ಕೊವಿಡ್ ರೋಗಿಗೆ ಚಿಕಿತ್ಸೆ ನೀಡಿದ 39 ವೈದ್ಯಕೀಯ ಸಿಬ್ಬಂದಿ ಕ್ವಾರೆಂಟೈನ್

ದೆಹಲಿ, ಏಪ್ರಿಲ್ 13: ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಸೋಂಕು ತಗುಲಿರುವ ಘಟನೆಗಳು ದೇಶಾದ್ಯಂತ ಹಲವು ಕಡೆ ವರದಿಯಾಗಿದೆ. ಇನ್ನು ಚಿಕಿತ್ಸೆ ನೀಡಿದ ರೋಗಿಗೆ ಕೊರೊನಾ ಇದೆ ಎಂದು ತಿಳಿದ ಮೇಲೆ ಆಸ್ಪತ್ರೆಯನ್ನು ಮುಚ್ಚಿರುವ ಘಟನೆಗಳು ಬೆಳಕಿಗೆ ಬಂದಿದೆ.

ಇದೀಗ, ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗೆ ಚಿಕಿತ್ಸೆ ನೀಡಿದ ಕಾರಣ, 39ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗಳು ಸ್ವ-ಇಚ್ಛೆಯಿಂದ ಕ್ವಾರೆಂಟೈನ್‌ಗೆ ಒಳಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಹೃದಯಸಂಬಂಧಿ ಕಾಯಿಲೆಯಿಂದ ಇಬ್ಬರು ರೋಗಿಗಳು ಆಸ್ಪತ್ರೆಗೆ ದಾಖಲಾದರು. ಆ ಇಬ್ಬರು ಚಿಕಿತ್ಸೆ ನೀಡಿದ ಬಳಿಕ ಕೊರೊನಾ ಅಟ್ಯಾಕ್ ಆಗಿರುವುದು ತಿಳಿದುಬಂದಿದೆ. ಹಾಗಾಗಿ, ಆ ರೋಗಿಗಳ ಜೊತೆ ಸಂಪರ್ಕದಲ್ಲಿದ್ದ ವೈದ್ಯರು, ನರ್ಸ್ ಹಾಗೂ ಇನ್ನಿತರ ಸಿಬ್ಬಂದಿಗಳು ಕ್ವಾರೆಂಟೈನ್‌ಗೆ ಒಳಪಟ್ಟಿದ್ದಾರೆ.

39 Doctors And Staff Quarantined At Delhi Max Hospital

ಆಸ್ಪತ್ರೆಯಲ್ಲಿ ಒಟ್ಟು 154 ಜನರು ಬೇರೆ ಬೇರೆ ಶಿಫ್ಟ್‌ನಲ್ಲಿ ಕೆಲಸ ಮಾಡುತ್ತಾರೆ. ರೋಗಿಯ ಜೊತೆ ಸಂಪರ್ಕದಲ್ಲಿದ್ದ 39 ಜನ ಸಿಬ್ಬಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ ಮತ್ತು ಅವರ ಜೊತೆ ಬೇರೆ ಸಿಬ್ಬಂದಿಗಳ ಮೇಲೂ ನಿಗಾ ವಹಿಸಲಾಗಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.

ಇದಕ್ಕೂ ಮುಂಚೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸುಮಾರು 30ಕ್ಕೂ ಅಧಿಕ ಆರೋಗ್ಯ ಸಿಬ್ಬಂದಿಗಳನ್ನು ಕ್ವಾರೆಂಟೈನ್‌ಗೆ ಹೋಗಿ ಎಂದು ಸಲಹೆ ನೀಡಿ ಕಳಹಿಸಿದ್ದರು. ಈಗಾಗಲೇ ದೇಶದಲ್ಲಿ ಕೊರೊನಾ ರೋಗಿಗಳನ್ನು ಚಿಕಿತ್ಸೆ ಮಾಡಿದ ಕೆಲವು ವೈದ್ಯರಿಗೆ ಸೋಂಕು ಕಾಣಿಸಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+