ದೆಹಲಿ: ಮತ್ತೆ ರಣೋತ್ಸಾಹದಲ್ಲಿ 'ಆಮ್ ಆದ್ಮಿ'ಗಳು

ನವದೆಹಲಿ,ಜು. 3 : ಆಮ್ ಆದ್ಮಿ ಪಕ್ಷ​ ಮುಖಂಡ ಅರವಿಂದ್​ ಕೇಜ್ರಿವಾಲ್ ಮತ್ತೊಮ್ಮೆ ರಣೋತ್ಸಾಹ ತುಂಬಿಕೊಂಡು ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಲೋಕಸಭೆ ಚುನಾವಣೆ ಸೋಲಿನ ಕಹಿಯನ್ನು ಮರೆತು, ಪಕ್ಷವನ್ನು ಸಂಘಟಿಸಿ ಮತ್ತೊಮ್ಮೆ ದೆಹಲಿಯಲ್ಲಿ ಗದ್ದುಗೆ ಏರಲು ಆಮ್ ಆದ್ಮಿ ಪಕ್ಷದವರು ಸಿದ್ದರಾಗಿದ್ದು, ಗುರುವಾರ ಸಂಜೆ ವೇಳೆಗೆ ರಾಷ್ಟ್ರಪತಿ ಬಳಿ ತಮ್ಮ ಮನವಿ ಸಲ್ಲಿಸಲಿದ್ದಾರೆ.

ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಎಲ್ಲಾ 27 ಶಾಸಕರೊಂದಿಗೆ ಇಂದು ಸಂಜೆ ರಾಷ್ಟ್ರಪತಿಗಳನ್ನು ಭೇಟಿ ಮಾಡಲಿದ್ದಾರೆ. ಸಂಜೆ 6.30ರ ವೇಳೆಗೆ ರಾಷ್ಟ್ರಪತಿಗಳನ್ನ ಭೇಟಿ ಮಾಡಿ ದೆಹಲಿ ಅಸೆಂಬ್ಲಿ ವಿಸರ್ಜನೆ ಮಾಡಿ ಹೊಸ ಚುನಾವಣೆ ನಡೆಸಲು ಮನವಿ ಸಲ್ಲಿಸಲಿದ್ದಾರೆ.

AAP MLAs to meet President to demand fresh polls in Delhi

ದೆಹಲಿಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದಿರುವ ಹಿನ್ನೆಲೆಯಲ್ಲಿ ವಿಧಾನಸಭೆ ಅತಂತ್ರವಾಗಿದೆ. ಅಲ್ಲದೇ ಸಿಎಂ ಸ್ಥಾನಕ್ಕೆ ತಾವು ರಾಜೀನಾಮೆ ನೀಡಿದ ಬಳಿಕ ಯಾವುದೇ ಪಕ್ಷ ಸರ್ಕಾರ ರಚಿಸಿಲ್ಲ. ಇದರಿಂದಾಗಿ ಬಿಜೆಪಿ ಶಾಸಕರ ಕುದುರೆ ವ್ಯಾಪಾರಕ್ಕಿಳಿದಿದೆ. ಇದನ್ನು ತಪ್ಪಿಸಲಿ ಎಎಪಿ ಈ ನಡೆ ಇಡುವುದು ಅನಿವಾರ್ಯ. ರಾಷ್ಟ್ರಪತಿಗಳಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವುದಾಗಿ ಅರವಿಂದ್ ಕೇಜ್ರಿವಾಲ್​ ಟ್ವಿಟ್​ ಮಾಡಿದ್ದಾರೆ.

ಎಎಪಿ ಶಾಸಕರನ್ನು ಬುಟ್ಟಿಗೆ ಹಾಕಿಕೊಳ್ಳಲು ದೆಹಲಿ ಬಿಜೆಪಿ ಯತ್ನಿಸುತ್ತಿದೆ ದಯವಿಟ್ಟು ಗಮನ ಹರಿಸಿ ಎಂದು ಕೇಂದ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಅರವಿಂದ್ ಅವರು ಪತ್ರ ಕೂಡಾ ಬರೆದಿದ್ದಾರೆ.

ದೆಹಲಿಯಲ್ಲಿ ಚುನಾವಣೆ ನಡೆಸುವ ಬಗ್ಗೆ ಬಿಜೆಪಿ ಕೂಡಾ ಉತ್ಸುಕವಾಗಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ಜು.4 ರಂದು ವಿಚಾರಣೆಗೆ ಬರಲಿದ್ದು, ಇದಕ್ಕೂ ಮುನ್ನವೇ ಎಎಪಿ ತಂಡ ರಾಷ್ಟ್ರಪತಿ ಭವನದ ಬಾಗಿಲು ತಟ್ಟುತ್ತಿದೆ.

ಈ ನಡುವೆ ಬಿಜೆಪಿ ನಾಯಕರಿಂದ ಎಎಪಿ ಮುಖಂಡರಿಗೆ ಜೀವ ಬೆದರಿಕೆ ಕರೆ ಬಂದಿದೆ ಎಂದು ಆರೋಪಿಸಿ ಶಾಮಿಮಾರ್ ಬಾಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+