ಉ.ಪ್ರ ಹಾದಿಯಲ್ಲಿ ದೆಹಲಿ ಹೆಜ್ಜೆ, ರಜಾ ರದ್ದು ಮಾಡ್ತೀವಿ ಎಂದ ಮನೀಶ್ ಸಿಸೋಡಿಯಾ

ಮಹಾಪುರುಷರ ಜಯಂತಿ ಹಾಗೂ ಪುಣ್ಯಸ್ಮರಣೆಗೆ ಶೈಕ್ಷಣಿಕ ಸಂಸ್ಥೆಗಳಿಗೆ ರಜಾ ರದ್ದುಪಡಿಸಿದ ಉತ್ತರಪ್ರದೇಶ ಸರಕಾರದ ನಿರ್ಧಾರವನ್ನು ಈಗ ದೆಹಲಿ ಸರಕಾರ ಅನುಸರಿಸಲು ನಿರ್ಧರಿಸಿದೆ. ಈ ಬಗ್ಗೆ ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾ ಹೇಳಿಕೆ ನೀಡಿದ್ದಾರೆ

ನವದೆಹಲಿ, ಏಪ್ರಿಲ್ 28: ದೆಹಲಿ ಸರಕಾರವೂ ಇದೀಗ ಉತ್ತರಪ್ರದೇಶವನ್ನು ಅನುಕರಿಸುವ ಸೂಚನೆ ನೀಡಿದೆ. ಗಣ್ಯರ ಜನ್ಮದಿನ ಹಾಗೂ ಪುಣ್ಯಸ್ಮರಣೆಗೆ ಸಾರ್ವಜನಿಕ ರಜಾ ರದ್ದುಗೊಳಿಸಲು ತೀರ್ಮಾನಿಸಿದೆ. ಈ ಬಗ್ಗೆ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಶುಕ್ರವಾರ ಮಾತನಾಡಿದ್ದಾರೆ.

ಗಣ್ಯರ ಜನ್ಮದಿನ ಹಾಗೂ ಪುಣ್ಯಸ್ಮರಣೆಗೆ ಇರುವ ಸಾರ್ವಜನಿಕ ರಜಾವನ್ನು ದೆಹಲಿ ಸರಕಾರವು ರದ್ದುಪಡಿಸಲಿದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಸೂಚನೆಯನ್ನು ನೀಡಲಾಗಿದೆ ಎಂದು ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ. ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೆಗೆದುಕೊಂಡು ರಜಾ ರದ್ದು ನಿರ್ಧಾರದ ಬಗ್ಗೆ ಸಿಸೋಡಿಯಾ ಮೆಚ್ಚುಗೆ ಸೂಚಿಸಿದ್ದಾರೆ.[ಮಹಾಪುರುಷರ ಜಯಂತಿಗೆ ಶಾಲೆಗಿಲ್ಲ ರಜಾ: ಯೋಗಿ ಆದಿತ್ಯನಾಥ್]

Manish Sisodiya

"ಉತ್ತರಪ್ರದೇಶ ಸರಕಾರ ಈ ವಿಚಾರದಲ್ಲಿ ಉತ್ತಮ ಕ್ರಮಕ್ಕೆ ಮುಂದಾಗಿದೆ. ಬೇರೆ ರಾಜ್ಯಗಳಿಂದ ಉತ್ತಮ ವಿಚಾರಗಲನ್ನು ತೆಗೆದುಕೊಳ್ಳುವುದಕ್ಕೆ ನಾವು ಸದಾ ಸಿದ್ಧ" ಎಂದು ಅವರು ಹೇಳಿದ್ದಾರೆ. ಏಪ್ರಿಲ್ 25ರಂದು ಉತ್ತರಪ್ರದೇಶ ಸಂಪುಟವು ಶೈಕ್ಷಣಿಕ ಸಂಸ್ಥೆಗಳ ಹದಿನೈದು ಸಾರ್ವಜನಿಕ ರಜಾವನ್ನು ರದ್ದುಗೊಳಿಸಿತು. ಈ ದಿನಗಳಲ್ಲಿ ಆ ಮಹನೀಯರ ಬಗ್ಗೆ ವಿಚಾರಗಳನ್ನು ಶಾಲೆ-ಕಾಲೇಜಿಗಳಲ್ಲಿ ತಿಳಿಸಿ ಎಂದು ತಿಳಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+