ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಚಾಲನೆ ನೀಡುವ ಹಮ್ ಸಫರ್ ರೈಲಿನ ವಿಶೇಷತೆಗಳೇನು ?

By ಯಶಸ್ವಿನಿ ಎಂ.ಕೆ
|
Google Oneindia Kannada News

Recommended Video

ಮೈಸೂರು - ಉದಯಪುರ್ ಹಮ್ ಸಫರ್ ಎಕ್ಸ್ಪ್ರೆಸ್ ರೈಲಿಗೆ ಮೋದಿಯವರಿಂದ ಇಂದು ಚಾಲನೆ | Oneindia Kannada

ಮೈಸೂರು, ಫೆಬ್ರವರಿ 19 : ಮಾಜಿ ರೈಲ್ವೆ ಸಚಿವ ಸುರೇಶ್‌ ಪ್ರಭು ಕಳೆದ ವರುಷ ಫೆಬ್ರವರಿಯಲ್ಲಿ ರೈಲ್ವೆ ಬಜೆಟ್ ವೇಳೆ ಘೋಷಣೆ ಮಾಡಿದ್ದ ಸಂಪೂರ್ಣ ಹವಾನಿಯಂತ್ರಿತ ಬೋಗಿಗಳನ್ನು ಹೊಂದಿರುವ 'ಹಮ್ ಸಫರ್' ರೈಲಿಗೆ ಮೈಸೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಲಿದ್ದಾರೆ. ಈ ರೈಲಿನ ವಿಶೇಷತೆ ಬಗ್ಗೆ ಮಾಹಿತಿ ಇಲ್ಲಿದೆ.

ಮೋದಿ ಸಮಾವೇಶಕ್ಕೆ ಸರ್ಪಗಾವಲು, ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆಮೋದಿ ಸಮಾವೇಶಕ್ಕೆ ಸರ್ಪಗಾವಲು, ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ

ಐದು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಎರಡು ಹಮ್ ಸಫರ್ ರೈಲುಗಳನ್ನು ರೈಲ್ವೆ ಇಲಾಖೆ ಪರಿಚಯಿಸಿದ್ದು, ಶನಿವಾರ ಮೈಸೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದೆ. ಈ ಹಿನ್ನೆಲೆಯಲ್ಲಿ ಹಮ್ ಸಫರ್ ರೈಲನ್ನು ಸಿಬ್ಬಂದಿ ಅಂತಿಮ ಪರೀಕ್ಷೆಗೆ ಒಳಪಡಿಸಿದ್ದಾರೆ. ಉದಯಪುರ ಸಿಟಿ-ಮೈಸೂರು ಪ್ಯಾಲೇಸ್ ಕ್ವೀನ್ ಹಮ್ ಸಫರ್ ಪ್ರತಿ ಸೋಮವಾರದಿಂದ ರಾತ್ರಿ 9ಕ್ಕೆ ಉದಯಪುರದಿಂದ ಹೊರಟು ಬುಧವಾರ ಸಂಜೆ 4.25ಕ್ಕೆ ಮೈಸೂರು ಸೇರಲಿದೆ.

What are the special features of Ham Safar rail

ಮೈಸೂರು- ಉದಯಪುರ್ ಸಿಟಿ ಪ್ಯಾಲೇಸ್ ಕ್ವೀನ್ ಹಮ್ ಸಫರ್ ರೈಲು(19668) ಪ್ರತಿ ಗುರುವಾರ ಬೆಳಗ್ಗೆ ಮೈಸೂರಿನಿಂದ ಹೊರಟು ಶನಿವಾರ ಬೆಳಗ್ಗೆ 4.45ಕ್ಕೆ ಉದಯಪುರ ತಲುಪಲಿದೆ. ಈ ರೈಲು ಮಂಡ್ಯ, ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಮೀರಜ್, ಪುಣೆ, ವಸಾಯ್ ರಸ್ತೆ, ಸೂರತ್ ವಡೋದರಾ, ರತ್ಲಂ ಮೂಲಕ ಉದಯಪುರ ಸೇರಲಿದೆ.

What are the special features of Ham Safar rail

ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳನ್ನೂ ಈ ರೈಲು ಹಾದುಹೋಗಲಿದೆ. ರೈಲು ಒಟ್ಟು ಎರಡು ಸಾವಿರ ಕಿ.ಮೀ. ಚಲಿಸಲಿದ್ದು, ಅದರಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕಿಲೋಮೀಟರ್ ಕರ್ನಾಟಕದಲ್ಲೇ ಸಂಚರಿಸಲಿದೆ. ಒಟ್ಟು 19 ಬೋಗಿಗಳು ರೈಲಿನಲ್ಲಿದ್ದು, ಈ ಪೈಕಿ 16 ಬೋಗಿಗಳು ಹವಾನಿಯಂತ್ರಣ ವ್ಯವಸ್ಥೆಯನ್ನು ಹೊಂದಿವೆ. ಸೋಮವಾರ ನಗರದ ರೈಲು ನಿಲ್ದಾಣದಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

English summary
PM Narendra Modi will give green signal to Ham Safar Rail in Mysuru on Monday. Here are the special features of rail. It has different type of facilities and features when compared to previous one.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X