ಮೊಬೈಲ್ ಫೋನ್ ಸಂಖ್ಯೆ 10 ರಿಂದ 11ಕ್ಕೆ?, ಸ್ಪಷ್ಟನೆ ನೀಡಿದ ಟ್ರಾಯ್

ನವದೆಹಲಿ, ಮೇ 31: ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮೊಬೈಲ್ ಫೋನ್ ಸಂಖ್ಯೆಯನ್ನು 10 ರಿಂದ 11 ಬದಲಾಯಿಸಲಿದೆ ಎನ್ನುವ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ. ಟ್ರಾಯ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹಳೆಯ 10 ಸಂಖ್ಯೆ ವ್ಯವಸ್ಥೆಯೇ ಮುಂದುವರೆಯಲಿದೆ ಎಂದಿದೆ.

ದೂರಸಂಪರ್ಕ ಇಲಾಖೆಗೆ ಟ್ರಾಯ್ ತನ್ನ ಶಿಫಾರಸ್ಸಿನಲ್ಲಿ ಮೊಬೈಲ್ ಫೋನ್ ಸಂಖ್ಯೆ 11 ಅಂಕಿ ಹಾಗೂ ನೆಟ್ವರ್ಕ್ ಡಾಂಗಲ್ ಸಂಖ್ಯೆ 13 ಅಂಕಿಗಳಿಗೆ ಏರಿಸುವಂತೆ ಸೂಚಿಸಿತ್ತು. ಆದರೆ, ಇದರಿಂದ ಹೆಚ್ಚು ಗೊಂದಲ ಆಗುತ್ತದೆ ಎನ್ನುವ ಕಾರಣಕ್ಕೆ ಆ ನಿರ್ಧಾರವನ್ನು ಕೈಬಿಟ್ಟಿದೆ.

ಈ ಬಗ್ಗೆ ಟ್ರಾಯ್ ಟ್ವಿಟ್ಟರ್ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದೆ. ಮೊಬೈಲ್ ಸಂಖ್ಯೆಯನ್ನು 11 ಅಂಕಿಗೆ ಏರಿಸುವ ನಿರ್ಧಾರ ಗೊಂದಲ ಮೂಡಿಸುತ್ತಿದ್ದು, ಹೊಸ ಸಂಖ್ಯೆಯ ವ್ಯವಸ್ಥೆ ಜಾರಿಗೆ ಬರುವುದಿಲ್ಲ ಎಂದಿದೆ. ಈಗ ಇರುವ 10 ಅಂಕಿ ಮೊಬೈಲ್ ಸಂಖ್ಯೆಯೇ ಹಾಗೆಯೇ ಮುಂದುವರೆಯಲಿದೆ.

11 Digit Mobile Number Not Recommended Trai Gave Clarification

ಸದ್ಯ, ಲ್ಯಾಂಡ್‌ಲೈನ್‌ನಿಂದ ಮೊಬೈಲ್‌ಗೆ ಕರೆ ಮಾಡಲು ಮೊದಲು 0 ಹಾಗೂ ನಂತರ ಮೊಬೈಲ್‌ ಸಂಖ್ಯೆ ಬಳಸುತ್ತಿದ್ದು, ಈ ನಿಯಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅದೇ ರೀತಿ ಮೊಬೈಲ್‌ನಿಂದ ಲ್ಯಾಂಡ್‌ಲೈನ್‌ಗೆ ಕರೆ ಮಾಡುವಾಗಲು ಮೊದಲು 0 ಬಳಸಬೇಕಿದೆ.

ಈಗಾಗಲೇ, ಚೀನಾದಲ್ಲಿ 11 ಅಂಕಿಗಳ ಮೊಬೈಲ್ ಸಂಖ್ಯೆ ಬಳಸಲಾಗುತ್ತಿದೆ. ಫ್ರೆಂಚ್ ನ ಕೆಲವು ಭಾಗಗಳಲ್ಲಿ ಅತಿ ಹೆಚ್ಚು ಅಂಕಿಗಳುಳ್ಳ ಮೊಬೈಲ್ ಸಂಖ್ಯೆ ಬಳಕೆಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+