'ಹಣವನ್ನು ಕಾರ್ಯಕರ್ತರು ಜನರಿಗೆ ಹಂಚದೆ ಬೆಟ್ಟಿಂಗ್ ಆಡಿದರು'
ಮೈಸೂರು, ಮೇ 21 : ನಾನು ವೋಟು ಹಾಕೋಕೆ ಎಂದು ಕೊಟ್ಟ ಹಣವನ್ನು ನಮ್ಮ ಕಾರ್ಯಕರ್ತರು ಹಂಚದೇ, ಬೆಟ್ಟಿಂಗ್ ಆಡಿದರು, ಅದಕ್ಕೆ ನಾನು ಸೋತೆ ಎಂದು ವಿವಾದಾತ್ಮಾಕ ಹೇಳಿಕೆ ನೀಡಿದ್ದಾರೆ ಹುಣಸೂರು ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಚ್.ಪಿ.ಮಂಜುನಾಥ್.
ಕಾಂಗ್ರೆಸ್ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಹಣವನ್ನು ಚುನಾವಣೆ ವೇಳೆ ಮತದಾರರಿಗೆ ಹಂಚಲು ಕೊಟ್ಟಿದ್ದೆ. ಆದರೆ ಕಾರ್ಯಕರ್ತರು ಬೆಟ್ಟಿಂಗ್ ಆಡಿ ಸೋತಿದ್ದಾರೆ. ಹಣವನ್ನು ತಾವೇ ಉಳಿಸಿಕೊಂಡಿದ್ದರೆ ಸಂತೋಷವಿತ್ತು.
ಆದರೆ ಅವರು ದುಡ್ಡು ಹಾಳು ಮಾಡಿಕೊಂಡಿದ್ದಾರೆ. ಹಣವನ್ನು ದುಪ್ಪಟ್ಟು ಮಾಡಲು ಹೋಗಿ ಸೋತಿದ್ದಾರೆ. ನನ್ನ ಬಳಿ ಕೆಟ್ಟ ಹುಡುಗರಿದ್ದಾರೆ. ಯಾರಾದರೂ ಅವರ ಬೆನ್ನುತಟ್ಟಿ ನನ್ನ ವಿರುದ್ಧ ನಿಲ್ಲವಂತೆ ಹೇಳಿದರೂ ಅವರು ಹಾಗೇ ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಹೈಕಮಾಂಡ್ ಹಾಗೂ ಪಕ್ಷದ ನಿರ್ಧಾರವನ್ನು ಪಾಲಿಸುತ್ತೇನೆ. ನಮ್ಮ ಪಕ್ಷ ಏನು ತೀರ್ಮಾನ ಕೈಗೊಂಡಿದೆಯೋ ಅದಕ್ಕೆ ನಮ್ಮ ಸಹಮತವಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಬೇಕು. ಅವರಿಗೆ ಸಿದ್ದರಾಮಯ್ಯ ಅವರ ಆಶೀರ್ವಾವಿದೆ ಎಂದು ಎಚ್.ಪಿ.ಮಂಜುನಾಥ್ ಮೂರು ಬಾರಿ ಹೇಳಿದರು.












Click it and Unblock the Notifications