ದೇಶದಲ್ಲಿ ಶೇ.78 ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲವಂತೆ!

ನವದೆಹಲಿ, ಆಗಸ್ಟ್.28: ಭಾರತದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ನಡುವೆ ಸಪ್ಟೆಂಬರ್ ತಿಂಗಳನಿಂದ ಶಾಲಾ-ಕಾಲೇಜು ತೆರೆಯುವುದಕ್ಕೆ ಕೇಂದ್ರ ಸರ್ಕಾರವು ಅನುಮತಿ ನೀಡಲು ಸಾಧ್ಯತೆಗಳಿವೆ. ಆದರೆ ದೇಶದ ಶೇ.78ರಷ್ಟು ಪೋಷಕರು ತಮ್ಮ ಮಕ್ಕಳನ್ನು ಸದ್ಯಕ್ಕಂತೂ ಶಾಲೆಗೆ ಕಳುಹಿಸಲ್ಲ ಎಂದು ಹೇಳುತ್ತಿದ್ದಾರೆ.

ಎಸ್ ಪಿ ರೊಬೊಟಿವ್ ವರ್ಕ್ ಎಂಬ ಸಂಸ್ಥೆಯು ಈ ಸಂಬಂಧ ಸಮೀಕ್ಷೆಯೊಂದನ್ನು ನಡೆಸಿದೆ. ಬೆಂಗಳೂರು, ಮುಂಬೈ, ಹೈದ್ರಾಬಾದ್ ನಂತಹ ಮಹಾನಗರಗಳಲ್ಲಿ 3,600 ಪೋಷಕರನ್ನು ಸಮೀಕ್ಷೆಯಲ್ಲಿ ಬಳಸಿಕೊಳ್ಳಲಾಯಿತು.

ಸಮೀಕ್ಷೆ ನಡೆಸಿದ ಸಂದರ್ಭದಲ್ಲಿ ಶೇ.82 ರಿಂದ 86ರಷ್ಟು ಪೋಷಕರು ತಮ್ಮ ಮಕ್ಕಳನ್ನು ಯಾವುದೇ ಅಪಾಯಕ್ಕೆ ಒಡ್ಡುವ ಕೆಲಸ ಮಾಡುವುದಿಲ್ಲ. ಸದ್ಯದ ಮಟ್ಟಿಗೆ ಶಾಲೆಗಳನ್ನು ತೆರೆಯುವುದೇ ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

78% Parents Not Ready To Send Children Back To School: Survey

ಮಕ್ಕಳು ಮತ್ತು ವಿದ್ಯಾರ್ಥಿಗಳಲ್ಲಿ ಆತಂಕ:

ಭಾರತ ಲಾಕ್ ಡೌನ್ ಸಂದರ್ಭದಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುವ ಪ್ರಮಾಣವು ಶೇ.50ರಷ್ಟು ಹೆಚ್ಚಾಗಿದೆ ಎಂದು ಶೇ.67ರಷ್ಟು ಪೋಷಕರು ಭಾವಿಸಿದ್ದಾರೆ. ಅಲ್ಲದೇ ಶೇ.40ರಷ್ಟು ಮಕ್ಕಳು ಕೊರೊನಾವೈರಸ್ ಎಂಬ ಸಾಂಕ್ರಾಮಿಕ ಪಿಡುಗಿನಿಂದ ಆತಂಕಕ್ಕೊಳಗಾಗಿದ್ದಾರೆ ಎಂದು ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

"ಪ್ರಸ್ತುತ ವೇಳೆಯಲ್ಲಿ ಪ್ರಾಯೋಗಿಕ ಕಾರ್ಯ ಮತ್ತು ತಾರ್ಕಿಕ ಕ್ರಿಯೆಯಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದು ಉತ್ತಮವಾಗಿದೆ. ಜೊತೆಗೆ ಪ್ರಾಯೋಗಿಕ ಮತ್ತು ಸಂವಾದಾತ್ಮಕ ಕಲಿಕೆ ವೇದಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ" ಎಂದು ಎಸ್‌ಪಿ ರೊಬೊಟಿಕ್ ವರ್ಕ್ಸ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಸ್ನೇಹ ಪ್ರಿಯಾ ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+