ಕೊಳೆತ ಸ್ಥಿತಿಯಲ್ಲಿ ಒಂದೇ ಕುಟುಂಬದ ಐವರ ಮೃತದೇಹ ಪತ್ತೆ

ನವದೆಹಲಿ, ಫೆಬ್ರವರಿ 13: ಒಂದೇ ಕುಟುಂಬದ 5 ಮಂದಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ದೆಹಲಿಯ ಭಜನ್ಪುರ ಪ್ರದೇಶದಲ್ಲಿ ಒಂದೇ ಕುಟುಂಬದ ಐವರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಆಟೋ ಚಾಲಕ ಶಂಬು ಚತುರ್ವೇದಿ(43), ಪತ್ನಿ ಸುನಿತಾ(37), ಮಕ್ಕಳಾದ ಶಿವಂ(17), ಸಚಿನ್(14) ಮತ್ತು ಕೋಮಲ್(12) ಎಂದು ಗುರುತಿಸಲಾಗಿದೆ. ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಅನುಮಾನ ಬಂದ ಪಕ್ಕದ ಮನೆಯವರು ಮಾಹಿತಿ ನೀಡಿದ್ದು, ಪೊಲೀಸರು ಬಾಗಿಲು ಒಡೆದು ಒಳನುಗ್ಗಿದ ಸಂದರ್ಭದಲ್ಲಿ ದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆ ಆಗಿವೆ. ಸಾವಿಗೆ ಕಾರಣ ತಿಳಿದುಬಂದಿಲ್ಲ.

ಇದೊಂದು ಸಾಮೂಹಿಕ ಆತ್ಮಹತ್ಯೆ ಇದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕುಟುಂಬ ಮೇಲಿನ ದ್ವೇಷದಿಂದಾಗಿ ಯಾರಾದರೂ ಕೊಲೆ ಮಾಡಿರಬಹುದು ಅಥವಾ ಇನ್ನೇನು ಕಾರಣವಿರಬಹುದು ಎಂದು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕುಟುಂಬದವರ ಬಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ.2018ರ ಜುಲೈನಲ್ಲಿ ಬುರಾರಿ ಬಂಗಲೆಯಲ್ಲಿ 11 ಮಂದಿ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದರು.

5 People Of A Family Found Dead In Bhajanpura

ಉತ್ತರ ದಿಲ್ಲಿಯಲ್ಲಿರುವ ಆ ಮನೆಯಲ್ಲಿ ಮುಸ್ಲಿಂ ಸಹೋದರರಿಬ್ಬರು ನೆಲೆಸಿದ್ದಾರೆ.ಜೂನ್ 30 ಮತ್ತು ಜುಲೈ 1ರ ನಡುವಿನ ರಾತ್ರಿ ಬುರಾರಿಯಲ್ಲಿ ಒಂದೇ ಕುಟುಂಬದ 11 ಜನ ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದರು. ಮಾನಸಿಕ ಸ್ಥಿತಿಯೇ ಅವರ ಸಾವಿಗೆ ಕಾರಣ. ಅಂಧ ಆಚರಣೆ ಮಾಡಲು ಹೋಗಿ ಸಾವಿಗೆ ಶರಣಾಗಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+