ಮತ್ತೊಂದು ಅವಧಿಗೆ ಅಧ್ಯಕ್ಷರಾದ ಲಾಲ್ ಕೃಷ್ಣ ಅಡ್ವಾಣಿ
ನವದೆಹಲಿ, ಸೆಪ್ಟೆಂಬರ್ 19: ಬಿಜೆಪಿಯ 'ಮಾರ್ಗದರ್ಶಕ್ ಮಂಡಲ್' ನ ಸದಸ್ಯರಾಗಿರುವ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರನ್ನು ಲೋಕಸಭೆ ನೈತಿಕ ಸಮಿತಿಯ ಅಧ್ಯಕ್ಷರನ್ನಾಗಿ ಮರು ನೇಮಕ ಮಾಡಲಾಗಿದೆ.
ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಸಮಿತಿಯನ್ನು ಸೋಮವಾರ ಪುನಾರಚಿಸಿದ್ದು ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಅಡ್ವಾಣಿ ಅವರನ್ನು ಮರು ನೇಮಕ ಮಾಡುವುದರ ಜತೆಗೆ ಈ ಸಮಿತಿಯಲ್ಲಿದ್ದ 14 ಸದಸ್ಯರನ್ನು ಮತ್ತೊಂದು ಅವಧಿಗೆ ಮುಂದುವರಿಯುವಂತೆ ಅವಕಾಶ ನೀಡಿದರು.

ಲೋಕಸಭೆಯ ಉಪ ಸ್ಪೀಕರ್ ಆಗಿರುವ ಎಂ. ತಂಬಿದೊರೈ ಅವರನ್ನು ಈ ಸಮಿತಿಯ ಉಪಾಧ್ಯಕ್ಷರಾಗಿರಲಿದ್ದಾರೆ.
ಈ ಸಮಿತಿಯು ಪ್ರಭಾವಿ ಸಮಿತಿಯಾಗಿದ್ದು, ಯಾವುದೇ ಸಂಸತ್ ಸದಸ್ಯ ಅಥವಾ ಸಿಬ್ಬಂದಿ ಅನುಚಿತವಾಗಿ ವರ್ತಿಸಿದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕಸಭೆಯ ಸ್ಪೀಕರ್ ಗೆ ಶಿಫಾರಸು ಮಾಡುವ ಅಧಿಕಾರ ಹೊಂದಿದೆ. ಸಂಸತ್ತಿನಲ್ಲಿ ನಡೆಯುವ ಯಾವುದೇ ಅಸಭ್ಯ ಪ್ರಕರಣಗಳನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸುವ ಅಧಿಕಾರ ಹೊಂದಿದೆ.












Click it and Unblock the Notifications