ಎಎಪಿಯಲ್ಲಿನ ಬಿಕ್ಕಟ್ಟಿಗೆ ತೆರೆ: ಪಕ್ಷ ತೊರೆಯುವುದಿಲ್ಲ ಎಂದ ವಿಶ್ವಾಸ್
ನವದೆಹಲಿ, ಮೇ 03 : ಆಮ್ ಆದ್ಮಿ ಪಕ್ಷದಲ್ಲಿ ಎದ್ದಿದ್ದ ಅಸಮಾಧಾನದ ಹೊಗೆ ಕೊಂಚ ತಣ್ಣಗಾಗಿದೆ. ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದ ಕುಮಾರ್ ವಿಶ್ವಾಸ್ ಪಕ್ಷವನ್ನು ತೊರೆಯುವುದಿಲ್ಲ ಎಂದಿದ್ದಾರೆ. ಇದರಿಂದ ಸಿಸೋಡಿಯಾ ಹಾಗೂ ಕೇಜ್ರಿವಾಲ್ ಪ್ರಯತ್ನಕ್ಕೆ ಫಲ ಸಿಕ್ಕಂತಾಗಿದೆ.
ಅತೃಪ್ತರಾಗಿದ್ದ ಕುಮಾರ್ ವಿಶ್ವಾಸ್ ಬುಧವಾರ ನಡೆದ ಪಕ್ಷದ ಪ್ರಮುಖ ನಾಯಕರ ಸಭೆಯಲ್ಲಿ ಭಾಗವಹಿಸಿ, ಅರವಿಂದ್ ಕೇಜ್ರಿವಾಲ್ ವಿರುದ್ಧ ಬಂಡಾಯವೆದ್ದಿರುವುದಾಗಿ ಹೇಳಿಕೆ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಪಟ್ಟು ಹಿಡಿದರು. [ಕುಮಾರ್ ವಿಶ್ವಾಸ್ ಅಸಮಾಧಾನಕ್ಕೆ ಸಿಕ್ಕು ಇಬ್ಭಾಗವಾಗಲಿದೆಯಾ ಆಮ್ ಆದ್ಮಿ ಪಕ್ಷ?]

ಇದೇ ವೇಳೆ ಅಮಾನತ್ ಉಲ್ಲಾ ಖಾನ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ತಿಳಿಸಿದ್ದಾರೆ. ಅಲ್ಲದೇ ಅವರಿಗೆ ರಾಜಸ್ಥಾನ ವಿಧಾನಸಭೆ ಚುನಾವಣೆಯ ಉಸ್ತುವಾರಿಯನ್ನು ಕೂಡ ವಹಿಸಲಾಗಿದೆ ಎಂದರು.
{promotion-urls}












Click it and Unblock the Notifications