• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಸೋಂಕಿತನೊಂದಿಗೆ ಸಂಪರ್ಕ: 6 ವೈದ್ಯರು, 4ನರ್ಸ್‌ಗೆ ಗೃಹಬಂಧನ

|

ನವದೆಹಲಿ, ಮಾರ್ಚ್ 30: ಕೊರೋನಾ ವೈರಸ್ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ ಪರಿಣಾಮ ದೆಹಲಿ ಆಸ್ಪತ್ರೆಯ 6 ವೈದ್ಯರು, 4 ದಾದಿಯರನ್ನು ಗೃಹಬಂಧನಕ್ಕೆ ಹಾಕಿರುವ ಘಟನೆ ಭಾನುವಾರ ನಡೆದಿದೆ.

ಮೂಲಗಳ ಪ್ರಕಾರ ಆಸ್ಪತ್ರೆಗೆ ದಾಖಲಾಗಿದ್ದ ಕೊರೋನಾ ವೈರಸ್ ಸೋಂಕಿತ ರೋಗಿಯೊಬ್ಬರೊಂದಿಗೆ ಆರ್ ಎಂಎಲ್ ಆಸ್ಪತ್ರೆಯ 6 ವೈದ್ಯರು, 4 ದಾದಿಯರು ಯಾವುದೇ ಮುಂಜಾಗ್ರಾತ ಪರಿಕರಗಳಿಲ್ಲದೇ ಅರಿವಿಲ್ಲದೇ ಸಂಪರ್ಕಕ್ಕೆ ಬಂದಿದ್ದಾರೆ.

ಹೀಗಾಗಿ ಇವರಿಗೂ ವೈರಸ್ ಸೋಂಕು ತಾಗಿರುವ ಸಾಧ್ಯತೆ ಮೇರೆಗೆ ಎಲ್ಲ 6 ವೈದ್ಯರು ಮತ್ತು 4 ದಾದಿಯರನ್ನು ಕ್ವಾರಂಟೈನ್ ಮಾಡಲಾಗಿದೆ.

ದೆಹಲಿಯ ಡಾ.ರಾಮ್ ಮನೋಹರ್ ಲೋಹಿಯಾ (ಆರ್ ಎಂಎಲ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕು ಪೀಡಿತ ರೋಗಿಯನ್ನು ಸಂಪರ್ಕಿಸಿದ ಕಾರಣ ಆಸ್ಪತ್ರೆಗೆ ಸೇರಿದ 6 ವೈದ್ಯರು, 4 ದಾದಿಯರನ್ನು 14 ದಿನಗಳ ಕ್ವಾರಂಟೈನ್ ಗೆ ಹಾಕಲಾಗಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.

ಕೇರಳದಲ್ಲಿ ಕೊರೊನಾ ವೈರಸ್‌ಗೆ ಮೊದಲ ಸಾವು

ಅಲ್ಲದೆ ಮುಂದಿನ ದಿನಗಳಲ್ಲಿ ಇಂತಹ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ಆಸ್ಪತ್ರೆ ಆಡಳಿತ ಮಂಡಳಿ ಭರವಸೆ ನೀಡಿದೆ.

ಈಗಾಗಲೇ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ. ಹಾಗೂ 33 ಸಾವಿರಕ್ಕೂ ಹೆಚ್ಚು ಮಂದಿ ವಿಶ್ವಾದ್ಯಂತ ಸಾವನ್ನಪ್ಪಿದ್ದಾರೆ. ಹೀಗಿರುವಾಗ ವೈದ್ಯರು ಮತ್ತಷ್ಟು ಎಚ್ಚರಿಕೆಯಿಂದರಬೇಕಾಗುತ್ತದೆ.

English summary
Six doctors and four nurses of Ram Manohar Lohia (RML) Hospital have been sent for quarantine after they were exposed to a COVID-19 positive patient.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X