ದೆಹಲಿ: ನಡುರಸ್ತೆಯಲ್ಲೇ ಮಹಿಳೆಯನ್ನು ಕೊಚ್ಚಿ ಕೊಂದ ಪಾಗಲ್ ಪ್ರೇಮಿ

Posted By:
Subscribe to Oneindia Kannada

ನವದೆಹಲಿ, ಸೆ. 20: 22 ವರ್ಷ ವಯಸ್ಸಿನ ಶಾಲಾ ಶಿಕ್ಷಕಿಯನ್ನು ನಡುರಸ್ತೆಯಲ್ಲಿ ಸುಮಾರು 20 ಬಾರಿ ಚಾಕುವಿನಿಂದ ಚುಚ್ಚಿ ಕೊಂದ ಆರೋಪಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಬುರಾರಿ ಪ್ರದೇಶದಲ್ಲಿ ನಡೆದ ಈ ಅಮಾನುಷ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ವಿಡಿಯೋ ಕ್ಲಿಪಿಂಗ್ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿತ್ತು. ಮೃತ ಶಾಲಾ ಶಿಕ್ಷಕಿಯನ್ನು ಕರುಣಾ ಎಂದು ಗುರುತಿಸಲಾಗಿದೆ. ಹತ್ಯೆ ನಡೆದ ಸಂದರ್ಭದಲ್ಲಿ ಹತ್ತಾರು ಮಂದಿ ಸಮೀಪವೇ ಇದ್ದರೂ ಸುಮ್ಮನೆ ನೋಡುತ್ತಾ ನಿಂತಿದ್ದು ಕಂಡು ಬಂದಿದೆ.

A stalker stabs woman to death in Burari Delhi

ಆರೋಪಿ ಸುರೇಂದರ್ ಸಿಂಗ್ ಕೆಲ ಕಾಲದಿಂದ ಕರುಣಾ ಬೆನ್ನ ಹಿಂದೆ ಬಿದ್ದಿದ್ದ. ತಿಂಗಳುಗಳ ಹಿಂದೆ ಆತನ ವಿರುದ್ಧ ಪೊಲೀಸರಿಗೆ ಕರುಣಾ ದೂರು ನೀಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಒನ್ ಸೈಡೆಡ್ ಲವರ್ ಆಗಿದ್ದ ಸುರೇಂದ್ರ ಅನೇಕ ಬಾರಿ ಕರುಣಾಳಿಗೆ ಪ್ರಪೋಸ್ ಮಾಡಿದ್ದ. ಆಕೆ ಒಪ್ಪದಿದ್ದಾಗ ಕೊಲೆ ಬೆದರಿಕೆಯನ್ನು ಒಡ್ಡಿದ್ದ.

ಆದರೆ, ಪೊಲೀಸರು ಒಂದೇ ಏರಿಯಾದಲ್ಲಿದ್ದ ಇಬ್ಬರನ್ನು ಕರೆಸಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿ ಬುದ್ಧಿವಾದ ಹೇಳಿ ಕಳಿಸಿದ್ದರು. ಆದರೆ, ಬುದ್ಧಿ ಕಲಿಯದ ಸುರೇಂದ್ರ ಇಂದು ಕರುಣಾಳನ್ನು ಅಮಾನುಷವಾಗಿ ಹತ್ಯೆಗೈದಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲಿದ ಕರುಣಾಳನ್ನು ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಸಾವನ್ನಪ್ಪಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A stalker stabbed her to death near her house in west Delhi's Inderpuri, as the neighbourhood watched in horror.
Please Wait while comments are loading...