ನವದೆಹಲಿಯಲ್ಲಿ ಕ್ರೇನ್ ಲಿಫ್ಟ್ ಕುಸಿದು ನಾಲ್ವರ ದುರ್ಮರಣ
ನವದೆಹಲಿ, ಅಕ್ಟೋಬರ್ 30: ಟವರ್ ಕ್ರೇನ್ ಲಿಫ್ಟ್ ಕುಸಿದ ಪರಿಣಾಮ ನಾಲ್ವರು ದುರ್ಮರಣಕ್ಕೀಡಾದ ಘಟನೆ ರಾಜಧಾನಿ ದೆಹಲಿಯಲ್ಲಿ ಸೋಮವಾರ ಸಂಜೆ ನಡೆದಿದೆ.
ದೆಹಲಿಯ ನರೆಲಾ ಎಂಬಲ್ಲಿ ನಿರ್ಮಾಣ ಹಂತದ ಕಟ್ಟಡದ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರ ಮೇಲೆ ಟವರ್ ಕ್ರೇನ್ ಲಿಫ್ಟ್ ಕುಸಿದು ಬಿದ್ದಿತ್ತು.
ಕಟ್ಟಡ ನಿರ್ಮಿಸುತ್ತಿದ್ದ ಕಂಪನಿಯ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಕ್ರೇನ್ ಕುಸಿದು ಬಿದ್ದಿದ್ದಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.
ಇತ್ತೀಚೆಗಷ್ಟೇ ಉತ್ತರ ದೆಹಲಿಯ ಅಶೋಕ್ ವಿಹಾರ್ ನಲ್ಲಿ ಮೂರಂತಸ್ತಿನ ಕಟ್ಟಡವೊಂದು ಕುಸಿದ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ ಐವರು ಮೃತರಾದ ದಾರುಣ ಘಟನೆ ನಡೆದಿತ್ತು.
ಅಶೋಕ್ ವಿಹಾರದ ಸಾವನ್ ಪಾರ್ಕ್ ಬಳಿಯಲ್ಲಿದ್ದ ಈ ಮನೆಯಲ್ಲಿ ವಾಸವಿದ್ದ ಬಹುಪಾಲು ಜನರು ಬಾಡಿಗೆಗಾಗಿ ಇದ್ದವರು. ಈ ಕಟ್ಟಡ ಉತ್ತಮ ಸ್ಥಿತಿಯಲ್ಲಿಲ್ಲ ಎಂಬ ಕುರಿತು ಈ ಮೊದಲೇ ಆರೋಪಗಳು ಕೇಳಿಬಂದಿದ್ದವು. ಅದೂ ಅಲ್ಲದೆ, ಕಟ್ಟಡದಲ್ಲಿ ಸಾಕಷ್ಟು ಬಿರುಕುಗಳೂ ಕಂಡುಬಂದಿದ್ದವು.
ಕಳೆದ ಜುಲೈ ತಿಂಗಳಿನಲ್ಲಿ ನೋಯ್ಡಾದಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಕುಸಿದ ಪರಿಣಾಮ ಹತ್ತಕ್ಕೂ ಹೆಚ್ಚು ಜನ ಮೃತರಾಗಿದ್ದರು.












Click it and Unblock the Notifications