ವಿದೇಶದಲ್ಲಿರುವ 25 ಭಾರತೀಯರು ಕೊರೊನಾದಿಂದ ಸಾವು

ದೆಹಲಿ, ಏಪ್ರಿಲ್ 16: ಓದಲು, ಬಿಸಿನೆಸ್ ಮಾಡಲು ಹಾಗೂ ಇನ್ನಿತರ ಕಾರಣದಿಂದ ವಿದೇಶಗಳಿಗೆ ಹೋಗಿರುವ ಭಾರತೀಯರ ಪೈಕಿ ಇದುವರೆಗೂ 25 ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಜಗತ್ತಿನ ಸುಮಾರು 53 ದೇಶಗಳಲ್ಲಿ ಒಟ್ಟು 3,336 ಭಾರತೀಯರಿಗೆ ಕೊವಿಡ್ ಸೋಂಕು ತಗುಲಿದೆ ಎಂದು ಗುರುವಾರ ಸರ್ಕಾರದ ಮೂಲಗಳಿಂದ ಮಾಹಿತಿ ಹೊರಬಿದ್ದಿದೆ.

ಸದ್ಯದ ಮಾಹಿತಿ ಪ್ರಕಾರ ಸೋಂಕು ತಗುಲಿರುವ ಹೆಚ್ಚಿನ ಭಾರತೀಯರು ಗಾಲ್ಫ್ ದೇಶಗಳಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಫ್ರಾನ್ಸ್, ಅಮೆರಿಕ ದೇಶದಲ್ಲೂ ಹೆಚ್ಚಿನ ಭಾರತೀಯರು ಉಳಿದುಕೊಂಡಿದ್ದಾರೆ. ಆಯಾ ದೇಶದ ಸರ್ಕಾರಗಳ ಜೊತೆ ಈಗಾಗಲೇ ಭಾರತೀಯ ರಕ್ಷಣೆ ಬಗ್ಗೆ ಮಾತನಾಡಿರುವುದಾಗಿ ಸರ್ಕಾರದ ಮೂಲಗಳಿಂದ ತಿಳಿದು ಬಂದಿದೆ.

3336 Indians Infected In 53 Countries 25 Deaths Abroad

ಇನ್ನು ದೇಶಾದ್ಯಂತ ಕೊರೊನಾ ವೈರಸ್ ಹರಡುತ್ತಿರುವ ಈ ಸಂದರ್ಭದಲ್ಲಿ ಕಾರಣಾಂತರಗಳಿಂದ ವಿದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರು ಸ್ವದೇಶಕ್ಕೆ ಕರೆತರಲು ಸಾಧ್ಯವಾಗಿಲ್ಲ. ತಾಳ್ಮೆಯಿಂದ ತಮ್ಮ ಆರೋಗ್ಯದ ಮೇಲೆ ನಿಗಾವಹಿಸಬೇಕು ಎಂದು ತಿಳಿಸಲಾಗಿದೆಯಂತೆ. ಇನ್ನು ಇಟಲಿ, ಸ್ಪೇನ್ ಹಾಗೂ ಇನ್ನಿತರ ದೇಶಗಳಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ಕೇಂದ್ರ ಸರ್ಕಾರವೂ ವಿಶೇಷ ವಿಮಾನಗಳಲ್ಲಿ ಕರೆದುಕೊಂಡು ಬಂದಿತ್ತು.

ಈ ಕಡೆ ಭಾರತದಲ್ಲೂ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇಂದು ಸಂಜೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿರುವ ಪ್ರಕಾರ, 12,759 ಜನರಿಗೆ ಸೋಂಕು ತಗುಲಿದೆ. ಅದರಲ್ಲಿ 420 ಜನರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+