ಎಎಪಿ ಶಾಸಕರ ಅನರ್ಹತೆ 'ತುಘ್ಲಕ್ ಶಾಹಿ' ಕ್ರಮ: ಯಶವಂತ್ ಸಿನ್ಹಾ ಗರಂ

ನವದೆಹಲಿ, ಜನವರಿ 22: 20 ಎಎಪಿ ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ಮಾಡಿದ್ದ ಶಿಫಾರಸ್ಸಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕುತ್ತಿದ್ದಂತೆ ಬಿಜೆಪಿಯ ಇಬ್ಬರು ನಾಯಕರು ಗರಂ ಆಗಿದ್ದಾರೆ.

ರಾಷ್ಟ್ರಪತಿಗಳ ನಡೆಯನ್ನು ಬಿಜೆಪಿಯ ಹಿರಿಯ ನಾಯಕರಾದ ಯಶವಂತ್ ಸಿನ್ಹಾ ಮತ್ತು ಶತ್ರುಘ್ನ ಸಿನ್ಹಾ ಖಂಡಿಸಿದ್ದು, 'ತುಘ್ಲಕ್ ಶಾಹಿಯ ಕೆಟ್ಟ ಆದೇಶ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

20 AAP MLAs disqualified: Yashwant Sinha, Shatrughan Sinha backed AAP

"20 ಎಎಪಿ ಶಾಸಕರನ್ನು ಅನರ್ಹಗೊಳಿಸುವ ರಾಷ್ಟ್ರಪತಿಗಳ ಆದೇಶ ನೈಸರ್ಗಿಕ ನ್ಯಾಯದ ಗರ್ಭಪಾತ. ಯಾವುದೇ ವಿಚಾರಣೆ ಇಲ್ಲ, ಹೈಕೋರ್ಟ್ನ ಆದೇಶಕ್ಕೆ ಕಾಯುತ್ತಿಲ್ಲ, ಇದು ತುಘಲಕ್ ಶಾಹಿ ಕೆಟ್ಟ ಆದೇಶ" ಎಂದು ಯಶವಂತ್ ಸಿನ್ಹಾ ಕಿಡಿಕಾರಿದ್ದಾರೆ.

ಸಿನ್ಹಾಗೆ ಧ್ವನಿಗೂಡಿಸಿರುವ ಮತ್ತೋರ್ವ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ, "ಷಡ್ಯಂತ್ರದ ರಾಜಕೀಯವಾಗಲೀ, ರಾಜಕೀಯ ಪಕ್ಷಗಳ ಹಿತಾಸಕ್ತಿಗಳಾಗಲೀ ಹೆಚ್ಚು ದಿನ ಬಾಳುವುದಿಲ್ಲ. ಚಿಂತಿಸಬೇಡಿ, ಸಂತೋಷವಾಗಿರಿ!" ಎಂದು ಟ್ವಿಟ್ಟರ್ ಮೂಲಕ ಎಎಪಿಗೆ ಧೈರ್ಯ ತುಂಬಿದ್ದಾರೆ.

"ನೀವು ಶೀಘ್ರದಲ್ಲೇ ಉತ್ತಮ ದೈವಿಕ ನ್ಯಾಯ ಪಡೆಯಲಿ ಎಂದು ಪ್ರಾರ್ಥಸುತ್ತೇನೆ ಮತ್ತು ಆ ನಂಬಿಕೆ ಇದೆ. ಸದ್ಯದಲ್ಲೇ ನಿಮಗೆ ನ್ಯಾಯ ಸಿಗಲಿದೆ. ಸತ್ಯಮೇವ ಜಯತೆ! ಜೈ ಹಿಂದ್!," ಎಂದೂ ಸಿನ್ಹಾ ಟ್ಟೀಟ್ ನಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+