• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂದಿರಾ ಗಾಂಧಿ ವಿಮಾನ ನಿಲ್ದಾಣದ ಟರ್ಮಿನಲ್-2 ಪುನಾರಂಭ

|

ನವದೆಹಲಿ, ಸಪ್ಟೆಂಬರ್.28: ಕಳೆದ ಆರು ತಿಂಗಳ ನಂತರ ನವದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ಅಕ್ಟೋಬರ್.01ರಿಂದ ಪುನಃ ಕಾರ್ಯಾರಂಭ ಮಾಡಲಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರವು ಸೋಮವಾರ ತಿಳಿಸಿದೆ.

ಭಾರತ ಲಾಕ್ ಡೌನ್ ಹಿನ್ನೆಲೆ ಆರು ತಿಂಗಳಿನಿಂದ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕ ಪ್ರಮಾಣವನ್ನು ನಿರ್ಬಂಧಿಸಲಾಗಿತ್ತು. ಈವರೆಗೂ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್-3 ಮಾತ್ರ ಸಾರ್ವಜನಿಕ ಪ್ರಮಾಣಕ್ಕೆ ತೆರೆದುಕೊಂಡಿತ್ತು.

ಹುಬ್ಬಳ್ಳಿ-ಮುಂಬೈ ನಡುವೆ ಸೆ. 19ರಿಂದ ಇಂಡಿಗೋ ಹಾರಾಟ

ಟರ್ಮಿನಲ್-2ರ ಪುನಾರಂಭದಿಂದ 48 ವಿಮಾನಗಳ ಆಗಮನ ಮತ್ತು 48 ವಿಮಾನಗಳ ನಿರ್ಗಮನ ಸೇರಿ ಒಟ್ಟು 96 ವಿಮಾನಗಳು ಸಂಚರಿಸಲಿವೆ. ಅಕ್ಟೋಬರ್ ತಿಂಗಳಾಂತ್ಯದ ವೇಳೆಗೆ ಈ ಸಂಖ್ಯೆಯನ್ನು 180ಕ್ಕೆ ಹೆಚ್ಚಿಸಲಾಗುತ್ತದೆ ಎಂದು ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರಿವು ತಿಳಿಸಿದೆ.

"ಟರ್ಮಿನಲ್ ಇಂಡಿಗೊದ 2000 ಸರಣಿ ವಿಮಾನಗಳ ಜೊತೆಗೆ ಆರಂಭಿಕ ಹಂತದಲ್ಲಿ ಕಾರ್ಯಾಚರಣೆ ಪುನರಾರಂಭಿಸಲಾಗುತ್ತದೆ. 27 ದೇಶಗಳಿಗೆ ವಿಮಾನ ಸಂಚಾರ ಆರಂಭಿಸಲಾಗುತ್ತಿದ್ದು, 11 ಗೋ ಏರ್ ಮತ್ತು 16 ಇಂಡಿಗೋ ವಿಮಾನಗಳು ಪ್ರಯಾಣಿಸಲಿವೆ ಎಂದು ಪ್ರಾಧಿಕಾರವು ತಿಳಿಸಿದೆ.

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ ನಿಂದ ಅಕ್ಟೋಬರ್.01ರಂದು ಬೆಳಗ್ಗೆ 6.25 ಗಂಟೆಗೆ ಶ್ರೀನಗರಕ್ಕೆ ಮೊದಲ ಇಂಡಿಗೋ ವಿಮಾನವು ಪ್ರಯಾಣ ಬೆಳೆಸಲಿದೆ. ವಿಮಾನ ನಿಲ್ದಾಣದ 2ನೇ ಟರ್ಮಿನಲ್ ನಿಂದ ಅಹ್ಮದಾಬಾದ್, ಅಮೃತಸರ್, ಭುವನೇಶ್ವರ್, ಭೋಪಾಲ್, ಬೆಂಗಳೂರು, ಕೊಚ್ಚಿನ್, ಗುವಾಹಟಿ, ಇಂದೋರ್, ಜಮ್ಮು, ಲಕ್ನೋ, ಚೆನ್ನೈ, ಪಾಟ್ನಾ, ಶ್ರೀನಗರ್, ತಿರುವನಂತಪುರಂ, ವಿಶಾಖಪಟ್ಟಣಂಗೆ ವಿಮಾನಗಳು ಸಂಚರಿಸಲಿವೆ.

   UNLOCK 5.0 ಎನಿರತ್ತೆ ? ಎನಿರಲ್ಲಾ?? | Oneindia Kannada

   English summary
   After 6 Months Delhi Airport Terminal-2 Resuming Operations From Oct.01.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X