ಓಂ ಬಿರ್ಲಾಗೆ ವಿಪಕ್ಷ ನಾಯಕ ರಂಜನ್ ಅಭಿನಂದಿಸಿದ ರೀತಿ ವಾಹ್!
ನವದೆಹಲಿ, ಜೂನ್ 19: ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಅವರು ತಮ್ಮ ಮೊದಲ ಭಾಷಣದಲ್ಲೇ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. 17ನೇ ಲೋಕಸಭೆ ಸ್ಪೀಕರ್ ಆಯ್ಕೆಯಾದ ಓಂ ಬಿರ್ಲಾ ಅವರಿಗೆ ಅಭಿನಂದನೆ ಸಲ್ಲಿಸುವ ಭಾಷಣದಲ್ಲಿ ರಂಜನ್ ಚೌಧುರಿ ಅವರಾಡಿದ ಮಾತುಗಳು ಗಮನ ಸೆಳೆದವು.
ಪ್ರಧಾನಿ ನರೇಂದ್ರ ಮೋದಿ ಸೇರಿ ವಿವಿಧ ಪಕ್ಷಗಳ ನಾಯಕರು ನೂತನ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬುಧವಾರದ ಸಂಸರ್ ಕಲಾಪದ ವೇಳೆ ಅಭಿನಂದನೆ ಸಲ್ಲಿಸಿದರು. ಆದರೆ, ಕಾಂಗ್ರೆಸ್ ಸಂಸದೀಯ ನಾಯಕ ಅಧಿರ್ ರಂಜನ್ ಚೌಧರಿ ಅವರು ಪಕ್ಷ, ವಿಪಕ್ಷ ಇರುವುದಿಲ್ಲ, ಸಂಖ್ಯಾ ಬಲವಿಲ್ಲವೆಂದು ಸಕ್ರಿಯರಾಗದೆ ಇರಬೇಡಿ ಎಂದು ಪ್ರಧಾನಿ ಮೋದಿ ಆಡಿದ ಮಾತುಗಳನ್ನು ಉಲ್ಲೇಖಿಸಿ, ನೀವು ನಿಷ್ಪಕ್ಷವಾಗಿರುತ್ತೀರಿ ಎಂಬ ನಂಬಿಕೆಯಿದೆ ಎಂದರು.

ಸಂಸದೀಯ ಪ್ರಜಾಪ್ರಭುತ್ವದ ಏಳಿಗೆಗೆ ಕಾಂಗ್ರೆಸ್ ಬದ್ಧವಾಗಿದೆ, ಸದನದ ಘನತೆ ಕಾಪಾಡಬೇಕು. ನೆಹರು ಅವರ ಪ್ರಕಾರ ಸ್ಪೀಕರ್ಎಂದರೆ ದೇಶದ, ಜನರ ಸ್ವಾತಂತ್ರ್ಯವನ್ನು ಪ್ರತಿನಿಧಿಸುವವರು. ಸದನವನ್ನು ಪಾಲಿಸುವವರು ಎಂದರು.
ನಂತರ ಸದನದಲ್ಲಿ ಕೇಳಿ ಬಂದ ಜೈಶ್ರೀರಾಮ್, ಅಲ್ಲಾಹ್ ಪರ ಘೋಷಣೆ ಬಗ್ಗೆ ಪ್ರಸ್ತಾಪಿಸಿ, ಮಸೀದಿಯಲ್ಲಿ ಮುಲ್ಲಾಗೆ ರಾಮ, ದೇಗುಲದಲ್ಲಿ ಪೂಜಾರಿಗೆ ರಹಮಾನ್ ಕಾಣಿಸಿದಾಗ, ದುನಿಯಾದ ಮುಖ ಚಹರೆಯೆ ಬದಲಾಗುತ್ತದೆ. ಮುಖ್ಯವಾಗಿ ಪ್ರತಿ ಮಾನವನಿಗೆ ಮತ್ತೊಬ್ಬನಲ್ಲಿ ಮನುಷ್ಯತ್ವ ಕಾಣಿಸಿದರೆ ಅಂಥ ಸಮಾಜ ಸೃಷ್ಟಿಸಿದ ತೃಪ್ತಿ ನಮಗಾಗುತ್ತದೆ.
ಅಧಿರ್ ರಂಜನ್ ಅವರು, ಖುದಾ ಸೆ ಕ್ಯಾ ಮಾಂಗು ತೇರೆ ವಾಸ್ತೆ, ಸದಾ ಕುಶಿಯೋನ್ ಸೆ ಭಾರೆ ಹೋನ್ ತೇರೆ ರಾಸ್ತೆ, ಹಂಸಿ ತೇರೆ ಚೆಹರೆ ಪೆ ರಹೆ ಇಸ್ ತರಹ್, ಖುಷ್ಬು ಫೂಲೋನ್ಕೆ ಸಾಥ್ ರೆಹ್ತಿ ಜೈ ಜಿಸ್ ತರಹ್...ಎಂದು ಶಾಯರಿ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.












Click it and Unblock the Notifications