ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಿ.ನರಸೀಪುರದಲ್ಲಿ ಯಾರ ಪಾಲಿಗೆ ‘ಕೈ’ ಟಿಕೆಟ್: ಆಕಾಂಕ್ಷಿಗಳಲ್ಲಿ ಕಾತರ

|
Google Oneindia Kannada News

ಮೈಸೂರು, ನವೆಂಬರ್‌25: ಮೈಸೂರು ಜಿಲ್ಲೆಯ ತಿ.ನರಸೀಪುರ ವಿಧಾಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಆರಂಭವಾಗಿದ್ದು ಈಗಾಗಲೇ ಜೆಡಿಎಸ್ ಪ್ರಾಬಲ್ಯ ಸಾಧಿಸಿರುವ ಕ್ಷೇತ್ರವನ್ನು ಹೇಗಾದರೂ ಮಾಡಿ ತಮ್ಮ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆಯಾದರೂ ಪಕ್ಷದಲ್ಲಿರುವ ಆಕಾಂಕ್ಷಿಗಳ ದಂಡನ್ನು ಗಮನಿಸಿದರೆ ಒಮ್ಮತದ ಅಭ್ಯರ್ಥಿ ಆಯ್ಕೆ ಕಠಿಣವಾಗಿದೆ.

ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿ ಇರುವ ಕಾರಣ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದರ ಮೇಲೆ ಮುಂದಿನ ರಾಜಕೀಯ ಜಿದ್ದಾಜಿದ್ದಿ ಆರಂಭವಾಗುವ ಸಾಧ್ಯತೆಯಿದೆ. ಒಂದು ವೇಳೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಕಾಣಿಸಿದರೆ ಅದರ ಲಾಭವನ್ನು ಜೆಡಿಎಸ್ ಮತ್ತು ಬಿಜೆಪಿ ಪಡೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಕಾಂಗ್ರೆಸ್ ಈ ವಿಚಾರದಲ್ಲಿ ಯಾವ ರೀತಿಯ ಹೆಜ್ಜೆಯನ್ನಿಡುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

Breaking: ತುಮಕೂರು ಗ್ರಾ. ಶಾಸಕ ಗೌರಿಶಂಕರ್ ವಿರುದ್ಧ ಪ್ರಕರಣBreaking: ತುಮಕೂರು ಗ್ರಾ. ಶಾಸಕ ಗೌರಿಶಂಕರ್ ವಿರುದ್ಧ ಪ್ರಕರಣ

ಹಾಗೆ ನೋಡಿದರೆ ತಿ.ನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಾಧಿಸುವುದರೊಂದಿಗೆ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಪಡೆಯುತ್ತಿದ್ದರು. ಅದಕ್ಕಿಂತ ಹೆಚ್ಚಾಗಿ ಘಟಾನುಘಟಿ ರಾಜಕಾರಣಿ, ಸಿದ್ದರಾಮಯ್ಯ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಡಾ. ಹೆಚ್‍.ಸಿ.ಮಹದೇವಪ್ಪ ಅವರನ್ನು ಜನ ಗೆಲ್ಲಿಸಿಕೊಂಡು ಬಂದಿದ್ದರು. ಹೀಗಾಗಿ ಮಹದೇವಪ್ಪ ಅವರೇ ಕ್ಷೇತ್ರದಲ್ಲಿ ಪಾರುಪತ್ಯ ಸಾಧಿಸಿ ಸುಲಭವಾಗಿಯೇ ವಿಜಯದ ನಗೆ ಬೀರುತ್ತಿದ್ದರು.

ನಂಜನಗೂಡಿನತ್ತ ಮುಖ ಮಾಡಿದ ಹೆಚ್.ಸಿ.ಮಹದೇವಪ್ಪ

ನಂಜನಗೂಡಿನತ್ತ ಮುಖ ಮಾಡಿದ ಹೆಚ್.ಸಿ.ಮಹದೇವಪ್ಪ

ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಡಾ. ಹೆಚ್.ಸಿ.ಮಹದೇವಪ್ಪ ಅವರನ್ನು ನಿರೀಕ್ಷೆ ಮಾಡದಷ್ಟು ಅಂತರದಲ್ಲಿ ಸೋಲಿಸಿದ ಮತದಾರರು,ಹೆಚ್.ಸಿ.ಮಹದೇವಪ್ಪ ಅವರಿಗೆ ರಾಜಕೀಯ ವಿಶ್ರಾಂತಿ ನೀಡಿದ್ದರು. ಅಲ್ಲದೇ ಜೆಡಿಎಸ್‌ನತ್ತ ಒಲವು ತೋರಿದ್ದರು. ಪರಿಣಾಮ ಜೆಡಿಎಸ್‌ನ ಅಶ್ವಿನ್ ಕುಮಾರ್ ಅವರು ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ್ದರು. ಕಳೆದ ಚುನಾವಣೆಯ ಸೋಲಿನ ಬಳಿಕ ಡಾ.ಹೆಚ್.ಸಿ.ಮಹದೇವಪ್ಪ ಅವರು ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಪುತ್ರ ಸುನೀಲ್ ಬೋಸ್ ಅವರನ್ನು ಪ್ರತಿಷ್ಠಾಪಿಸಿದರಲ್ಲದೆ, ಇದೀಗ ಪುತ್ರನಿಗೆ ಮುಂದಿನ ರಾಜಕೀಯ ಭವಿಷ್ಯ ನೀಡುವ ಸಲುವಾಗಿ ಕ್ಷೇತ್ರ ಬಿಟ್ಟು ನಂಜನಗೂಡಿನತ್ತ ಮುಖ ಮಾಡಿದ್ದಾರೆ.

ಸುನೀಲ್ ಬೋಸ್‌ಗೆ ಸೆಡ್ಡು ಹೊಡೆಯಲು ತಯಾರಿ

ಸುನೀಲ್ ಬೋಸ್‌ಗೆ ಸೆಡ್ಡು ಹೊಡೆಯಲು ತಯಾರಿ

ನಂಜನಗೂಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಆಕಾಂಕ್ಷೆ ವ್ಯಕ್ತಪಡಿಸಿರುವ ಮಹದೇವಪ್ಪ ಅವರು ತಿ.ನರಸೀಪುರ ಕ್ಷೇತ್ರದಲ್ಲಿ ಪುತ್ರನನ್ನು ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬೇಕಾದ ತಂತ್ರವನ್ನು ಮಾಡುತ್ತಿದ್ದಾರೆ. ಈಗಾಗಲೇ ತಾವು ನಂಜನಗೂಡಿನಿಂದ, ಪುತ್ರ ಸುನೀಲ್ ಬೋಸ್ ತಿ.ನರಸೀಪುರದಿಂದ ಸ್ಪರ್ಧಿಸಲು ಕೆಪಿಸಿಸಿಗೆ ಟಿಕೆಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಒಂದು ವೇಳೆ ಡಾ.ಹೆಚ್.ಸಿ.ಮಹದೇವಪ್ಪ ಅವರೇ ಕಾಂಗ್ರೆಸ್ ನಿಂದ ಸ್ಪರ್ಧಿಸುವುದಾಗಿದ್ದರೆ, ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಗಳು ಬದಿಗೆ ಸರಿಯುತ್ತಿದ್ದರೇನೋ ಆದರೆ ಪುತ್ರ ಸುನೀಲ್ ಬೋಸ್ ಅವರಿಗೆ ಬಿಟ್ಟು ಕೊಟ್ಟ ಕಾರಣದಿಂದ ಕ್ಷೇತ್ರದಲ್ಲಿರುವ ಎರಡನೇ ಹಂತದ ನಾಯಕರು ಮುಂಚೂಣಿಗೆ ಬರುವ ಪ್ರಯತ್ನ ಮಾಡುತ್ತಿದ್ದು, ಸುನೀಲ್ ಬೋಸ್‌ಗೆ ಸೆಡ್ಡು ಹೊಡೆದು ತಮಗೂ ಟಿಕೆಟ್ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ.

ಮಹದೇವಪ್ಪ ಪುತ್ರನಿಗೆ ಟಿಕೆಟ್‌ ನಿಡುತ್ತಾ ಕಾಂಗ್ರೆಸ್‌..?

ಮಹದೇವಪ್ಪ ಪುತ್ರನಿಗೆ ಟಿಕೆಟ್‌ ನಿಡುತ್ತಾ ಕಾಂಗ್ರೆಸ್‌..?

ಈಗಾಗಲೇ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವ ಕ್ಷೇತ್ರದ ಕಾಂಗ್ರೆಸ್ ಮುಖಂಡರಿಗೆ ಡಾ.ಹೆಚ್.ಎಸ್.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅವರನ್ನು ಹೊರತು ಪಡಿಸಿ ತಮಗೆ ಟಿಕೆಟ್ ಸಿಗಲ್ಲ ಎಂಬುದು ಗೊತ್ತಿದೆ. ಏಕೆಂದರೆ ಕಾಂಗ್ರೆಸ್‌ನಲ್ಲಿ ಪ್ರಭಾವಿ ರಾಜಕಾರಣಿ ಮತ್ತು ಸಿದ್ದರಾಮಯ್ಯ ಅವರ ಆಪ್ತರಾಗಿರುವ ಕಾರಣ ತಮಗೆ ಮತ್ತು ತಮ್ಮ ಪುತ್ರನಿಗೆ ಟಿಕೆಟ್ ಪಡೆಯೋದು ಮಹದೇವಪ್ಪ ಅವರಿಗೆ ಕಷ್ಟವಾಗದು. ಆದರೆ ಪಕ್ಷಕ್ಕಾಗಿ ದುಡಿಯುತ್ತಿರುವ ಇತರೆ ನಾಯಕರು ಇದನ್ನು ಹೇಗೆ ಸಹಿಸಿಕೊಳ್ಳುತ್ತಾರೋ ಗೊತ್ತಿಲ್ಲ.

ಮೇಲ್ನೋಟಕ್ಕೆ ಕಾಂಗ್ರೆಸ್ ಧುರೀಣ, ಮಾಜಿ ಸಚಿವ ಟಿ.ಎನ್.ನರಸಿಂಹಮೂರ್ತಿ ಅವರ ಮಗ ಮಾಜಿ ವಿಧಾನ ಪರಿಷತ್ ಸದಸ್ಯ ದಿ. ಎನ್. ಮಂಜುನಾಥ್ ರವರ ಪುತ್ರ ಪ್ರಫುಲ್ ಚಂದ್ರ ಅವರು ಕೂಡ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಆಕಾಂಕ್ಷೆ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದಾರೆ. ಇವರು ಎರಡು ತಲೆಮಾರಿನ ರಾಜಕೀಯ ಹಿನ್ನೆಲೆ, ಪರಿಶಿಷ್ಟಜಾತಿಯ ಪ್ರಾತಿನಿಧ್ಯ ಇರುವುದರಿಂದ ಟಿಕೆಟ್ ನನಗೆ ನೀಡುತ್ತಾರೆ ಎಂಬ ವಿಶ್ವಾಸಲ್ಲಿದ್ದಾರೆ.

ಅಶ್ವಿನ್ ಕುಮಾರ್ ಗೆ ಸ್ಪರ್ಧೆ ನೀಡುವ ಎದುರಾಳಿ ಯಾರು..?

ಅಶ್ವಿನ್ ಕುಮಾರ್ ಗೆ ಸ್ಪರ್ಧೆ ನೀಡುವ ಎದುರಾಳಿ ಯಾರು..?

ಇವರ ನಡುವೆ ಮತ್ತೊಬ್ಬ ಸ್ಥಳೀಯ ಕಾಂಗ್ರೆಸ್ ಯುವ ಮುಖಂಡ ನೂತನ್ ಎಂಬುವರು ಕೂಡ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ಡಾ.ಪುಷ್ಪ ಅಮರ್ ನಾಥ್ , ಮಾಜಿ ಸಂಸದ ಧ್ರುವನಾರಾಯಣ್, ಮೂಗೂರು ಚಿನ್ನಸ್ವಾಮಿ ಅವರ ಹೆಸರು ಕೂಡ ಚಾಲ್ತಿಯಲ್ಲಿದೆ. ಕೈಬಿಟ್ಟು ಹೋಗಿರುವ ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ತರಬೇಕೆಂಬ ಆಲೋಚನೆಯಲ್ಲಿರುವ ಕಾಂಗ್ರೆಸ್‌ನ ರಾಜ್ಯ ನಾಯಕರು ತಿ.ನರಸೀಪುರ ಕ್ಷೇತ್ರದಲ್ಲಿ ಹಾಲಿ ಶಾಸಕ ಅಶ್ವಿನ್ ಕುಮಾರ್ ಅವರಿಗೆ ಸ್ಪರ್ಧೆ ನೀಡುವಂತಹ ಯಾವ ನಾಯಕನನ್ನು ಎದುರಾಳಿಯಾಗಿ ನಿಲ್ಲಿಸುತ್ತಾರೆ ಎಂಬುದೇ ಕುತೂಹಲಕಾರಿಯಾಗಿದೆ.

ಗೆಲ್ಲುವ ಕುದುರೆಯನ್ನು ಕಣಕ್ಕಳಿಸುತ್ತಾ ಕಾಂಗ್ರೆಸ್‌

ಗೆಲ್ಲುವ ಕುದುರೆಯನ್ನು ಕಣಕ್ಕಳಿಸುತ್ತಾ ಕಾಂಗ್ರೆಸ್‌

2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಡಾ. ಹೆಚ್.ಸಿ.ಮಹದೇವಪ್ಪ ಸೋಲುಕಂಡಿದ್ದರು. ಕಳೆದ ಬಾರಿ ಜೆಡಿಎಸ್ ಎದುರು ಅರ್ಥಾತ್ ಶಾಸಕ ಅಶ್ವಿನ್ ಕುಮಾರ್ ಎದುರು ಕಾಂಗ್ರೆಸ್ ಬರೋಬ್ಬರಿ 28 ಸಾವಿರ ಮತಗಳಿಂದ ಸೋತಿದೆ. ಹೀಗಾಗಿ ಜೆಡಿಎಸ್ ಗೆ ಸ್ಪರ್ಧೆ ನೀಡುವುದು ಅಷ್ಟು ಸುಲಭದ ಕೆಲಸವಲ್ಲ. ಆದ್ದರಿಂದ ಕಾಂಗ್ರೆಸ್ ಕ್ಷೇತ್ರದಲ್ಲಿ ಗೆಲುವಿನ ಕುದುರೆಯಂತಿರುವ ನಾಯಕನನ್ನು ಕಣಕ್ಕಿಳಿಸಬೇಕಾಗಿದೆ. ಆ ನಾಯಕ ಯಾರು ಎಂಬುದರ ಮೇಲೆ ಮುಂದಿನ ರಾಜಕೀಯ ಬೆಳವಣಿಗೆಗಳು ನಡೆಯಲಿವೆ.

English summary
Who is the Congress candidate in T. Narasipura constituency..? Congress used strategy for defeat JDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X