Get Updates
Get notified of breaking news, exclusive insights, and must-see stories!

21 ವಿರೋಧ ಪಕ್ಷಗಳಿಂದ ಚುನಾವಣಾ ಆಯುಕ್ತರ ಭೇಟಿ, ಇವಿಎಂ ಬಗ್ಗೆ ಮಹತ್ವದ ಸಲಹೆ

ನವದೆಹಲಿ, ಫೆಬ್ರವರಿ 04: ಕಾಂಗ್ರೆಸ್ ಸೇರಿದಂತೆ ಬರೋಬ್ಬರಿ 21 ವಿರೋಧ ಪಕ್ಷಗಳ ನಾಯಕರು ಇಂದು ಚುನಾವಣಾ ಆಯೋಗದ ಆಯುಕ್ತರ ಭೇಟಿ ಮಾಡಿ ಇವಿಎಂ ಬಗ್ಗೆ ತಮ್ಮ ದೂರುಗಳನ್ನು ಸಲ್ಲಿಸಿ, ಕೆಲವು ಬದಲಾವಣೆಗಳಿಗೆ ಮನವಿ ಮಾಡಿತು.

ಚುನಾವಣಾ ಆಯೋಗದ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ನ ಹಿರಿಯ ಮುಖಂಡ ಗುಲಾಂ ನಬಿ ಆಜಾದ್, ಇವಿಎಂನಲ್ಲಿ ಚುನಾವಣೆ ನಡೆದರೆ ಮತೆಣಿಕೆ ವೇಳೆ 50% ಮತ ಎಣಿಕೆ ಇವಿಎಂನಲ್ಲಿ ನಡೆದರೆ ಉಳಿದ 50% ವಿವಿಪ್ಯಾಟ್‌ ಯಂತ್ರದಲ್ಲಿ ನಡೆಯಬೇಕು ಎಂದು ಸಲಹೆ ನೀಡಿರುವುದಾಗಿ ಹೇಳಿದ್ದಾರೆ.

ಮತಯಾರಿಗೋ ಹಾಗಿ ಅದು ಇನ್ಯಾರಿಗೋ ಹೋದರೆ ಅದು ಪ್ರಜಾಪ್ರಭುತ್ವದ ಕೊಲೆ ಆದಂತಾಗುತ್ತದೆ. ಹಾಗಾಗಿ ವಿವಿಪ್ಯಾಟ್ ಮತ್ತು ಇವಿಎಂ ಎರಡರಲ್ಲೂ ಎಣಿಕೆ ನಡೆಸುವ ಮೂಲಕ ಫಲಿತಾಂಶ ಪ್ರಕಟಿಸುವ ಮುನ್ನಾ ಪುನಃ ಪರೀಕ್ಷಿಸಿಕೊಂಡಂತಾಗುತ್ತದೆ ಎಂದು ಅವರು ಹೇಳಿದರು.

 21 opposition parties meet election commission chief

2019 ರ ಲೋಕಸಭೆ ಚುನಾವಣೆಯು ಸಂಪೂರ್ಣ ಬ್ಯಾಲೆಟ್ ಪೇಪರ್‌ ಮೂಲಕ ಆಗಬೇಕು ಎಂಬುದು ನಮ್ಮ ಒತ್ತಾಯ ಆಗಿತ್ತು ಆದರೆ ಸಮಯ ಕಡಿಮೆ ಇರುವ ಕಾರಣ, ಇವಿಎಂ ಮತ್ತು ವಿವಿಪ್ಯಾಟ್ ಎಣಿಕೆಯ ಆಯ್ಕೆಯನ್ನು ಚುನಾವಣಾ ಆಯೋಗದ ಮುಂದೆ ಇಟ್ಟಿದ್ದೇವೆ ಎಂದು ತೆಲುಗುದೇಸಂ ಪಕ್ಷದ ಮುಖ್ಯಸ್ಥ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹೇಳಿದರು.

ವಿರೋಧ ಪಕ್ಷಗಳ ಮುಖಂಡರ ಸಮಿತಿಯು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಹಾಗೂ ಇನ್ನೂ ಕೆಲವು ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.

ಕಾಂಗ್ರೆಸ್‌ನ ಗುಲಾಂನಬಿ ಆಜಾದ್, ಮಲ್ಲಿಕಾರ್ಜುನ ಖರ್ಗೆ, ಆನಂದ್ ಶರ್ಮಾ, ಟಿಡಿಪಿಯ ಚಂದ್ರಬಾಬು ನಾಯ್ಡು, ಎನ್‌ಸಿಪಿಯ ಮಜಿದ್ ಮೆನನ್, ಡೆರೆಕ್ ಓಬ್ರಿಯನ್, ಸಮಾಜವಾದಿ ಪಕ್ಷದ ರಾಮಗೋಪಾಲ್ ಯಾದವ್, ಬಿಎಸ್‌ಪಿಯ ಸತೀಶ್ ಚಂದ್ರ ಮಿಶ್ರಾ ಇನ್ನೂ ಹಲವು ಮುಖಂಡರು ಇದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+