ಮೈಸೂರಿಗರಿಗೆ ಕೃತಜ್ಞತೆ ಸಲ್ಲಿಸಿದ ಯದುವೀರ ಅರಸ್
ಮೈಸೂರು, ಫೆ. 16: ಮೈಸೂರು ಸಂಸ್ಥಾನದ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಯದುವೀರ್ ಗೋಪಾಲರಾಜೇ ಅರಸ್, ತಮ್ಮ ಕರ್ತವ್ಯ ನಿರ್ವಹಣೆಗೆ ಜನತೆಯ ಸಹಕಾರ ಕೋರಿದ್ದಾರೆ.
ತಮ್ಮ ಫೇಸ್ ಬುಕ್ ಪುಟದಲ್ಲಿ ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ತಮ್ಮ ಕರ್ತವ್ಯ ನಿರ್ವಹಣೆಗೆ ಜನರು ಸಹಕರಿಸಬೇಕೆಂದು ತಿಳಿಸಿದ್ದಾರೆ. [ಯದುವೀರ್ ಪರಿಚಯ]

ಏನು ಬರೆದಿದ್ದಾರೆ? : ಆತ್ಮೀಯ ಓದುಗರೆ, ಹಳೇ ಮೈಸೂರು ಭಾಗದ ಜನ ಮೈಸೂರು ಅರಸರ ಮನೆತನದ ಉತ್ತರಾಧಿಕಾರಿಯಾಗಿ ನನ್ನನ್ನು ಒಪ್ಪಿಕೊಳ್ಳುವ ಕುರಿತು ಆತಂಕವಿತ್ತು. ಆದರೆ, ಜನರು ತೋರಿರುವ ಪ್ರೀತಿ, ವಿಶ್ವಾಸದಿಂದ ನನ್ನಲ್ಲಿದ್ದ ಸಂದೇಹ ದೂರವಾಗಿದೆ. ಶುಭ ಹಾರೈಸಿದ ಎಲ್ಲರಿಗೂ ಫೇಸ್ ಬುಕ್ ಮೂಲಕ ಕೃತಜ್ಞತೆ ಸಲ್ಲಿಸಲು ಇಚ್ಛಿಸಿದ್ದೇನೆ. ಒಡೆಯರ್ ಮನೆತನದ ಪರಂಪರೆಯು ಹಿಂದಿನಂತೆಯೇ ಜನರ ಸಹಕಾರದೊಂದಿಗೆ ಮುಂದುವರಿಯಲಿದೆ. ನಾವೆಲ್ಲ ಒಗ್ಗಟ್ಟಾಗಿ ಭವ್ಯ ಇತಿಹಾಸ ಹಾಗೂ ಒಡೆಯರ್ ಪರಂಪರೆಯನ್ನು ಇನ್ನಷ್ಟು ಶ್ರೀಮಂತಗೊಳಿಸೋಣ. ಇದಕ್ಕಾಗಿ ಜನರು ಅಭಿಪ್ರಾಯ, ಸಲಹೆ, ಸೂಚನೆ ನೀಡಬೇಕೆಂದು ಕೋರಿದ್ದಾರೆ. [ಉತ್ತರಾಧಿಕಾರಿ ವಿವಾದಗಳು]
ರಾಣಿ ಪ್ರಮೋದಾ ದೇವಿ ಅವರು ಸುದ್ದಿಗೋಷ್ಠಿ ನಡೆಸಿ ಯದುವೀರ್ ಅರಸ್ ಅವರನ್ನು ಸಂಸ್ಥಾನದ ಉತ್ತರಾಧಿಕಾರಿ ಎಂದು ಘೋಷಿಸಿದ್ದರು. ಫೆ. 23ರಂದು ಯದುವೀರ್ ಅವರನ್ನು ದತ್ತು ಪಡೆಯುವುದಾಗಿ ತಿಳಿಸಿದ್ದರು. [ಕಾಂತರಾಜ ಅರಸ್ ಅಸಮಾಧಾನ]











Click it and Unblock the Notifications