• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತದಲ್ಲಿ ಆರ್ಥಿಕವಾಗಿ ದುರ್ಬಲವಾಗಿ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 22: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದಂತೆ ಯಾವ ರೀತಿ ಸಕಾರಾತ್ಮಕ ಕ್ರಮ ತೆಗೆದುಕೊಳ್ಳಬಹುದು ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ವಾದ ಮಂಡಿಸಿದ್ದಾರೆ.
ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲವಾಗಿ ವರ್ಗಗಳಿಗೆ (EWS) ಶೇ.10ರಷ್ಟು ಮೀಸಲಾತಿ ನೀಡುವುದರಿಂದ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಅಥವಾ ಇತರ ಹಿಂದುಳಿದ ವರ್ಗಗಳ ಹಕ್ಕುಗಳಿಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಭಾರತದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಮಂಗಳವಾರ ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ಸಂವಿಧಾನ ಪೀಠದ ಮುಂದೆ ಹೇಳಿದ್ದಾರೆ.

ಬೆಟ್ಟ ಕುರುಬ ಜನಾಂಗ ಎಸ್‌ಟಿಗೆ ಸೇರ್ಪಡೆ: ಪ್ರಲ್ಹಾದ್ ಜೋಶಿ ಪ್ರಕಟ, ಸಿದ್ದರಾಮಯ್ಯ ಸಂತಸಬೆಟ್ಟ ಕುರುಬ ಜನಾಂಗ ಎಸ್‌ಟಿಗೆ ಸೇರ್ಪಡೆ: ಪ್ರಲ್ಹಾದ್ ಜೋಶಿ ಪ್ರಕಟ, ಸಿದ್ದರಾಮಯ್ಯ ಸಂತಸ

ಕೇಂದ್ರದ ಪರವಾಗಿ ವೇಣುಗೋಪಾಲ್, ಹಿಂದುಳಿದ ವರ್ಗಗಳಿಗೆ ಅಂದರೆ ಪರಿಶಿಷ್ಟ ಸಮುದಾಯಗಳು ಮತ್ತು ಒಬಿಸಿಗಳಿಗೆ ಅಸ್ತಿತ್ವದಲ್ಲಿರುವ ಶೇ.50 ಮೀಸಲಾತಿಯಿಂದ ಸ್ವತಂತ್ರವಾಗಿ ಇಡಬ್ಲ್ಯೂಎಸ್ ಕೋಟಾವನ್ನು ನೀಡಲಾಗಿದೆ ಎಂದು ತಿಳಿಸಿದರು.

ಅರ್ಜಿದಾರರ ವಾದ ತಿರಸ್ಕರಿಸಿದ ವೇಣುಗೋಪಾಲ್:
ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಅಥವಾ ದುರ್ಬಲವಾಗಿರುವ ವರ್ಗಗಳಿಗೆ ಮೀಸಲಾಗಿ ನೀಡುವುದರಿಂದ ಎಸ್‌ಸಿ ಮತ್ತು ಎಸ್‌ಟಿಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಈ ಮೀಸಲಾತಿ ಅಂಶಗಳಲ್ಲಿ ಎಸ್‌ಸಿ ಮತ್ತು ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳು ಈಗಾಗಲೇ ಅತ್ಯುನ್ನತ ಸ್ಥಾನದಲ್ಲಿವೆ. ಇಡಬ್ಲ್ಯೂಎಸ್ ಕೋಟಾ ಮೂಲಕ ತಾರತಮ್ಯ ಎಸಗಲಾಗುತ್ತಿದೆ ಎಂಬ ಅರ್ಜಿದಾರರ ವಾದವನ್ನು ಅಟಾರ್ನಿ ಜನರಲ್ ವೇಣುಗೋಪಾಲ್ ತಿರಸ್ಕರಿಸಿದರು.
ಪಂಚಾಯತ್‌ಗಳು, ಪುರಸಭೆಗಳು ಮತ್ತು ಶಾಸಕಾಂಗ ಸಂಸ್ಥೆಗಳಲ್ಲಿ ಬಡ್ತಿಗಳಲ್ಲಿ ಹಿಂದುಳಿದ ವರ್ಗಗಳಿಗೆ ಒದಗಿಸುವ ಮೀಸಲಾತಿಗೆ ಸಂಬಂಧಿಸಿದ ಹಲವಾರು ವಿಧಿಗಳನ್ನು ಅಟಾರ್ನಿ ಜನರಲ್ ಉಲ್ಲೇಖಿಸಿದರು. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಮತ್ತು ಈಗ ಇಡಬ್ಲ್ಯೂಎಸ್ ಕೋಟಾವನ್ನು ನ್ಯಾಯಾಲಯವು "ಸಮಾಜದ ದುರ್ಬಲ ವರ್ಗಗಳ ಉನ್ನತಿಗಾಗಿ ಉದ್ದೇಶಿಸಿರುವ ರಾಜ್ಯದ ಏಕೈಕ ವಿಧಾನ" ಎಂದು ಪರಿಗಣಿಸಬೇಕು ಎಂದು ವಾದಿಸಿದರು. ಈ ಹಿಂದೆ ಸುಪ್ರೀಂ ಕೋರ್ಟ್ ತೀರ್ಪುಗಳು ಆರ್ಥಿಕ ಮಾನದಂಡವನ್ನು ಆಧರಿಸಿ ರಾಜ್ಯದ ಪ್ರಯೋಜನಗಳನ್ನು ಎತ್ತಿ ಹಿಡಿದಿವೆ ಎಂದು ಹೇಳಿದರು.

ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ, 2009 ರ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯವು ಯಾವ ರೀತಿ ನಿಲುವು ಪ್ರದರ್ಶಿಸಿದೆ ಎಂಬುದರ ಕುರಿತು ಲಿಖಿತ ದಾಖಲೆಗಳನ್ನು ವೇಣುಗೋಪಾಲ್ ಸಲ್ಲಿಸಿದರು.
"2009ರ ಕಾಯಿದೆಯು ದುರ್ಬಲ ವರ್ಗ ಮತ್ತು ಅನಾನುಕೂಲಕರ ಗುಂಪಿಗೆ ಸೇರಿದ ಮಗುವು ಪ್ರವೇಶ ಪಡೆಯಲು ಎದುರಿಸಬೇಕಾದ ಆರ್ಥಿಕ ಮತ್ತು ಮಾನಸಿಕ ಅಡೆತಡೆಗಳನ್ನು ಒಳಗೊಂಡಂತೆ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಪ್ರಯತ್ನಿಸುತ್ತದೆ. ಆದ್ದರಿಂದ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಅದನ್ನು ಎತ್ತಿಹಿಡಿಯುತ್ತದೆ ಎಂದು ಈ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಶಿಕ್ಷಣಕ್ಕಾಗಿ ಶಾಲಾ-ಕಾಲೇಜುಗಳಲ್ಲಿ ಪ್ರವೇಶ ಪಡೆದುಕೊಳ್ಳುವಾಗ ಹಣಕಾಸಿನ ಅಡೆತಡೆಗಳನ್ನು ಎದುರಿಸುತ್ತಿರುವ ನಿರ್ದಿಷ್ಟ ವರ್ಗಕ್ಕೆ ಸೇರಿದ ಮಕ್ಕಳಿಗೆ ಸೀಟುಗಳನ್ನು ಮೀಸಲಿಡುವುದು ಆರ್ಟಿಕಲ್ 14 ರಲ್ಲಿನ ವರ್ಗೀಕರಣದ ಪರೀಕ್ಷೆಯನ್ನು ತೃಪ್ತಿಪಡಿಸುತ್ತದೆ ಎಂದು ವೇಣುಗೋಪಾಲ್ ವಾದಿಸಿದರು.

English summary
10 per cent reservation for economically weaker sections of society does not erode the rights of SC, ST and Backward Classes, says Attorney-General of India K.K. Venugopal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X