Mysuru: ಮೈಸೂರಿನಲ್ಲಿ ಗ್ಯಾಸ್ ಪೈಪ್‌ಲೈನ್ ಯೋಜನೆ ನೆನೆಗುದಿಗೆ ಬಿದ್ದಿದ್ದೇಕೆ?
ಮೈಸೂರು, ಮೇ 21: ನಗರದಲ್ಲಿ ಪ್ರತಿ ಮನೆಗೆ ಅಡುಗೆ ಗ್ಯಾಸ್ ಅಳವಡಿಸುವ ಯೋಜನೆ ಸದ್ಯಕ್ಕೆ ಮುಂದುವರೆಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಯೋಜನೆ ವಿಚಾರದಲ್ಲಿ ಕೆಲವು ವರ್ಷಗಳ ಹಿಂದೆ ಬಿಜೆಪಿ ಸಂಸದರು ಮತ್ತು ಶಾಸಕರ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಈ ಯೋಜನೆಯನ್ನು ಮುಗಿಸಿಯೇ ಬಿಡುತ್ತೇನೆಂದು ಹೊರಟಿದ್ದ ಸಂಸದ ಪ್ರತಾಪ್ ಸಿಂಹ ಅವರು ಮೂರನೇ ಅವಧಿಗೆ ಸಂಸದರಾಗಲು ಅವಕಾಶ ಮಾಡಿಕೊಡದ ಕಾರಣದಿಂದ ಸದ್ಯಕ್ಕೆ ಈ ಯೋಜನೆ ಮುಂದುವರೆಯುವ ಲಕ್ಷಣಗಳು ಕಾಣುತ್ತಿಲ್ಲ.
ಈ ಯೋಜನೆ ಅನುಷ್ಠಾನ ಗೊಂಡಿದ್ದೇ ಆದಲ್ಲಿ ಪ್ರತಿ ಮನೆ, ಮನೆಗೆ ನಲ್ಲಿ ನೀರಿನಂತೆ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಪೂರೈಕೆಯಾಗುತ್ತದೆ. ಜನರಿಗೆ ಯಾವುದೇ ರೀತಿಯಲ್ಲಿ ಗ್ಯಾಸ್ ಅಭಾವ ಉಂಟಾಗುವುದಿಲ್ಲ. ಅಲ್ಲದೆ ಕಡಿಮೆ ಬೆಲೆಗೆ ಸೌಲಭ್ಯ ದೊರೆಯಲಿದೆ. ಇದರಿಂದ ಗ್ರಾಹಕರಿಗೂ ಅನುಕೂಲವಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳುತ್ತಾ ಬಂದಿದ್ದರು. ಆದರೆ ಈ ಯೋಜನೆಗೆ ಅವತ್ತಿನ ಬಿಜೆಪಿ ಶಾಸಕರೇ ಆಗಿದ್ದ ರಾಮದಾಸ್ ಮತ್ತು ನಾಗೇಂದ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಯೋಜನೆ ಮುಂದುವರೆದಿತ್ತು. ಅವತ್ತು ಆರಂಭವಾದ ಯೋಜನೆ ಮುಂದೆ ಸಾಗಲೇ ಇಲ್ಲ.

ಎಜಿ ಆಂಡ್ ಪಿ ಪ್ರಥಮ್ ಕಂಪನಿ ನಿರ್ವಹಣೆಯಲ್ಲಿರುವ ಕಾಮಗಾರಿ ನಗರದ ರಿಂಗ್ ರಸ್ತೆಯಲ್ಲಿ ನಡೆಯುತ್ತಿದೆ. ಆಯ್ದ ಕೆಲ ಬಡಾವಣೆಗಳಲ್ಲಿ ಈಗಾಗಲೇ ಗ್ಯಾಸ್ ಪೈಪ್‌ಲೈನ್ ಅಳವಡಿಸಿ ಸಂಪರ್ಕ ಕೊಳವೆಗಳನ್ನು ಹಾಕಿದೆ. ಮೀಟರ್ ಅಳವಡಿಸಲು ಸಿದ್ಧತೆ ಕೂಡ ನಡೆದಿದೆ. ಆದರೆ, ಮುಖ್ಯ ಕಾಮಗಾರಿ ಇನ್ನೂ ನಡೆದೇ ಇಲ್ಲ. ಜತೆಗೆ ಮುಂದೆ ಪೈಪ್ಲೈನ್ ಅಳವಡಿಸಲು ರಸ್ತೆ ಅಗೆಯಬೇಕಾಗಿದೆ. ಇದಕ್ಕೆ ಸರ್ಕಾರದಿಂದ ಅನುಮತಿ ದೊರೆತಿಲ್ಲ. ಈ ಕಾರಣದಿಂದ ಯೋಜನೆಗೆ ನಿರೀಕ್ಷಿತ ವೇಗ ಸಿಗದೆ ಆಮೆಗತಿಯಲ್ಲಿ ಸಾಗುತ್ತಿದೆ.
ನಗರಪಾಲಿಕೆ ವ್ಯಾಪ್ತಿಯಲ್ಲಿ ಕಾಮಗಾರಿ ಸ್ಥಗಿತ
ಇನ್ನು ಪೈಪ್‌ಲೈನ್ ಹಾಕಲು ರಸ್ತೆ ಅಗೆಯಬೇಕಿದ್ದು, ಇದಕ್ಕೆ ಸರ್ಕಾರ ನಿಗದಿಪಡಿಸಿರುವ ಶುಲ್ಕಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆಗಾಗಿ ನಗರಾಭಿವೃದ್ಧಿ ಇಲಾಖೆಗೆ ಪಾಲಿಕೆ ಪತ್ರ ಬರೆದಿದೆ. ಆದರೆ, ಅಲ್ಲಿಂದ ಈವರೆಗೆ ಯಾವುದೇ ಉತ್ತರ ಬಾರದಿದ್ದರಿಂದ ಪೈಪ್‌ಲೈನ್ ಕಾಮಗಾರಿ ನನೆಗುದಿಗೆ ಬಿದ್ದಿದೆ. ಇದಕ್ಕೆ ಕಾರಣಗಳೇನು ಎಂಬುದನ್ನು ನೋಡುತ್ತಾ ಹೋದರೆ ನಗರ ಹೊರವಲಯ ಸೇರಿದಂತೆ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ನಿರಾತಂಕವಾಗಿ ನಡೆಯುತ್ತಿರುವ ಕಾಮಗಾರಿ ನಗರಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಸ್ಥಗಿತಗೊಂಡಿದೆ.

ಪೈಪ್‌ಲೈನ್ ಅಳವಡಿಕೆಗೆ ಸರ್ಕಾರ ನಿಗದಿ ಪಡಿಸಿರುವ ಶುಲ್ಕ ಪಾವತಿ ವಿಚಾರದಲ್ಲಿ ಪಾಲಿಕೆ ಅಧಿಕಾರಿಗಳಲ್ಲಿ ಗೊಂದಲ ಉಂಟಾಗಿದೆ. ನಗರಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಅಗೆಯಲು ಪಾಲಿಕೆಗೆ ಒಂದು ಮೀಟರ್‌ಗೆ 2 ಸಾವಿರ ರೂ. ಶುಲ್ಕ ಪಾವತಿಸಬೇಕಿತ್ತು. ಇದರಿಂದ ಕಾಮಗಾರಿ ವೆಚ್ಚ ಹೆಚ್ಚಾಗಲಿದ್ದು, ಜನಸಾಮಾನ್ಯರಿಗೆ ಹೊರೆಯಾಗುತ್ತದೆ. ಆದ್ದರಿಂದ ರಸ್ತೆ ಅಗೆತಕ್ಕೆ ನೀಡುವ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಎಜಿ ಆಂಡ್ ಪಿ ಪ್ರಥಮ್ ಕಂಪನಿ ಅಧಿಕಾರಿಗಳು ಮನವಿ ಮಾಡಿದ್ದಾರೆ.
ದರಕ್ಕೆ ಸಂಬಂಧಿಸಿದಂತೆ ಜಟಾಪಟಿ
ಕಂಪನಿಯ ಮನವಿ ಪುರಸ್ಕರಿಸಿದ್ದ ಸರ್ಕಾರ ಯೋಜನೆ ಪೂರ್ಣಗೊಳ್ಳಲು ಅನುಕೂಲವಾಗುವಂತೆ ಒಂದು ಮೀಟರ್ ರಸ್ತೆ ಅಗೆಯಲು ಒಂದು ರೂ. ಶುಲ್ಕ ಪಾವತಿಸುವಂತೆ ಅನುಮತಿ ನೀಡಿತ್ತು. ಹೀಗಾಗಿ ರಾಜ್ಯದೆಲ್ಲೆಡೆ ಕಂಪನಿ ನಡೆಸುತ್ತಿರುವ ಕಾಮಗಾರಿಗೆ 1 ಮೀ. ರಸ್ತೆ ಅಗೆಯಲು ಒಂದು ರೂ. ಶುಲ್ಕ ಪಡೆಯಲು ಅನುಮತಿ ನೀಡಲಾಗಿದೆ. ಆದರೆ, ಮೈಸೂರು ನಗರ ಪಾಲಿಕೆ 1 ಮೀಟರ್ ರಸ್ತೆ ಅಗೆತಕ್ಕೆ 1 ರೂ. ಶುಲ್ಕ ಪಾವತಿಗೆ ಅನುಮತಿ ನೀಡಿದರೆ ಬೇರೆ ಕಂಪನಿಗಳಿಗೂ ಇದೇ ಅವಕಾಶ ನೀಡಬೇಕಾಗುತ್ತದೆ. ಹೀಗಾಗಿ ರಸ್ತೆ ದುರಸ್ತಿ ಮಾಡಲು ನಗರಪಾಲಿಕೆಗೆ ತೊಂದರೆ ಆಗುತ್ತದೆ. ಆದ್ದರಿಂದ ಮುಂದೆ ತೊಂದರೆ ಆಗದಂತೆ ನೀತಿ ನಿಯಮ ರೂಪಿಸಿ ಅನುಮತಿ ನೀಡುವಂತೆ ಪತ್ರದಲ್ಲಿ ಪಾಲಿಕೆ ಅಧಿಕಾರಿಗಳು ಕೋರಿದ್ದಾರೆ.
ಸದ್ಯ ದರಕ್ಕೆ ಸಂಬಂಧಿಸಿದಂತೆ ಜಟಾಪಟಿಯಿಂದ ಎರಡು ವರ್ಷದಿಂದ ನಗರ ವ್ಯಾಪ್ತಿಯ ವಾರ್ಡ್ಗಳಲ್ಲಿ ಪೈಪ್ ಲೈನ್ ಅಳವಡಿಕೆ ಕಾರ್ಯ ನಿಂತಿದೆ. ನಗರದ 65 ವಾರ್ಡ್ಗಳಲ್ಲಿ 800 ಕಿ.ಮೀ. ಗ್ಯಾಸ್ ಪೈಪ್‌ಲೈನ್ ಅಳವಡಿಸುವ ಬೃಹತ್ ಯೋಜನೆಗೆ ಪಾಲಿಕೆಯಿಂದ ಸಕಾಲದಲ್ಲಿ ಅನುಮತಿ ಸಿಗದೇ ಇರುವುದರಿಂದ ಪ್ರಗತಿ ಕುಂಠಿತಗೊಂಡಿದೆ. ಕೇವಲ ಮೂರು ವಾರ್ಡ್ಗಳಲ್ಲಿ 45 ಕಿ.ಮೀ. ಕಾಮಗಾರಿ ಮಾತ್ರ ಪೂರ್ಣಗೊಂಡಿದೆ.

ಪೈಪ್ ಲೈನ್ ಯೋಜನೆಗೆ ವೇಗ ಸಿಗುತ್ತಾ?
ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಅನಿಲ ಘಟಕ ಸ್ಥಾಪಿಸಿರುವ ಎಜಿ ಆಂಡ್ ಪಿ ಪ್ರಥಮ್ ಕಂಪನಿ, ನಗರದ ರಿಂಗ್ ರಸ್ತೆಯ ಸುತ್ತಲೂ ಪೈಪ್ಲೈನ್ ಅಳವಡಿಕೆ ಕಾಮಗಾರಿ ನಡೆಸಿದೆ. ಕೈಗಾರಿಕಾ ಪ್ರದೇಶಗಳಲ್ಲಿಯೂ ಸಾಕಷ್ಟು ಕೈಗಾರಿಕೆಗಳಿಗೆ ಗ್ಯಾಸ್ ಪೈಪ್‌ಲೈನ್ ಮೂಲಕ ಅನಿಲ ಪೂರೈಕೆ ಮಾಡುತ್ತಿದೆ.
ಅಲ್ಲದೇ ಹೂಟಗಳ್ಳಿ ನಗರಸಭೆ ವ್ಯಾಪ್ತಿಯಲ್ಲಿನ ಬಡಾವಣೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಿ ಪೈಪ್ಲೈನ್ ಕಾಮಗಾರಿ ನಡೆಸಲಾಗುತ್ತಿದೆ. ಅದೇ ಮಾದರಿಯಲ್ಲಿ ನಗರಪಾಲಿಕೆ ವ್ಯಾಪ್ತಿಯಲ್ಲಿಯೂ ದರ ನಿಗದಿಗೆ ಅವಕಾಶ ನೀಡಬೇಕು ಎಂದು ಎಜಿ ಅಂಡ್ ಪಿ ಪ್ರಥಮ್ ಕಂಪನಿಯ ಅಧಿಕಾರಿಗಳು ನಗರಪಾಲಿಕೆಗೆ ಕೋರಿದ್ದಾರೆ.
ಈ ಹಿಂದೆ ಮೇಯರ್ ಆಗಿದ್ದ ಶಿವಕುಮಾರ್ ಅವರ ಅವಧಿಯಲ್ಲಿ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆಗೆ ಚಾಲನೆ ದೊರೆತಿತ್ತು. ಆದರೆ, ರಸ್ತೆ ಅಗೆಯುವ ಸಂಬಂಧ ದರ ನಿಗದಿಯಲ್ಲ ಗೊಂದಲ ಉಂಟಾಗಿರುವ ಪರಿಣಾಮ ಯೋಜನೆ ನೆನೆಗುದಿಗೆ ಬಿದ್ದಿದೆ ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
-
Annamalai: ಅಣ್ಣಾಮಲೈ ಮತ್ತು ರಾಜಕೀಯ ಉನ್ಮಾದ: ಶಿವಕುಮಾರ್ ಮೆಣಸಿನಕಾಯಿ ಬರಹ -
By Election: ಒಬ್ಬರಿಂದ ಪಕ್ಷ ಗೆಲ್ಲಲ್ಲ, ಇದು ಕಾಂಗ್ರೆಸ್ ಸಿದ್ಧಾಂತಕ್ಕೆ ಸಿಗುವ ಜಯ: ಸಲೀಂ ಅಹ್ಮದ್ ಟಾಂಗ್ ಕೊಟ್ಟಿದ್ಯಾರಿಗೆ? -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ -
Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ











Click it and Unblock the Notifications