ಆನೆಯ ಖೆಡ್ಡಕ್ಕೆ ಅಧಿಕಾರಿಯನ್ನೇ ಕೆಡವಿದ ಎಚ್ಡಿ ಕೋಟೆ ಗ್ರಾಮಸ್ಥರು!
ಆನೆಯ ಕಾಟದಿಂದ ಬೇಸತ್ತ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಯನ್ನೇ ಆನೆಯ ಖೆಡ್ಡಕ್ಕೆ ಬೀಳಿಸಿದ ಘಟನೆ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ಬಳಿ ಬುಧವಾರ (ಮೇ 24) ನಾಗರಹೊಳೆ ಅರಣ್ಯದ ಬಳಿ ನಡೆದಿದೆ.
ಮೈಸೂರು, ಮೇ 25: ಆನೆಯ ಕಾಟದಿಂದ ಬೇಸತ್ತ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಯನ್ನೇ ಆನೆಯ ಖೆಡ್ಡಕ್ಕೆ ಬೀಳಿಸಿದ ಘಟನೆ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ಬಳಿ ಬುಧವಾರ (ಮೇ 24) ನಾಗರಹೊಳೆ ಅರಣ್ಯದ ಬಳಿ ನಡೆದಿದೆ.
ಪ್ರತಿದಿನವೂ ಹೊಲಕ್ಕೆ ನುಗ್ಗಿ ಬೆಳೆಹಾನಿ ಮಾಡುತ್ತಿದ್ದ ಆನೆಗಳ ಕಾಟ ತಪ್ಪಿಸುವಂತೆ ಇಲ್ಲಿನ ಜನ ಹಲವು ಬಾರಿ ಅರಣ್ಯಾಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದರು. ಆದರೆ ಯಾವುದೇ ರೀತಿಯ ಪ್ರಯೋಜನವಾಗಿರಲಿಲ್ಲ.[ನಾಗರಹೊಳೆ ಅರಣ್ಯದಂಚಿನಲ್ಲಿ ಹಸುವನ್ನು ಕೊಂದ ಹುಲಿ, ಗ್ರಾಮಸ್ಥರ ಆತಂಕ]

ಇದರಿಂದ ರೊಚ್ಚಿಗೆದ್ದ ಜನರು ಅರಣ್ಯಾಧಿಕಾರಿಗಳಿಗೆ ಬುದ್ಧಿ ಕಲಿಸುವ ಉಪಾಯ ಹೂಡಿಸರು. ಅದರಂತೇ, ಮುದಿ ಆನೆಯೊಂದು ತಮ್ಮ ಹೊಲದ ಬಳಿಯ ಕಂದಕದಲ್ಲಿ ಬಿದ್ದಿದೆ ಬಂದು ಕಾಪಾಡಿ ಎಂದು ಸುಳ್ಳು ಸಂದೇಶವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ನೀಡಿದರು. ತಡಮಾಡದೆ, ಲಗುಬಗೆಯಿಂದ ಬಂದ ಅಧಿಕಾರಿ ಕಂದಕ ಇಣುಕುತ್ತಿದ್ದಂತೆಯೇ, ಆತನನ್ನೇ ಕಂದಕಕ್ಕೆ ತಳ್ಳಿದ ಜನ ತಮ್ಮ ಸಿಟ್ಟನ್ನು ವಿಭಿನ್ನ ರೀತಿಯಲ್ಲಿ ತೀರಿಸಿಕೊಂಡಿದ್ದಾರೆ.
ನಂತರ ಅಧಿಕಾರಿಗೆ ತಮ್ಮ ಸಂಕಷ್ಟಗಳನ್ನೆಲ್ಲ ಹೇಳು ಆಕ್ರೋಶದಿಂದ ಮಾತನಾಡಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಕೇಳಿ ಅವರಿಂದ ಭರವಸೆ ಪಡೆದು ಆತನನ್ನು ಸುರಕ್ಷಿತವಾಗಿ ವಾಪಾಸ್ ಕಳಿಸಿದ್ದಾರೆ. ಒಟ್ಟಿನಲ್ಲಿ ಬಾಯಿಮಾತಿನಲ್ಲಿ ಮಾತು ಕೇಳದ ಅಧಿಕಾರಿಗಳನ್ನು ಖೆಡ್ಡಕ್ಕೆ ಬೀಳಿಸಿ ಬುದ್ಧಿ ಕಲಿಸುವ ಈ ಜನರ ಬುದ್ಧಿವಂತಿಕೆಗೆ ತಲೆಬಾಗಲೇಬೇಕು.












Click it and Unblock the Notifications