ನವದೆಹಲಿ: ಗುಂಡಿನ ದಾಳಿಗೆ ಪ್ರಾಪರ್ಟಿ ಡೀಲರ್ ಬಲಿ
ನವದೆಹಲಿ, ಅಕ್ಟೋಬರ್ 23: ಅಪರಿಚಿತರ ಗುಂಡಿನ ದಾಳಿಗೆ ಪ್ರಾಪರ್ಟಿ ಡೀಲರ್ ಒಬ್ಬರು ಬಲಿಯಾದ ಘಟನೆ ದೆಹಲಿಯ ಉಸ್ಮಾನ್ ಪುರದ ಬ್ರಹಮ್ಪುರಿ ಪ್ರದೇಶದಲ್ಲಿ ಅ.22 ರಂದು ನಡೆದಿದೆ.
ಮೃತರನ್ನು ವಾಜಿದ್ (30) ಎಂದು ಗುರುತಿಸಲಾಗಿದೆ. ಇವರೊಂದಿಗಿದ್ದ ಚಂದ್ ಎನ್ನುವವರ ಮೇಲೂ ಗುಂಡಿನ ದಾಳಿ ನಡೆದಿದ್ದು, ಗಂಭೀರ ಗಾಯಗೊಂಡಿರುವ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ಭಾಗದ ಸಿಸಿಟಿವಿ ಫೂಟೇಜ್ ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಘಟನೆಯ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ. ಕೊಲೆಗೆ ವೈಯಕ್ತಿಕ ದ್ವೇಷವೇ ಕಾರಣ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.












Click it and Unblock the Notifications