ಬಿ.ಎಲ್‌.ಸಂತೋಷ್‌ ಕಪಿಮುಷ್ಠಿಯಲ್ಲಿ ಬಿಜೆಪಿ, ವರುಣದಲ್ಲಿ ಸೋಮಣ್ಣ ಹರಕೆ ಕುರಿ: ಸಿದ್ದರಾಮಯ್ಯ

ಮೈಸೂರು, ಏಪ್ರಿಲ್‌, 18: ರಾಜ್ಯ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದ್ದು, ಆಡಳಿತ ಪಕ್ಷ ಮತ್ತು ವಿಪಕ್ಷ ನಾಯಕರ ನಡುವೆ ವಾಗ್ವಾದಗಳು ನಡೆಯುತ್ತಲೇ ಇವೆ. ಅದೆ ರೀತಿ ಸೋಮಣ್ಣನ ಹರಕೆ ಕುರಿ ಮಾಡಲು ವರುಣ ಕ್ಷೇತ್ರದಲ್ಲಿ ತಂದು ನಿಲ್ಲಿಸಿದ್ದಾರೆ. ಬಿಜೆಪಿ ಬಿ.ಎಲ್.ಸಂತೋಷ್ ಕಪಿಮುಷ್ಠಿಯಲ್ಲಿ ಸಿಲುಕಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಒಬ್ಬ ದುಡ್ಡಿರುವ ವ್ಯಕ್ತಿಯನ್ನು ಕರೆತಂದು ವರುಣದಲ್ಲಿ ನಿಲ್ಲಿಸಿದೆ. ವಿ.ಸೋಮಣ್ಣ ವರುಣ ಕ್ಷೇತ್ರದ ಮತದಾರನಲ್ಲ. ಅವರು ಹೊರಗಿನವರು, ನಾನು ಸ್ಥಳೀಯನಾಗಿದ್ದೇನೆ ಎಂದು ಟಾಂಗ್ ನೀಡಿದರು.

What is V.Somannas contribution to Varuna Constituency?: Siddaramaiah

ರಾಜ್ಯದಲ್ಲಿ 100ಕ್ಕೆ 200ರಷ್ಟು ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ 60 ಸೀಟುಗಳನ್ನು ದಾಟುವುದಿಲ್ಲ. ಜಗದೀಶ್ ಶೆಟ್ಟರ್, ಸವದಿ ಸೇರಿ ಹಿರಿಯ ನಾಯಕರಿಗೆ ಟಿಕೆಟ್ ನೀಡಿಲ್ಲ. ಹಿರಿಯ ನಾಯಕರನ್ನೇ ಕಡೆಗಣಿಸಿದ್ದು, ಬಿಜೆಪಿಗೆ ಹಿನ್ನೆಡೆ ಆಗಲಿದೆ. ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದು ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಡಿಸಿದರು.

ವರುಣ ಕ್ಷೇತ್ರದಲ್ಲಿ ಈಗಾಗಲೇ ಎರಡು ಬಾರಿ ಸ್ಪರ್ಧಿಸಿದ್ದೇನೆ. ಜನರು ಬಹುಮತದಿಂದ ಗೆಲ್ಲಿಸಿದ್ದಾರೆ. ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಖಂಡಿತವಾಗಿಯೂ ಜನರು ನನ್ನನ್ನು ಬೆಂಬಲಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂದರು.

ನಾನು ವರುಣ ಕ್ಷೇತ್ರದ ಮನೆ ಮಗ

ನಾನು ವರುಣಾ ಕ್ಷೇತ್ರದ ಮನೆಮಗನಾಗಿದ್ದೇನೆ. ಬಿಜೆಪಿಯ ಯಾವ ತಂತ್ರವೂ ಇಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಇಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ. ಜನರ ಜೊತೆ ಸದಾ ಒಡನಾಟದಲ್ಲಿದ್ದೇನೆ. ಬಿಜೆಪಿಯವರು ಚುನಾವಣೆ ಸಮಯದಲ್ಲಿ ಬಂದು ಆಶ್ವಾಸನೆ ನೀಡುತ್ತಿದ್ದಾರೆ. ಎಲ್ಲವನ್ನೂ ಜನರು ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಸವಾಲು ಹಾಕಿದರು.

ಸೋಮಣ್ಣ ನೀಡಿರುವ ಕೊಡುಗೆ ಏನು?

ಬಿ.ಎಲ್.ಸಂತೋಷ್ ಮಾತು ಕೇಳಿ ವಿ.ಸೋಮಣ್ಣ ಅವರು ಬಂದಿದ್ದಾರೆ. ಗೋವಿಂದರಾಜನಗರದಿಂದ ಓಡಿಸಿ ವರುಣದಲ್ಲಿ ನಿಲ್ಲಿಸಿದ್ದಾರೆ. ವರುಣ ಕ್ಷೇತ್ರಕ್ಕೆ ವಿ.ಸೋಮಣ್ಣ ನೀಡಿರುವ ಕೊಡುಗೆ ಏನು.? ಅವರು ವರುಣಕ್ಕೆ ಒಂದು ಮನೆ ನೀಡಿದ್ದಾರಾ? ಸೂರಿಲ್ಲದವರಿಗೆ ಸೂರು ಒದಗಿಸಿದ್ದಾರಾ.? ಎಂದು ಪ್ರಶ್ನಿಸುವ ಮೂಲಕ ಜಾಡಿಸಿದ್ದಾರೆ.

ನಾಳೆ ಸಿದ್ದರಾಮಯ್ಯ ನಾಮಪತ್ರ ಸಲ್ಲಿಕೆ

ಬುಧವಾರ (ಏಪ್ರಿಲ್‌ 18) ಸಿದ್ದರಾಮಯ್ಯ ಅವರು ನಾಮಪತ್ರ ಸಲ್ಲಿಕೆ ಮಾಡಲಿದ್ದು, ಅಪಾರ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ಕಾಂಗ್ರೆಸ್ ಸಜ್ಜಾಗಿದೆ. ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದ್ದು, ಸೋಮಣ್ಣ ಹಾಗೂ ಯತೀಂದ್ರ ಇಬ್ಬರು ಕಾಲಿಗೆ ಚಕ್ರ ಕಟ್ಟಿಕೊಂಡು ಎಲ್ಲೆಡೆ ಪ್ರಚಾರ ಮಾಡುತ್ತಿದ್ದಾರೆ.

ವರುಣಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸೋಮಣ್ಣ ಪ್ರಚಾರ

ಮತ್ತೊಂದೆಡೆ ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಲವಾರು ಗ್ರಾಮಗಳಲ್ಲಿ ಮಂಗಳವಾರ ದಿನವಿಡೀ ಬಿಜೆಪಿ ಅಭ್ಯರ್ಥಿಯಾದ ಸಚಿವ ವಿ.ಸೋಮಣ್ಣ ಭರ್ಜರಿ ಚುನಾವಣಾ ಪ್ರಚಾರವನ್ನು ಮಾಡಿ ಗಮನ ಸೆಳೆದರು. ಮೊದಲಿಗೆ ಲಿಲಿತಾದ್ರಿಪುರದಲ್ಲಿ ವಿ.ಸೋಮಣ್ಣ ಮತಯಾಚನೆ ಪ್ರಾರಂಭಿಸಿದರು.

ಗ್ರಾಮಕ್ಕೆ ಆಗಮಿಸಿದ ಅವರನ್ನು ಸುಮಾರು 25 ಅಡಿ ಎತ್ತರದ ಭಾರಿ ಗಾತ್ರದ ಸೇಬಿನ ಹಾರವನ್ನು ಕ್ರೇನ್ ಮೂಲಕ ಹಾಕುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ನಂತರ ಗ್ರಾಮದಲ್ಲಿರುವ ಬಸವೇಶ್ವರರ ದೇವಸ್ಥಾನಕ್ಕೆ ಭೇಟಿ ನೀಡಿದ ವಿ.ಸೋಮಣ್ಣ ಪೂಜೆ ಸಲ್ಲಿಸಿದರು.

ಬಳಿಕ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಹಾಗೆಯೇ ಗ್ರಾಮದಲ್ಲಿರುವ ದಲಿತರ ಬಡಾವಣೆಗೆ ಭೇಟಿ ನೀಡಿ, ಅಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಚುನಾವಣಾ ಪ್ರಚಾರ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+