ರಾಮಮಂದಿರ ಭೂಮಿ ಪೂಜೆ ಒಂದು ಭಾವನಾತ್ಮಕ ಕ್ಷಣ: ಅಡ್ವಾಣಿ

ನವದೆಹಲಿ, ಆಗಸ್ಟ್ 05: ಮಂದಿರದ ನನ್ನ ಕನಸು ನನಸಾಗುತ್ತಿದೆ ಎಂದು ಬಿಜೆಪಿ ಹಿರಿಯ ಮುಖಂಡ ಎಲ್‌ಕೆ ಅಡ್ವಾಣಿ ಹೇಳಿದ್ದಾರೆ.

Recommended Video

      ಶ್ರೀರಾಮನ ಭಕ್ತಿಯಲ್ಲಿ ಮುಳುಗಿಹೋದ ಮೋದಿ | Oneindia Kannada

      ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಿಲಾನ್ಯಾಸದ ದಿನವು ಕೇವಲ ನನಗಷ್ಟೇ ಅಲ್ಲ ಇಡೀ ದೇಶಕ್ಕೇ ಭಾವನಾತ್ಮಕ ಮತ್ತು ಐತಿಹಾಸಿಕ ದಿನವಾಗಿದೆ.

      ಅಲ್ಲದೆ ಶ್ರೀರಾಮ ಜನ್ಮಭೂಮಿಯಲ್ಲಿ ವಿಜೃಂಭಣೆಯ ಮತ್ತು ವೈಭವೋಪೇತ ದೇವಸ್ಥಾನ ನಿರ್ಮಾಣವಾಗಬೇಕು ಎಂಬುದು ಬಿಜೆಪಿಯ ಆಕಾಂಕ್ಷೆ ಮತ್ತು ಗುರಿಯಾಗಿತ್ತು.

      Advani Says PM Modi Laying Ram Mandir Foundation Stone Emotional Moment

      ರಾಮ ಮಂದಿರವು ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವ ಬಲಿಷ್ಠ , ಸಮೃದ್ಧ ಹಾಗೂ ಸಾಮರಸ್ಯದ ಭಾರತವನ್ನು ಪ್ರತಿಬಿಂಬಿಸಲಿದೆ ಎಂದು ಅವರು ಹೇಳಿದ್ದಾರೆ.

      ಕೆಲವು ಬಾರಿ ಮಹತ್ವದ ಕನಸುಗಳು ನನಸಾಗಲು ದೀರ್ಘಕಾಲ ತೆಗೆದುಕೊಳ್ಳುತ್ತದೆ. ಆದರೆ ಆ ಕನಸುಗಳು ನೆರವೇರಿದಾಗ ನಿಜಕ್ಕೂ ಜೀವನ ಸಾರ್ಥಕವಾಗುತ್ತದೆ. ನನ್ನ ಹೃದಯಕ್ಕೆ ತೀರಾ ಹತ್ತಿರವಾದ ಅಂಥ ಕನಸು ಈಗ ನೆರವೇರುತ್ತಿದೆ ಎಂದು ಅಡ್ವಾಣಿ ಹೇಳಿದ್ದಾರೆ.

      ಇಂದು ಮಧ್ಯಾಹ್ನ 12.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ. ಸಾಕಷ್ಟು ಮಂದಿ ಧಾರ್ಮಿಕ , ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ.

      ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೊರತುಪಡಿಸಿ ಇನ್ಯಾವುದೇ ರಾಜ್ಯದ ಮುಖ್ಯಮಂತ್ರಿಗಳಿಗೆ ಕಾರ್ಯಕ್ರಮಕ್ಕೆ ಆಹ್ವಾನವನ್ನು ನೀಡಿಲ್ಲ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+