಹೇಳಿದರು.

English summary
Friday proved to be a very historic day for farmers across the country. The Prime Minister of the country, Narendra Modi, while addressing the nation, announced the withdrawal of the new three agricultural laws implemented.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X